ಆ್ಯಪ್ನಗರ

ನೆಲಮಂಗಲ: ಪ್ರಧಾನಿ ಕ್ಷೇತ್ರದ ನೀಲೂ ಸಿಂಗ್‌ ಪಿಯು ಪರೀಕ್ಷೆಯಲ್ಲಿ ಟಾಪರ್‌

​​ಪ್ರಧಾನಿ ನರೇಂದ್ರ ಮೋದಿ ಕ್ಷೇತ್ರವಾದ ವಾರಣಾಸಿಯ ನಿವಾಸಿಗಳಾದ ತಂದೆ ಬಿರೇಂಧರ್‌ ಪ್ರತಾಪ್‌ ಸಿಂಗ್‌ ಹಾಗೂ ತಾಯಿ ಸವಿತಾ 9 ವರ್ಷಗಳ ಹಿಂದೆ ನೆಲಮಂಗಲಕ್ಕೆ ಬಂದು ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ.

Vijaya Karnataka Web 18 Jun 2022, 8:41 pm
ನೆಲಮಂಗಲ: ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ನಗರೂರಿನ ಬಿಜಿಎಸ್‌ ಪಿಯು ಕಾಲೇಜಿನ ವಿದ್ಯಾರ್ಥಿನಿ ನೀಲೂ ಸಿಂಗ್‌ 600ಕ್ಕೆ 596 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು ಪೋಷಕರು ಹಾಗೂ ಕಾಲೇಜು ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದ್ದಾರೆ.
Vijaya Karnataka Web ನೀಲೂ ಸಿಂಗ್‌
ನೀಲೂ ಸಿಂಗ್‌


ನೆಲಮಂಗಲ ನಗರ ಜನಪ್ರಿಯ ಬಡಾವಣೆಯಲ್ಲಿ ವಾಸವಾಗಿರುವ ನೀಲೂಸಿಂಗ್‌ ನಗರೂರಿನ ಬಿಜಿಎಸ್‌ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, ದ್ವೀತೀಯ ಪಿಯುಸಿ ಪರೀಕ್ಷೆಯಲ್ಲಿ ಆಂಗ್ಲ ಭಾಷೆಯಲ್ಲಿ 100ಕ್ಕೆ 98, ಹಿಂದಿ 100ಕ್ಕೆ 98, ಅರ್ಥಶಾಸ್ತ್ರ 100ಕ್ಕೆ 100, ವ್ಯವಹಾರ ಅಧ್ಯಯನ 100ಕ್ಕೆ 100, ಕಂಪ್ಯೂಟರ್‌ ಸೈನ್ಸ್‌ 100ಕ್ಕೆ 100, ಲೆಕ್ಕಶಾಸ್ತ್ರ 100ಕ್ಕೆ 100 ಅಂಕ ತೆಗೆಯುವ ಮೂಲಕ ರಾಜ್ಯಕ್ಕೆ ವಾಣಿಜ್ಯ ವಿಭಾಗದಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದಾರೆ.

ಎನ್‌ ಎಚ್‌ 48 ಹೆದ್ದಾರಿ ಜಾಸ್‌ ಟೋಲ್‌ ಹಗಲು ದರೋಡೆ: ಅವಧಿ ಮುಗಿದರೂ ಶುಲ್ಕ ವಸೂಲಿ..!

ಇದೇ ಕಾಲೇಜಿನ ಅಭಿಷೇಕ್‌, ಸಿಂಚನಾ ತಲಾ 590 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ 7ನೇ ರ‍್ಯಾಂಕ್ ಪಡೆದರೇ ವಿಜ್ಞಾನ ವಿಭಾಗದಲ್ಲಿ ನಮ್ರತಾ, ಉಮೇಶ್‌ 588 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ 10ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.

ಶ್ರೀಗಳಿಂದ ನೀಲೂ ಸಿಂಗ್‌ಗೆ ಸನ್ಮಾನ


ಪ್ರಧಾನಿ ಕ್ಷೇತ್ರದ ಹುಡುಗಿ

ಪ್ರಧಾನಿ ನರೇಂದ್ರ ಮೋದಿ ಕ್ಷೇತ್ರವಾದ ವಾರಣಾಸಿಯ ನಿವಾಸಿಗಳಾದ ತಂದೆ ಬಿರೇಂಧರ್‌ ಪ್ರತಾಪ್‌ ಸಿಂಗ್‌ ಹಾಗೂ ತಾಯಿ ಸವಿತಾ 9 ವರ್ಷಗಳ ಹಿಂದೆ ನೆಲಮಂಗಲಕ್ಕೆ ಬಂದು ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಮಗಳು 4ನೇ ತರಗತಿಯವರೆಗೂ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಶಿಕ್ಷಣ ಪಡೆದು ನಂತರ ನೆಲಮಂಗಲ ಸಮೀಪದ ನಗೂರೂರಿನ ಬಿಜಿಎಸ್‌ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿ ಬಿಜಿಎಸ್‌ ಪಿಯು ಕಾಲೇಜಿನಲ್ಲಿ ಪಿಯು ಶಿಕ್ಷಣ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದು ಆದಿಚುಂಚುನಗಿರಿ ಮಠದ ಮಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿ, ಪ್ರಾಂಶುಪಾಲ ಶಾಂತಕುಮಾರ್‌ ಹಾಗೂ ಆಡಳಿತ ಮಂಡಳಿ, ಸ್ಥಳೀಯ ಮುಖಂಡರು ಅಭಿನಂದನೆ ಸಲ್ಲಿಸಿ ಶುಭ ಕೋರಿದ್ದಾರೆ.
ಮುಂಗಾರಿನ ಭರ್ಜರಿ ಮಳೆಯಿಂದ ಪೂರೈಕೆಯಲ್ಲಿ ಕೊರತೆ: ತರಕಾರಿ ದರದಲ್ಲಿ ಏರಿಳಿತ
ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದ ನೀಲೂಸಿಂಗ್‌ ಮಾತನಾಡಿ, ಪೋಷಕರು, ಶಿಕ್ಷಕರು, ಸ್ನೇಹಿತರು ಹಾಗೂ ಕಾಲೇಜು ಆಡಳಿತ ಮಂಡಳಿ ಸಹಕಾರದಿಂದ ಈ ಸಾಧನೆ ಮಾಡಿದ್ದೇನೆ, ಟಾಪ್‌ 10 ರಲ್ಲಿ ರ‍್ಯಾಂಕ್ ಪಡೆಯುವ ವಿಶ್ವಾಸವಿತ್ತು ಮೊದಲ ಸ್ಥಾನ ಬಂದಿರುವುದು ಬಹಳಷ್ಟು ಖುಷಿಯಾಗಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ