ಆ್ಯಪ್ನಗರ

ಹೈನುಗಾರಿಕೆಯಲ್ಲಿನಷ್ಟ ಆತ್ಮಹತ್ಯೆ

ಹೈನುಗಾರಿಕೆಯಲ್ಲಿನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿಸಾಲ ಬಾಧೆ ತಾಳಲಾರದೆ ವ್ಯಕ್ತೊಯೊಬ್ಬ ತಾಲೂಕಿನ ಕಾಮೇನಹಳ್ಳಿ ಹೊರ ವಲಯದ ತೋಟದ ಮನೆಯಲ್ಲಿÃ ನೇಣಿಗೆ ಶರಣಾಗಿರುವ ಘಟನೆ ಶುಕ್ರವಾರ ...

Vijaya Karnataka 28 Sep 2019, 5:00 am
ದೊಡ್ಡಬಳ್ಳಾಪುರ: ಹೈನುಗಾರಿಕೆಯಲ್ಲಿನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿಸಾಲ ಬಾಧೆ ತಾಳಲಾರದೆ ವ್ಯಕ್ತೊಯೊಬ್ಬ ತಾಲೂಕಿನ ಕಾಮೇನಹಳ್ಳಿ ಹೊರ ವಲಯದ ತೋಟದ ಮನೆಯಲ್ಲಿÃ ನೇಣಿಗೆ ಶರಣಾಗಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.
Vijaya Karnataka Web person sucide for veternary loss
ಹೈನುಗಾರಿಕೆಯಲ್ಲಿನಷ್ಟ ಆತ್ಮಹತ್ಯೆ


ಮೃತ ವ್ಯಕ್ತಿಯನ್ನು ಕೃಷ್ಣಮೂರ್ತಿ(41) ಎಂದು ಗುರುತಿಸಲಾಗಿದ್ದು, ಬೆಂಗಳೂರಿನ ಬಾಣಸವಾಡಿ ವಾಸಿಯೆಂದು ಹೇಳಲಾಗಿದೆ. ಇಲ್ಲಿನ ಸಾಸಲು ಹೊಬಳಿ ಕಾಮೇನಹಳ್ಳಿ ಗ್ರಾಮದಲ್ಲಿಎರಡು ಎಕರೆ ಭೂಮಿಯನ್ನು ಬೋಗ್ಯಕ್ಕೆ ಪಡೆದು ಹಸು ಮತ್ತು ಕುರಿ ಸಾಕಾಣಿಕೆ ಮಾಡುತ್ತಿದ್ದ. ಹಸು-ಕುರಿ ಸಾಕಾಣಿಕೆ ಉದ್ಯಮದಲ್ಲಿನಷ್ಟ ಹೊಂದಿದ್ದ ಮೃತ ಸಾಲದ ಹೊರೆಯನ್ನು ತಾಳಲಾರದೆ ನೇಣಿಗೆ ಶರಣಾಗಿದ್ದಾನೆ. ಗುರುವಾರ ರಾತ್ರಿಯಿಡಿ ಕುಟುಂಬದವರ ಫೋನ್‌ ಕರೆ ಸ್ವೀಕರಿಸದ ಹಿನ್ನೆಲೆ ಅನು ಮಾನಗೊಂಡ ಅವರ ಅಣ್ಣನು ಮಗನು ಬೆಂಗಳೂರಿಂದ ಇಲ್ಲಿನ ತೋಟದ ಮನೆಗೆ ಶುಕ್ರವಾರ ಬೆಳಗ್ಗೆ 11.30 ಗಂಟೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಮೃತನು ಒಂದುವರೆ ವರ್ಷದ ಹಿಂದಷ್ಟೆ ಮದುವೆಯಾಗಿದ್ದ. ಈ ಕುರಿತು ಹೊಸಹಳ್ಳಿ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ