ಆ್ಯಪ್ನಗರ

ಲೋ ಬಿಪಿ ಗಾರ್ಮೆಂಟ್ಸ್‌ ಕಾರ್ಮಿಕ ಸಾವು; ಪರಿಹಾರಕ್ಕೆ ಪ್ರತಿಭಟನೆ

ಕಡಿಮೆ ರಕ್ತದೊತ್ತಡದಿಂದ ಗಾರ್ಮೆಂಟ್ಸ್‌ನಲ್ಲಿ ಕೆಲಸನಿರ್ವಹಿಸುವ ವೇಳೆ ಕಳೆದ ಶುಕ್ರವಾರ ಅಸ್ವಸ್ಥತೆಗೀಡಾಗಿದ್ದ ಕಾರ್ಮಿಕನೊಬ್ಬ ಮೃತಪಟ್ಟಿದ್ದು, ಗಾರ್ಮೆಂಟ್ಸ್‌ ಆಡಳಿತ ಮಂಡಳಿ ರಜೆ ನೀಡದೆ ದುಡಿಸಿಕೊಂಡಿದ್ದೇ ಘಟನೆಗೆ ಕಾರಣ ಎಂದು ಆರೋಪಿಸಿ, ಸೂಕ್ತ ಪರಿಹಾರಕ್ಕೆ ಒತ್ತಾಯಿಸಿ ಮೃತನ ಕುಟುಂಬದವರು, ಕಾರ್ಮಿಕ ಸಂಘಟನೆ, ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಅಪೇರಲ್‌ ಪಾರ್ಕ್‌ ಕೈಗಾರಿಕಾ ಪ್ರದೇಶದ ಜೀನ್ಸ್‌ ನಿಟ್‌ ಪ್ರೈವೇಟ್‌ ಲಿಮಿಟೆಡ್‌(ಎಫ್‌ಎಫ್‌ಐ) ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.

Vijaya Karnataka 30 Jan 2019, 10:38 pm
ಕನ್ನಡಪರ ಸಂಘಟನೆಗಳ ಹೋರಾಟಕ್ಕೆ ಮಣಿದು ಪರಿಹಾರ ಘೋಷಣೆ
Vijaya Karnataka Web low blood pleasure garments labour died protest
ಲೋ ಬಿಪಿ ಗಾರ್ಮೆಂಟ್ಸ್‌ ಕಾರ್ಮಿಕ ಸಾವು; ಪರಿಹಾರಕ್ಕೆ ಪ್ರತಿಭಟನೆ


ವಿಕ ಸುದ್ದಿಲೋಕ ದೊಡ್ಡಬಳ್ಳಾಪುರ

ಕಡಿಮೆ ರಕ್ತದೊತ್ತಡದಿಂದ ಗಾರ್ಮೆಂಟ್ಸ್‌ನಲ್ಲಿ ಕೆಲಸನಿರ್ವಹಿಸುವ ವೇಳೆ ಕಳೆದ ಶುಕ್ರವಾರ ಅಸ್ವಸ್ಥತೆಗೀಡಾಗಿದ್ದ ಕಾರ್ಮಿಕನೊಬ್ಬ ಮೃತಪಟ್ಟಿದ್ದು, ಗಾರ್ಮೆಂಟ್ಸ್‌ ಆಡಳಿತ ಮಂಡಳಿ ರಜೆ ನೀಡದೆ ದುಡಿಸಿಕೊಂಡಿದ್ದೇ ಘಟನೆಗೆ ಕಾರಣ ಎಂದು ಆರೋಪಿಸಿ, ಸೂಕ್ತ ಪರಿಹಾರಕ್ಕೆ ಒತ್ತಾಯಿಸಿ ಮೃತನ ಕುಟುಂಬದವರು, ಕಾರ್ಮಿಕ ಸಂಘಟನೆ, ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಅಪೇರಲ್‌ ಪಾರ್ಕ್‌ ಕೈಗಾರಿಕಾ ಪ್ರದೇಶದ ಜೀನ್ಸ್‌ ನಿಟ್‌ ಪ್ರೈವೇಟ್‌ ಲಿಮಿಟೆಡ್‌(ಎಫ್‌ಎಫ್‌ಐ) ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.

ಮೃತ ಕಾರ್ಮಿಕಆಂದ್ರ ಮೂಲದ ಪಿ.ಮನೋಹರರೆಡ್ಡಿ(27) ಎಂಬಾತನಾಗಿದ್ದು, ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೆ ಮದುವೆಯಾಗಿದ್ದ ಎನ್ನಲಾಗಿದೆ. ಕಾರ್ಖಾನೆಯಲ್ಲಿ ಕೆಲಸದ ವೇಳೆಯೇ ಶುಕ್ರವಾರ ಕುಸಿದು ಬಿದ್ದಿದ್ದಾನೆ. ಮೂರು ವರ್ಷಗಳಿಂದ ಈತ ಫ್ಯಾಕ್ಟರಿಯ ಪ್ಯಾಕಿಂಗ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ವಾರ ಈತನಿಗೆ ಅನಾರೋಗ್ಯ ಕಾಡಿದ್ದು, ಮೋಹನರೆಡ್ಡಿ ರಜೆ ಕೇಳಿದಾಗ ಆಡಳಿತ ಮಂಡಲಿ ರಜೆ ನೀಡಲು ನಿರಾಕರಿಸಿದೆ ಎನ್ನಲಾಗಿದೆ.

ಇದರಿಂದ ಮತ್ತಷ್ಟು ಖಿನ್ನತೆಗೊಳಗಾಗಿದ್ದ ರೆಡ್ಡಿ ಅನಾರೋಗ್ಯದಿಂದಲೇ ಎರಡು ದಿನ ಕೆಲಸ ಮಾಡಿದ್ದು, ಕಳೆದ ಶುಕ್ರವಾರ ಪ್ಯಾಕ್ಟರಿಯಲ್ಲೇ ಕೆಲಸ ಮಾಡುತ್ತಾ ಲೋ ಬಿಪಿ ಯಾಗಿ ಕುಸಿದು ಬಿದ್ದು ಅಸ್ವಸ್ಥನಾಗಿದ್ದ. ಆಗ ಕಾರ್ಖಾನೆ ಆಡಳಿತ ಮಂಡಲಿ ಆತನನ್ನು ಆಟೋವೊಂದರಲ್ಲಿ ಕಳುಹಿಸಿಕೊಟ್ಟು ಕೈ ತೊಳೆದುಕೊಂಡಿದ್ದರು ಎಮದು ಪ್ರತಿಭಟನಾಕಾರರು ದೂರಿದರು.

ಮೊದಲಿಗೆ ನಿರಾಕರಣೆ, ನಂತರ ಪರಿಹಾರದ ಭರವಸೆ

ಮೋಹನರೆಡ್ಡಿ ಅಂತ್ಯ ಸಂಸ್ಕಾರ ಮುಗಿಸಿದ ನಂತರ ಮೃತನ ತಂದೆ ವೆಂಕಟರಾಮರೆಡ್ಡಿ 28 ಸೋಮವಾರದಂದು ಪ್ಯಾಕ್ಟರಿಗೆ ಬಂದು ಎಂಡಿ ಸಂಜಯ್‌ ಎಂಬುವವರು ಭೇಟಿ ಮಾಡಿದ್ದಾರೆ. ಮಗನ ಸಾವಿನ ಬಗ್ಗೆ ಕೇಳಿದ್ದಾರೆ. ಮೃತ ಕಾರ್ಮಿಕನ ಕುಟುಂಬಕ್ಕೆ ಸ್ವಾಂತನ ಹೇಳ ಬೇಕಾದ ಸಂಜಯ್‌ ನಮ್ಮ ಕಡೆ ಏನೂ ತಪ್ಪು ಆಗಿಲ್ಲ. ಅಲ್ದೆ ನಿಮ್ಮ ಮಗನ ಸಾವಿಗೂ ನಮಗೂ ಏನೂ ಸಂಬಂಧ ಇಲ್ಲ. ಆದ್ದರಿಂದ ಯಾವುದೇ ರೀತಿಯ ಪರಿಹಾರ ಕೊಡೋದಿಲ್ಲ ಅಂತ ನಿರಾಕರಿಸಿದ್ದರು. ಈ ಕಾರಣಕ್ಕೆ ಪ್ರತಿಭಟನೆ ನಡೆಸಿದವು ಎಂದು ಸಂಘಟನೆಗಳ ಮುಖಂಡರು ತಿಳಿಸಿದರು.

ಕನ್ನಡಪರ ಸಂಘಟನೆಗಳ ಪ್ರತಿಭಟನೆಗೆ ಮಣಿದ ಆಡಳಿತ ಮಂಡಲಿ ಮೃತನ ಕುಟುಂಬಕ್ಕೆ 4.5 ಲಕ್ಷ ರೂ. ಪರಿಹಾರ ಹಾಗೂ ಪಿಎಫ್‌ ಹಾಗು ಕಾರ್ಮಿಕನಿಗೆ ಕಾರ್ಖಾನೆ ನೀಡಬೇಕಾದ ಜೀವನಾಂಶ ಸೇರಿಧಂತೆ ರೂ 3.5 ರೂ ಲಕ್ಷ ನೀಡುವುದಾಗಿ ಭರವಸೆ ನೀಡಿದರು.

3000 ಕಾರ್ಮಿಕರಿಗೆ ಇರೋದು ಕೆಟ್ಟು ನಿಂತ ಒಂದು ಅಂಬ್ಯುಲೆನ್ಸ್‌ ;

ಮೂರು ಸಾವಿರ ಕಾರ್ಮಿಕರು ದುಡಿಯುತ್ತಿರು ಪ್ಯಾಕ್ಟರಿಯಲ್ಲಿ ಕಾರ್ಮಿಕರ ಆರೋಗಕ್ಕಾಗಿ ಇರೋದು ಕೆಟ್ಟು ನಿಂತಿರುಚ ಅಂಬ್ಯುಲೆನ್ಸ್‌. ಮೂರು ತಿಂಗಳಿಂದ ಅಂಬ್ಯುಲೆನ್ಸ್‌ ಕೆಟ್ಟು ನಿಂತು ಮೂಲೆ ಸೇರಿದೆ ಎಂದು ಪ್ರತಿಭಟನಾಕಾರರು ದೂರಿದರು.

ಈ ಸಂದರ್ಭದಲ್ಲಿ ಸುಕಜವೇ ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷ ಕೆ.ಎನ್‌.ಹನುಮಂತರೆಡ್ಡಿ, ತಾ. ಅಧ್ಯಕ್ಷ ಬಿ.ಸಿ.ಚಂದ್ರಪ್ಪ, ಸಂಘದ ಸಿದ್ದಲಿಂಗರಾಜು, ಮಂಜುನಾಥ್‌, ಜಯಕರ್ನಾಟಕ ತಾ.ಅಧ್ಯಕ್ಷ ಎಂ.ಮುನೇಗೌಡ ಮತ್ತು ಪದಾಧಿಕಾರಿಗಳು, ವಿಜಯಕರ್ನಾಟಕ ರಕ್ಷ ಣಾ ವೇದಿಕೆ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ