ಆ್ಯಪ್ನಗರ

ರಂಗೇರಿದ ಹೊಸಕೋಟೆ ಉಪ ಚುನಾವಣೆ ಕದನ: ಎಂಟಿಬಿ ನಾಗರಾಜ್‌, ಶರತ್‌ ಬಚ್ಚೇಗೌಡ ನಾಮಪತ್ರ ಸಲ್ಲಿಕೆ

ಹೊಸಕೋಟೆ ಉಪ ಚುನಾವಣೆ ರಂಗೇರಿದೆ. ಕಮಲ ಹಿಡಿದ ಎಂಟಿಬಿ ನಾಗರಾಜ್‌ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಶರತ್ ಬಚ್ಚೇಗೌಡ ಇಬ್ಬರೂ ಗುರುವಾರ ಹೊಸಕೋಟೆ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

Vijaya Karnataka Web 14 Nov 2019, 1:49 pm
ಬೆಂಗಳೂರು ಗ್ರಾಮಾಂತರ: ಹೊಸಕೋಟೆ ತಾಲೂಕು ಕಚೇರಿಯಲ್ಲಿ ಗುರುವಾರ ಎಂಟಿಬಿ ನಾಗರಾಜ್‌ ಹಾಗೂ ಶರತ್‌ ಬಚ್ಚೇಗೌಡ ನಾಮಪತ್ರ ಸಲ್ಲಿಸಿದ್ದಾರೆ. ಕಮಲ ಹಿಡಿದ ಎಂಟಿಬಿ ಬಿಜೆಪಿಯಿಂದ ನಾಮಪತ್ರ ಸಲ್ಲಿಕೆ ಮಾಡಿದರೆ, ಪಕ್ಷೇತರ ಅಭ್ಯರ್ಥಿಯಾಗಿ ಶರತ್‌ ನಾಮಪತ್ರ ಸಲ್ಲಿಕೆ ಮಾಡಿದರು.
Vijaya Karnataka Web mtb nagaraj nomination 2


'ಅನರ್ಹ'ರ ಕೈಯಲ್ಲಿ ಕಮಲ, ಎದೆಯಲ್ಲಿ ತಳಮಳ! ಗೆಲುವಿನ ಭರವಸೆ ತುಂಬಿ ಕಟೀಲ್ ಸಾಂತ್ವನ

ನಾಮಪತ್ರ ಸಲ್ಲಿಸುತ್ತಿರುವ ಎಂಟಿಬಿ ನಾಗರಾಜ್‌


ಹೊಸಕೋಟೆ ಪಟ್ಟಣದ ಅವಿಮುಕ್ತೇಶ್ವರ ದೇವಾಲಯದಲ್ಲಿ ನಾಮಪತ್ರ ಇಟ್ಟು ಪೂಜೆ ಸಲ್ಲಿಸಿದ ಎಂಟಿಬಿ ನಾಗರಾಜ್‌, ಸಾಂಕೇತಿಕವಾಗಿ ಇಂದು ಬಿಜೆಪಿಯಿಂದ ನಾಮಪತ್ರ ಸಲ್ಲಿಕೆ ಮಾಡಿದರು. ಅಲ್ಲದೆ, ಸೋಮವಾರ ಸಹ ಸಲ್ಲಿಕೆ ಮಾಡ್ತೇನೆ. ಸಿಎಂ, ಬಿಜೆಪಿ ಮುಖಂಡರೊಂದಿಗೆ ಸಲ್ಲಿಕೆ ಮಾಡುತ್ತೇನೆ. ಈ ವೇಳೆ ಸಂಸದ ಬಚ್ಚೇಗೌಡರೂ ನನ್ನೊಂದಿಗೆ ಇರುತ್ತಾರೆ. ಈಗಾಗಲೇ ನನಗೆ ಬಿಜೆಪಿ ಬಿ ಫಾರಂ ನೀಡಿದೆ ಎಂದೂ ಎಂಟಿಬಿ ನಾಗರಾಜ್ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಸೇರಿದ ಅನರ್ಹರು: ರೋಷನ್ ಬೇಗ್ ಬಿಟ್ಟು ಮಿಕ್ಕವರೆಲ್ಲರನ್ನೂ ಬರಮಾಡಿಕೊಂಡ ಯಡಿಯೂರಪ್ಪ

ಶರತ್ ಬಚ್ಚೇಗೌಡ ನಾಮಪತ್ರ ಸಲ್ಲಿಕೆ


ಜನತಾ ನ್ಯಾಯಾಲಯದಲ್ಲೂ 'ಅನರ್ಹ'ರು ಗೆಲ್ತಾರಾ? 'ಅನರ್ಹ'ರ ಗೆಲುವೇ ಸರ್ಕಾರದ ಗೆಲುವು!

ಇನ್ನೊಂದೆಡೆ, ಚಿಕ್ಕಬಳ್ಳಾಪುರ ಬಿಜೆಪಿ ಸಂಸದರ ಪುತ್ರ ಶರತ್‌ ಬಚ್ಚೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಡಿಸೆಂಬರ್ 5 ರಂದು ನಡೆಯುವ ಉಪ ಚುನಾವಣೆಯಲ್ಲಿ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಶರತ್ ಸ್ಪರ್ಧಿಸಲಿದ್ದು, ಗುರುವಾರ ಭಾರೀ ಶಕ್ತಿ ಪ್ರದರ್ಶನದೊಂದಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಶರತ್ ಬಚ್ಚೇಗೌಡ ಶಕ್ತಿ ಪ್ರದರ್ಶನ


ಹೊಸಕೋಟೆ ತಾಲೂಕು ಕಚೇರಿಯಲ್ಲಿ ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು. ಉಭಯ ನಾಯಕರ ನಾಮಪತ್ರ ಸಲ್ಲಿಕೆ ಹಿನ್ನೆಲೆ ಹೊಸಕೋಟೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಹೊಸಕೋಟೆ ತಾಲೂಕು ಕಚೇರಿ ಸುತ್ತ ಭಾರೀ ಭದ್ರತೆ ನಿಯೋಜನೆ ಮಾಡಲಾಗಿದೆ. ಎಎಸ್ಪಿ ನೇತೃತ್ವದಲ್ಲಿ ಭದ್ರತೆ ಜತೆಗೆ 4 ಡಿವೈಎಸ್ಪಿ, 10 ಸಿಪಿಐ, 25 ಪಿಎಸ್ಐ, ಮತ್ತು 200 ಪೇದೆಗಳನ್ನು ಈ ವೇಳೆ ನಿಯೋಜನೆ ಮಾಡಲಾಗಿತ್ತು. ಅಲ್ಲದೆ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿತ್ತು.

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಎದುರು ಸ್ವಾಭಿಮಾನಿ ಎಂದು ಸುಮಲತಾ ಹೇಳಿಕೊಂಡಿದ್ದರು. ಅಲ್ಲದೆ, ಭಾರೀ ಅಂತರದಲ್ಲಿ ಗೆಲುವು ಸಾಧಿಸಿ ಸಂಸದೆಯಾಗಿದ್ದಾರೆ. ಇದೇ ರೀತಿ, ಶರತ್‌ ಬಚ್ಚೇಗೌಡ ಸಹ ಸ್ವಾಭಿಮಾನಿ ಎಂದು ಹೇಳಿಕೊಂಡು ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದು, ಅದೇ ರೀತಿ ಪ್ರಚಾರ ಮಾಡಲು ಸಜ್ಜಾಗಿದ್ದಾರೆ. ಈಗಾಗಲೇ ಸ್ವಾಭಿಮಾನಿ ಹೆಸರಿನ ಟಿ - ಶರ್ಟ್‌ಗಳನ್ನು ಹಲವರಿಗೆ ಹಂಚಲಾಗಿದೆ.

ಇನ್ನೊಂದೆಡೆ, ಶರತ್‌ ಬಚ್ಚೇಗೌಡ ಪರ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್‌ ಕುಮಾರಸ್ವಾಮಿ ಬೆಂಬಲ ಘೋಷಿಸಿದ್ದಾರೆ. ಶರತ್ ಬಚ್ಚೇಗೌಡಗೆ ಬೆಂಬಲ ಅಗತ್ಯವಿದ್ದಲ್ಲಿ ನೀಡುವುದಾಗಿ ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ. 15 ಕ್ಷೇತ್ರಗಳ ವಿಧಾನಸಭಾ ಉಪ ಚುನಾವಣೆ ಪೈಕಿ ಹೊಸಕೋಟೆ ಹೊರತುಪಡಿಸಿ 14 ರಲ್ಲಿ ಸ್ಪರ್ಧೆ ಮಾಡುವುದಾಗಿಯೂ ಹೇಳಿಕೊಂಡಿದ್ದಾರೆ.

ಶರತ್‌ ಬಚ್ಚೇಗೌಡ ತಂದೆ ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಸಂಸದರಾಗಿದ್ದು, ಅವರ ಪುತ್ರ ಶರತ್ ಕಮಲ ಪಕ್ಷದ ವಿರುದ್ಧ ತೊಡೆತಟ್ಟಿ ಚುನಾವಣೆಗೆ ನಿಂತಿರುವುದು ಈ ಕ್ಷೇತ್ರದ ಹಾಗೂ ಉಪ ಚುನಾವಣೆಯ ವಿಶೇಷ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ