ಆ್ಯಪ್ನಗರ

ಆಸ್ಪತ್ರೆಯಿಂದ ಮಠಕ್ಕೆ ಮರಳಿದ ಸಿದ್ಧಗಂಗಾ ಶ್ರೀ

ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ಆರೋಗ್ಯ ತೊಂದರೆಯಿಂದ ಕಳೆದ 13 ದಿನಗಳ ಹಿಂದೆ ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4ರ ಮಾರ್ಗವಾಗಿ ಬುಧವಾರ ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಶ್ರೀಮಠ ತಲುಪಿದರು.

Vijaya Karnataka 20 Dec 2018, 5:00 am
ನೆಲಮಂಗಲ: ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ಆರೋಗ್ಯ ತೊಂದರೆಯಿಂದ ಕಳೆದ 13 ದಿನಗಳ ಹಿಂದೆ ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4ರ ಮಾರ್ಗವಾಗಿ ಬುಧವಾರ ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಶ್ರೀಮಠ ತಲುಪಿದರು.
Vijaya Karnataka Web nelamangala siddaganga seer returned to mutt from hospital
ಆಸ್ಪತ್ರೆಯಿಂದ ಮಠಕ್ಕೆ ಮರಳಿದ ಸಿದ್ಧಗಂಗಾ ಶ್ರೀ


ಚೆನ್ನೈ ಆಸ್ಪತ್ರೆಗೆ ಹೋಗುವಾಗ ಶ್ರೀಗಳು ಗುಣಮುಖರಾಗಬೇಕು ಎಂದು ಪಟ್ಟಣದ ಸಾರ್ವಜನಿಕರು, ಭಕ್ತಾದಿಗಳು ಅಡೇಪೇಟೆಯ ರುದ್ರೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಭಗವಂತನಲ್ಲಿ ಪ್ರಾರ್ಥನೆ ಮಾಡಿದ್ದರು. ಭಕ್ತರ ಇಷ್ಟಾರ್ಥದಂತೆ ಶ್ರೀಗಳು ಗುಣಮುಖರಾಗಿ ಮತ್ತೆ ಮಠಕ್ಕೆ ಬರುವ ವಿಷಯ ತಿಳಿದ ಪಟ್ಟಣದ ಜನರು, ಸಂತೋಷ ವ್ಯಕ್ತಪಡಿಸಿದರು.

ಶ್ರೀಗಳು ಚೆನ್ನೈನಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದು, ನಂತರ ರಾಷ್ಟ್ರೀಯ ಹೆದ್ದಾರಿ 4ರ ಮೂಲಕ ತುಮಕೂರು ಮಠ ತಲುಪುತ್ತಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ, ಹೆದ್ದಾರಿಯುದ್ದಕ್ಕೂ ಸಾವಿರಾರು ಮಂದಿ ಭಕ್ತರು ಕಾದು ಕುಳಿತಿದ್ದರು. ಬೆಂಗಳೂರಿನಿಂದ ತುಮಕೂರಿನವರೆಗೂ ಜೀರೋ ಟ್ರಾಫಿಕ್‌ ಮೂಲಕ ಆಂಬ್ಯುಲೆನ್ಸ್‌ನಲ್ಲಿ ನೆಲಮಂಗಲ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಕರೆದೊಯ್ಯಲಾಯಿತು.

ಸುಂಕ ವಿನಾಯಿತಿ: ಜೀರೋ ಟ್ರಾಫಿಕ್‌ ಇದ್ದ ಕಾರಣ ವಾಹನ ದಟ್ಟಣೆ ಹೆಚ್ಚಾಗಿತ್ತು. ತುಮಕೂರು ರಸ್ತೆಯ ಜಾಸ್‌ ಟೋಲ್‌ನಲ್ಲಿ ಸಾರ್ವಜನಿಕ ವಾಹನಗಳನ್ನು ಟೋಲ್‌ ಸುಂಕವಿಲ್ಲದೆ ಉಚಿತವಾಗಿ ಪ್ರಯಾಣಿಸಲು ಟೋಲ್‌ ಮುಖ್ಯಸ್ಥರು ಅನುವು ಮಾಡಿಕೊಟ್ಟಿದ್ದರಿಂದ ಕೆಲವೇ ನಿಮಿಷಗಳಲ್ಲಿ ಟ್ರಾಫಿಕ್‌ ನಿಯಂತ್ರಣಕ್ಕೆ ಬಂತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ