ಆ್ಯಪ್ನಗರ

ಪರ್ಸ್‌ ಕದ್ದ 'ಪಿಕ್‌ಪಾಕೆಟರ್‌' ಹಿಡಿದು ಬೀದಿಯಲ್ಲೇ ಗೂಸಾ ಕೊಟ್ಟ ಸಾರ್ವಜನಿಕರು!

ಬೆಂಗಳೂರಿನ ನೆಲಮಂಗಲದ ಬಳಿ ನವಯುಗ ಟೋಲ್‌ ಸಮೀಪ ಅಂಗಡಿಯ ಮುಂದೆ ಮಲಗಿದ್ದ ಶಂಕರ್‌ ಎಂಬ ವ್ಯಕ್ತಿಯನ್ನು ಎಚ್ಚರಿಸಿ ಜೇಬಿನಲ್ಲಿದ ಹಣವನ್ನು ಕಳ್ಳತನ ಮಾಡಿ ಪರಾರಿಯಾಗುತಿದ್ದಾಗ ಸಾರ್ವಜನಿಕರು ಸೆರೆಹಿಡಿದಿದ್ದಾರೆ.

Vijaya Karnataka Web 22 Feb 2020, 8:35 pm
ನೆಲಮಂಗಲ ಗ್ರಾಮಾಂತರ: ಪಟ್ಟಣದ ನವಯುಗ ಟೋಲ್‌ ಸಮೀಪ ಅಂಗಡಿಯ ಮುಂದೆ ಮಲಗಿದ್ದ ಶಂಕರ್‌ ಎಂಬ ವ್ಯಕ್ತಿಯನ್ನು ಎಚ್ಚರಿಸಿ ಜೇಬಿನಲ್ಲಿದ ಹಣವನ್ನು ಕಳ್ಳತನ ಮಾಡಿ ಪರಾರಿಯಾಗುತಿದ್ದಾಗ ಸಾರ್ವಜನಿಕರು ಸೆರೆಹಿಡಿದಿದ್ದಾರೆ.
Vijaya Karnataka Web Pickpocket


ಸುಭಾಷ್‌ನಗರದ ಟೋಲ್‌ ಸಮೀಪ ಶನಿವಾರ 10ಗಂಟೆಗೆ ಶಂಕರ್‌ ಜೇಬಿನಲ್ಲಿನ ಹಣ ಕಳ್ಳತನ ಮಾಡುವಾಗ ಓರ್ವ ಸಿಕ್ಕಿಬಿದ್ದರೆ ತಮಿಳುನಾಡಿನ ಟಿ.ಎನ್‌ 53 ಯು 9353 ಎಂಬ ಗಾಡಿಯಲ್ಲಿ18ರಿಂದ 20ವರ್ಷ ವಯಸ್ಸಿನ ಮೂರು ಯುವಕರು ಪರಾರಿಯಾಗಿದ್ದಾರೆ. ಓರ್ವನನ್ನು ಸಾರ್ವಜನಿಕರು ಜೇಬುಗಳ್ಳರಿಗೆ ಗೂಸ ನೀಡುವ ಮೂಲಕ ಟೌನ್‌ಪೊಲೀಸರಿಗೆ ಒಪ್ಪಿಸಿದ್ದಾರೆ.

700 ರೂ ಕಳ್ಳತನ: ನಾಲ್ಕು ಯುವಕರ ತಂಡ ಮೊಬೈಲ್‌ ಹಾಗೂ ಕೇವಲ 700ರೂ ಜೇಬುಗಳ್ಳತನ ಮಾಡಿದ್ದು ಈ ಯುವಕರು ಮಾದಕವ್ಯಸನ, ಮದ್ಯಪಾನ ಹಾಗೂ ಧೂಮಪಾನದ ಚಟಗಳಿಗಾಗಿ ಒಳಗಾಗಿ ಈ ರೀತಿಯ ಕಳ್ಳತನ ಪ್ರಕರಣಗಳಲ್ಲಿಭಾಗಿಯಾಗಿದ್ದಾರೆ ಎನ್ನಲಾಗಿದೆ.

ಪೊಲೀಸ್‌ ಎಎಸ್‌ಐ ಮಗ ಭಾಗಿಯಾಗಿರುವ ಶಂಕೆ?: ಜೇಬುಕಳ್ಳತನ ಮಾಡಿರುವ ತಂಡದಲ್ಲಿ ಪೊಲೀಸ್‌ ಇಲಾಖೆಯ ಸಹಾಯಕ ಪೊಲೀಸ್‌ ಉಪನಿರೀಕ್ಷಕರ ಮಗ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು ಇದರ ಬಗ್ಗೆ ಸ್ಥಳೀಯರು , ಸೆರೆಸಿಕ್ಕಿರುವ ಯುವಕರು ಹಾಗೂ ಪೊಲೀಸರು ಕೂಡ ಮಾಹಿತಿ ನೀಡಿದ್ದಾರೆ.

ಸಬ್‌ಇನ್‌ಸ್ಪೆಕ್ಟರ್‌ ಡಿ.ಆರ್‌ ಮಂಜುನಾಥ್‌ ಪ್ರತಿಕ್ರಿಯಿಸಿ ಜೇಬುಕಳ್ಳತನ ಮಾಡಿದವನನ್ನು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಠಾಣೆಗೆ ಕರೆಸಿ ತನಿಖೆ ಮಾಡಲಾಗುತ್ತದೆ. ಎಎಸ್‌ಐ ಮಗನಾಗಿದ್ದರೂ ಬಿಡುವುದಿಲ್ಲ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ