ಆ್ಯಪ್ನಗರ

ಜೈಲಿಂದ ಹೊರಗೆ ಬಂದು ಕೊಲೆಯಾದ; ಅಷ್ಟಕ್ಕೂ ನಡೆದಿದ್ದೇನು?

ಕ್ಯಾಂಟರ್‌ ಚಾಲಕನಾಗಿದ್ದ ಮಹೇಶ್‌ ಐದು ವರ್ಷಗಳ ಹಿಂದೆ ತಾವರೆಕೆರೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿನಡೆದಿದ್ದ ಸೂರಿ ಮತ್ತು ಬಾಬು ಎನ್ನುವವರ ಜೋಡಿ ಕೊಲೆಯಲ್ಲಿ ಆರೋಪಿಯಾಗಿ ಜೈಲು ಸೇರಿದ್ದ.

Vijaya Karnataka 9 Sep 2019, 7:20 am
ಬೆಂಗಳೂರು: ಐದು ವರ್ಷಗಳ ಹಿಂದೆ ನಡೆದಿದ್ದ ಜೋಡಿ ಕೊಲೆಯ ದ್ವೇಷಕ್ಕೆ ಮತ್ತೊಂದು ಕೊಲೆಯಾಗಿದೆ. ಕಾಮಾಕ್ಷಿಪಾಳ್ಯದ ನಡು ರಸ್ತೆಯಲ್ಲಿ ಕೆಬ್ಬಹಳ್ಳದ ನಿವಾಸಿ ಮಹೇಶ್‌ಕುಮಾರ್‌ (34) ಎಂಬಾತನನ್ನು ಎದುರಾಳಿ ಗ್ಯಾಂಗ್‌ ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಲೆ ಮಾಡಿದೆ.
Vijaya Karnataka Web Crime knife


ಕ್ಯಾಂಟರ್‌ ಚಾಲಕನಾಗಿದ್ದ ಮಹೇಶ್‌ ಐದು ವರ್ಷಗಳ ಹಿಂದೆ ತಾವರೆಕೆರೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿನಡೆದಿದ್ದ ಸೂರಿ ಮತ್ತು ಬಾಬು ಎನ್ನುವವರ ಜೋಡಿ ಕೊಲೆಯಲ್ಲಿ ಆರೋಪಿಯಾಗಿ ಜೈಲು ಸೇರಿದ್ದ. ಮೂರೂವರೆ ವರ್ಷಗಳ ಕಾಲ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ. ಹೊರಗೆ ಬಂದ ನಂತರ ಕ್ಯಾಂಟರ್‌ ಚಾಲಕ ವೃತ್ತಿಯನ್ನು ಮುಂದುವರೆಸಿದ್ದನಾದರೂ ದ್ವೇಷಕ್ಕಾಗಿ ಕಾತರಿಸುತ್ತಿದ್ದ ಗ್ಯಾಂಗ್‌ ಶುಕ್ರವಾರ ರಾತ್ರಿ ಕೊಲೆ ಮಾಡಿ ಪರಾರಿ ಆಗಿದೆ.

ಕಾಮಾಕ್ಷಿಪಾಳ್ಯದ ಹೆಗ್ಗನಹಳ್ಳಿ ಸಮೀಪ ಗಜಾನನ ನಗರದಲ್ಲಿಶುಕ್ರವಾರ ತಡರಾತ್ರಿ ಬೈಕಿನಲ್ಲಿಮನೆಗೆ ಹೋಗುತ್ತಿದ್ದವನನ್ನು ಹಿಂಬಾಲಿಸಿ ಬಂದ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಈ ಹಿಂದೆ ಕೊಲೆಯಾಗಿದ್ದ ಸೂರಿ ಮತ್ತು ಬಾಬು ಸಹೋದರರು ಅಥವಾ ಸಹಚರರೇ ಕೊಲೆಯಲ್ಲಿ ಭಾಗಿ ಆಗಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐದು ವರ್ಷಗಳ ಹಿಂದೆ ನಡೆದಿದ್ದ ಜೋಡಿ ಕೊಲೆ ಪ್ರಕರಣದಲ್ಲಿಜೈಲು ಸೇರಿದ್ದನಾದರೂ ಜೈಲುವಾಸ ಅನುಭವಿಸಿ ಹೊರಗೆ ಬರುವ ವೇಳೆಗೆ ಹಳೆ ಸಹವಾಸಗಳಿಂದ ದೂರ ಉಳಿಯಲು ನಿರ್ಧರಿಸಿದ್ದ. ಆದರೂ ಹಳೆ ಕೊಲೆಯ ಸೇಡು ಇನ್ನೂ ಜೀವಂತವಾಗಿದ್ದರಿಂದ ಅದೇ ದ್ವೇಷ ಹುಡುಕಿಕೊಂಡು ಬಂದು ಕೊಲೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ