ಆ್ಯಪ್ನಗರ

ಕಾನ್ವೆಂಟ್‌ಗಳಲ್ಲಿ ಕನ್ನಡ ಕಡ್ಡಾಯವಾಗಿಸಿ

ನಗರ/ ಪಟ್ಟಣದ ಇಂಗ್ಲೀಷ್‌ ಮಾದ್ಯಮ ಶಾಲೆಗಳಲ್ಲಿ ಕನ್ನಡ ಕಡ್ಡಾಯವಾಗಿ ದ್ವಿತೀಯ ಭಾಷೆಯಾಗಿ ಕಲಿಸಬೇಕು ಎಂದು ಸಮ್ಮೇಳನಾದ್ಯಕ್ಷ ಬಿ.ಸಿ ಚನ್ನಪ್ಪ ಒತ್ತಾಯಿಸಿದರು.

Vijaya Karnataka 10 Feb 2019, 5:00 am
ಸೂಲಿಬೆಲೆಯಲ್ಲಿ ಹೋಬಳಿ ಮಟ್ಟದ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಬಿ.ಸಿ.ಚನ್ನಪ್ಪ
Vijaya Karnataka Web make kannada mandatory in conventions
ಕಾನ್ವೆಂಟ್‌ಗಳಲ್ಲಿ ಕನ್ನಡ ಕಡ್ಡಾಯವಾಗಿಸಿ


ಸೂಲಿಬೆಲೆ : ನಗರ/ ಪಟ್ಟಣದ ಇಂಗ್ಲೀಷ್‌ ಮಾದ್ಯಮ ಶಾಲೆಗಳಲ್ಲಿ ಕನ್ನಡ ಕಡ್ಡಾಯವಾಗಿ ದ್ವಿತೀಯ ಭಾಷೆಯಾಗಿ ಕಲಿಸಬೇಕು ಎಂದು ಸಮ್ಮೇಳನಾದ್ಯಕ್ಷ ಬಿ.ಸಿ ಚನ್ನಪ್ಪ ಒತ್ತಾಯಿಸಿದರು.

ಸೂಲಿಬೆಲೆ ವಿವೇಕಾನಂದ ಪ್ರೌಢಶಾಲೆ ಆವರಣದಲ್ಲಿ ಶನಿವಾರ ತಾಲೂಕು ಕಸಾಪದಿಂದ ನಡೆದ ಹೋಬಳಿ ಮಟ್ಟದ ಎರಡನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡ ಶಾಲೆಗಳು ಆಂಗ್ಲ ವ್ಯಾಮೋಹಕ್ಕೆ ಸಿಕ್ಕಿ ಕೊಚ್ಚಿ ಹೋಗುತ್ತಿವೆ. .ಗ್ರಾಮೀಣ ಕ್ನನಡ ಶಾಲೆಗಳಲ್ಲಿ ಒಂದು ವಿಷಯವನ್ನಾಗಿ ಇಂಗ್ಲೀಷ್‌ ಕಲಿಸಬೇಕು ಎಂದರು.

ಜಾತ್ರೆಗಳಾಗಬಾರದುಃ ಕನ್ನಡ ಸಮ್ಮೇಳನಗಳು ಬರೀ ಜಾತ್ರೆಗಳಾಗದೆ ಅರ್ಥಪೂರ್ಣ ಗೋಷ್ಠಿಗಳಿಗೆ ವೇದಿಕೆಗಳಾಗಬೇಕು. ಕನ್ನಡದ ನೆಲ,ಜಲ ಸಮಸ್ಯೆಗಳು ಬಂದಾಗ ಸಿಡಿದೇಳುವ ಗಂಡೆದೆಗಳಿಗೆ ಸ್ಪೂರ್ತಿಯಾಗಬೇಕು. ಕನ್ನಡ ಸಾಹಿತ್ಯ ಸಂಸ್ಕೃತಿಗಳನ್ನು ಪಸರಿಸುವ ದೂತರನ್ನು ತಯಾರಿಸುವ ಕಮ್ಮಟಗಳಾಗಬೇಕು ಎಂದು ಆಶಿಸಿದರು.

ಎಂಟು ಜ್ಞಾನಪೀಠ ಪ್ರಶಸ್ತಿಃ ಜಿಪಂ ಸದಸ್ಯ,ಮಾಜಿ ಅಧ್ಯಕ್ಷ ವಿ.ಪ್ರಸಾದ್‌ ಮಾತನಾಡಿ, ಕನ್ನಡ ನಾಡಿನ ಸಂಸ್ಕೃತಿ, ಪರಂಪರೆ ಬಿಂಬಿಸುವಲ್ಲಿ ಕನ್ನಡ ಭಾಷೆಯ ಕೊಡುಗೆ ಅಪಾರ. ಕನ್ನಡ ಭಾಷೆಗೆ 8 ಜ್ಞಾನ ಪೀಠ ಪ್ರಶಸ್ತಿ ದೊರೆತಿದ್ದರೂ, ಕನ್ನಡ ಭಾಷೆಯ ಉಳಿವಿಗಾಗಿ ಹೋರಾಟ ಮಾಡುವ ಪರಿಸ್ಥಿತಿ ಉದ್ಬವವಾಗಿದೆ ಎಂದು ವಿಷಾದಿಸಿದರು.

ಕಸಾಪ ಮಾಜಿ ಅಧ್ಯಕ್ಷ ಹುಲಿಕಲ್‌ ನಟರಾಜ್‌ ಮಾತನಾಡಿ, ಕನ್ನಡ ಮಹತ್ವವನ್ನು ಸಾರಬೇಕಿರುವ ಮಾದ್ಯಮಗಳು ಟಿಆರ್‌ಪಿಗಾಗಿ ಮಾರಾಟದ ಸರಕುಗಳಾಗಿವೆ . ಕನ್ನಡತನವನ್ನು ವಿಶ್ವದ ಎತ್ತರಕ್ಕೆ ಬೆಳೆಸುವಂತ ಕಾರ್ಯಕ್ರಮಗಳು ಮೂಡಿಬರಬೇಕು ಎಂದರು.

ಗಮನಸೆಳೆದ ಕಲಾ ತಂಡಗಳ ಪ್ರದರ್ಶನಃ ಸೂಲಿಬೆಲೆ ಪದವಿ ಕಾಲೇಜು ಆವರಣದಲ್ಲಿ ಕಲಾ ತಂಡಗಳ ಮೂಲಕ ಸಮ್ಮೇಳಾನಧ್ಯಕ್ಷ ರನ್ನೊಳಗೊಂಡಂತೆ ಮೂರು ಎತ್ತಿನಗಾಡಿಗಳಲ್ಲಿ ಗಣ್ಯರನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಮ್ಮೇಳನ ವೇದಿಕೆಗೆ ಕರತರಲಾಯಿತು.ಮನರಂಜನೆಗೆ ಮನಸೋತ ಜನಃ ತಿಮ್ಮರಾಯಪ್ಪ ತಂಡದ ತಮಟೆ,ವಿವೇಕಾನಂದ ಶಾಲೆ ಡೊಳ್ಳು ಕುಣಿತ,ಆನಂದ್‌ ಕಂಸಾಳೆ,ಶಿವಾನಂದ ತಂಡ ಬೊಂಬೆ ಕುಣಿತ,ನಾಗರಾಜ್‌ ತಂಡದಿಂದ ನಡೆದ ಸುಗಮ ಸಂಗೀತ ಜನರ ಮನಸೊರೆಗೊಂಡಿತು.

ಸಾಧಕರಿಗೆ ಸನ್ಮಾನಃ ವಿವಿಧ ಕ್ಷೇತ್ರಗಳಲ್ಲಿಸಾಧನೆ ಮಾಡಿದ ಗಣ್ಯರು,ವಿದ್ಯಾರ್ಥಿಗಳು,ಕನ್ನಡಪರ ಸಂಘಟನೆಗಳ ಮುಖಂಡರನ್ನು ಸನ್ಮಾನಿಸಿ ಗೌರವಿಸಲಾಯಿತು.ಸಾಹಿತಿ ರಾಜಣ್ಣ ಕನ್ನಡ ಪುಸ್ತಕಗಳ ಮಾರಾಟ ಕೇಂದ್ರವನ್ನು ತೆರೆದಿದ್ದರು.ಕನ್ನಡ ಧ್ವಜಗಳೊಂದಿಗೆ ನಡೆಸಿದ ಬೈಕ್‌ ರಾರ‍ಯಲಿ ಗಮನಸೆಳೆಯಿತು

ಸ್ವಾತಂತ್ರ್ಯ ಹೋರಾಟಗಾರ ಸೂ.ರಂ.ರಾಮಯ್ಯ,ಹೊಸಕೋಟೆ ತಾಲೂಕು ಕಸಾಪ ಗೌರವ ಅಧ್ಯಕ್ಷ ತ.ರಾ ವೆಂಕಟೇಶ್‌,ತಾಲೂಕು ಅಧ್ಯಕ್ಷ ಎಂ.ಆರ್‌ ಉಮೇಶ್‌,ಹೋಬಳಿ ಅಧ್ಯಕ್ಷ ಮೇಘ ಸ್ಟುಡಿಯೋ ಆನಂದ್‌,ಗ್ರಾಪಂ ಅಧ್ಯಕ್ಷ ಮರುವೆ ಕೃಷ್ಣಪ್ಪ,ಉಪಾಧ್ಯಕ್ಷ ಮುನಿಕದರಿಪ್ಪ ತಾಪಂ ಸದಸ್ಯ ಡಿ.ಟಿ ವೆಂಕಟೇಶ್‌, ಶಿಕ್ಷ ಕರ ಸಂಘದ ಪ್ರಧಾನ ಕಾರ್ಯದರ್ಶಿ ಮುನಿರಾಜ್‌, ಕಸಾಪ ಮಾಜಿ ಅಧ್ಯಕ್ಷ ಶರಣಪ್ಪ ಕಂಬಳಿ, ಟಿ.ನಾಗರಾಜ್‌,ಟಿ.ಡಿಎನ್‌ ಮೂರ್ತಿ,ಆಶ್ವಥ್‌,ರಂಗ ಕಲಾವಿದ ಡಿ.ಲಕ್ಷ್ಮಿನಾರಾಯಣ್‌,ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ ಪುನೀತಾ ನಟರಾಜ್‌,ಸುನೀತಾ,ರಾಜಶ್ವೇರಿ, ಸುಬ್ರಾಯ್‌ ಸೇಠ್‌,ಅನಂತ್‌ ಪ್ರಭಾಕರ್‌,ಮಧು,ವೆಂಕಟೇಶ್‌,ಪ್ರೇಮಣಿ,ವಾಸುದೇವ್‌,ಆನಂದ್‌,ಶಿಕ್ಷ ಣ ಪೌಂಡೇಷನ್‌ ಸುನೀಲ್‌,ಮುಖ್ಯ ಶಿಕ್ಷ ಕಿ ಜಿ.ಮುನಿಯಪ್ಪ ಸೇರಿದಂತೆ ತಾಲೂಕು,ಹೋಬಳಿ ಕಸಾಪ ಪದಾಧಿಕಾರಿಗಳು, ಸಾಹಿತಿಗಳು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ