ಆ್ಯಪ್ನಗರ

ಮಧುರೆ ಕನಸವಾಡಿಯಲ್ಲಿ ವಿಜೃಂಭಣೆಯ ಬ್ರಹ್ಮರಥೋತ್ಸವ

ವಿಕ ಸುದ್ದಿಲೋಕ ದೊಡ್ಡಬಳ್ಳಾಪುರ ತಾಲೂಕಿನ ಪ್ರಸಿದ್ದ ಕ್ಷೇತ್ರ ಮಧುರೆ ಕನಸವಾಡಿಯಲ್ಲಿ ಶ್ರೀಶನಿಮಹಾತ್ಮ ಸ್ವಾಮಿಯ ಬ್ರಹ್ಮರಥೋತ್ಸವ ಶನಿವಾರ ಮಧ್ಯಾಹ್ನ 2 ಗಂಟೆಗೆ ...

Vijaya Karnataka 17 Mar 2019, 5:00 am
ವಿಕ ಸುದ್ದಿಲೋಕ ದೊಡ್ಡಬಳ್ಳಾಪುರ
Vijaya Karnataka Web madure kanasawadi brahmarathotsava is a celebration car festival
ಮಧುರೆ ಕನಸವಾಡಿಯಲ್ಲಿ ವಿಜೃಂಭಣೆಯ ಬ್ರಹ್ಮರಥೋತ್ಸವ


ತಾಲೂಕಿನ ಪ್ರಸಿದ್ದ ಕ್ಷೇತ್ರ ಮಧುರೆ ಕನಸವಾಡಿಯಲ್ಲಿ ಶ್ರೀಶನಿಮಹಾತ್ಮ ಸ್ವಾಮಿಯ ಬ್ರಹ್ಮರಥೋತ್ಸವ ಶನಿವಾರ ಮಧ್ಯಾಹ್ನ 2 ಗಂಟೆಗೆ ವಿಜೃಂಭಣೆಯಿಂದ ನಡೆಯಿತು.

ದೊಡ್ಡಬಳ್ಳಾಪುರ, ಬೆಂಗಳೂರು, ನೆಲಮಂಗಲ ಸೇರಿದಂತೆ ರಾಜ್ಯ ವಿವಿಧಡೆಗಳಿಂದ ಸಹಸ್ರಾರು ಭಕ್ತಾದಿಗಳು ರಥೋತ್ಸವದಲ್ಲಿ ಭಾಗವಹಿಸಿ ಹಣ್ಣು, ದವನ ಸಮರ್ಪಿಸಿ ಧನ್ಯತೆ ಮೆರೆದರು. ಬ್ರಹ್ಮ ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾಗಿದ್ದರು. ಈ ನಿಟ್ಟಿನಲ್ಲಿ ಬಿಗಿ ಪೊಲೀಸ್‌ ಭದ್ರತೆಯನ್ನು ಒದಗಿಸಲಾಗಿತ್ತು. ಉತ್ಸವಕ್ಕೆ ಬಂದ ಸಾವಿರಾರು ಭಕ್ತರಿಗೆ ದೇವಾಲಯ ಅನ್ನದಾಸೋಹ ಭನವದಲ್ಲಿ ಅನ್ನದಾನ ನಡೆಯಿತು.

ಶನಿಮಹಾತ್ಮ ಹಾಗೂ ಜೇಷ್ಠಾದೇವಿಯ ದೇವಾಲಯಗಳಿರುವ ಕನಸವಾಡಿ ಕ್ಷೇತ್ರವು ರಾಜ್ಯದಲ್ಲಿಯೇ ಹೆಸರುವಾಸಿಯಾಗಿದೆ. ಬ್ರಹ್ಮ ರಥೋತ್ಸವದ ಅಂಗವಾಗಿ, ಶನಿಮಹಾತ್ಮ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಾಲಯದಲ್ಲಿ ಯಾಗ, ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ರಥೋತ್ಸವದ ಅಂಗವಾಗಿ ಒಂದು ವಾರ ನಡೆಯಲಿರುವ ಬ್ರಹ್ಮ ರಥೋತ್ಸವದ ವಿಶೇಷ ಕಾರ್ಯಕ್ರಮಗಳಲ್ಲಿ ವಿವಿಧ ಉತ್ಸವ, ನಾಟಕೋತ್ಸವಗಳು ನಡೆಯಲಿವೆ.

ಪಾನಕ, ಕೋಸಂಬರಿ ಹಂಚಿಕೆ;ರಥೋತ್ಸವದಲ್ಲಿ ಭಾಗವಹಿಸಿದ್ದ ಭಕ್ತಾಧಿಗಳಿಗೆ ಸುತ್ತಮುತ್ತಲಿನ ಗ್ರಾಮಗಳಿಂದ ಬಂದಿದ್ದ ಎತ್ತಿನ ಗಾಡಿಗಳಲ್ಲಿ ಪಾನಕ, ಕೋಸಂಬರಿಗಳನ್ನು ಭಕ್ತಾಧಿಗಳಿಗೆ ಹಂಚಿಕೆ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ರಥೋತ್ಸವಕ್ಕೂ ಮುನ್ನ ಶ್ರೀಶನಿಮಹಾತ್ಮಸ್ವಾಮಿ ಮೆರವಣಿಗೆ ದೇವರನ್ನು ಪ್ರತಿ ಪಾನಕ ಹಂಚಿಕೆ ಸ್ಥಳಕ್ಕೂ ಹಾಗು ಇಚ್ಛಿಸಿದವರ ಅಂಗಡಿಗಳಿಗೆ ಹೊತ್ತುಕೊಂಡು ಹೋಗಿ ಪೂಜೆ ಸಲ್ಲಿಸಲಾಯಿತು.

7 ದಿನಗಳ ಕಾಲ ವಿವಿಧ ಉತ್ಸವ, ನಾಟಕೋತ್ಸವ;

ಮಾ.15ರಿಂದ ಆರಂಭವಾಗಿರುವ ವಿವಿಧ ಪೌರಾಣಿಕ ನಾಟಕಗಳ ಮಾ.21ರವರೆಗೆ ನಡೆಯಲಿದೆ. ಮಾರ್ಚ್‌ 17ರಂದು ರಾತ್ರಿ 9 ಗಂಟೆಯ ನಂತರ ಶನಿಮಹಾತ್ಮ ಮತ್ತು ಶ್ರೀಆಂಜನೇಯಸ್ವಾಮಿ ಬೆಳ್ಳಿರಥೋತ್ಸವ ಹಾಗೂ ಮೊಬೈಲ್‌ ವಾದ್ಯಗೋಷ್ಠಿ ನಡೆಯಲಿದೆ. ಮಾ..18 ಗಂಟೆಗೆ ರಾತ್ರಿ ಶ್ರೀಸ್ವಾಮಿಗೆ ಬೆಳ್ಳಿ ಪಲ್ಲಕ್ಕಿಯ ಉತ್ಸವ, ಬಂಡಯ್ಯನಪಾಳ್ಯದಿಂದ ಕೀಲು ಕುದುರೆ ಉತ್ಸವ ನಡೆಯಲಿದೆ. ಮಾ.19ರಂದು ರಾತ್ರಿ 9 ಗಂಟೆಗೆ ಅಶ್ವÜ ವಾಹನೋತ್ಸವ, ಸಂಗೀತ ಸಂಜೆ ಮತ್ತು ರಾತ್ರಿ 2.30 ಗಂಟೆಗೆ ಅರಸಿಕೆರೆ ರಾಜಕುಮಾರ್‌ ಪ್ರೇಮ್‌ ವರ್ಕ್ಸ್‌ ವತಿಯಿಂದ ಮುದ್ದಿನ ಮರದ ವಿಶೇಷ ಕಾರ್ಯಕ್ರಮ ನಡೆಯಲಿದೆ. ಮಾ.20 ರಂದು ರಾತ್ರಿ 9ಗಂಟೆಗೆ ಕಾಕ ವಾಹನೋತ್ಸವ ಮತ್ತು ಸಂಗೀತೋತ್ಸವ ನಡೆಯಲಿದೆ. ಮಾ.21ರಂದು ಬೆಳಗ್ಗೆ 9ಗಂಟೆಗೆ ಚಂದ್ರ ಮಂಡಲೋತ್ಸವ, ಕೀಲು ಕುದುರೆ ಕಾರ್ಯಕ್ರಮಗಳು ನಡೆಯಲಿವೆ. ಉಳಿದಂತೆ ಮಾ.22 ರ ರಾತ್ರಿ 9 ಗಂಟೆಗೆ ಸುಪ್ರಭಾತೋತ್ಸವ ನಡೆಯಲಿದೆ ಎಂದು ಮಧುರೆ ಶ್ರೀಶನಿಮಹಾತ್ಮ ದೇವಾಲಯ ಕಾರ್ಯಕಾರಿ ಸಮಿತಿ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ