ಆ್ಯಪ್ನಗರ

ಕ್ಷೇತ್ರದಲ್ಲಿ ಯಾರ ಪರ ಜನರ ಒಲವು ಇದೆಯೋ ಅವರಿಗೇ ಟಿಕೆಟ್: ಯಡಿಯೂರಪ್ಪ ಸ್ಪಷ್ಟನೆ

'ಈ ಬಾರಿ ರಾಜ್ಯದಲ್ಲಿ 150 ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲುವುದು ಖಚಿತವಾಗಿದೆ. ಕೇಂದ್ರ ಸರಕಾರವು ಕೋವಿಡ್‌ ಸಮಯದಲ್ಲಿ ಜನರಿಗೆ ಸಹಾಯ, ಮನೆ - ಮನೆಗೆ ಶೌಚಾಲಯ, ಕೃಷಿಕರ ಆದಾಯ ದುಪ್ಪಟ್ಟು ಮಾಡುವ ನಿಟ್ಟಿನಲ್ಲಿ ಕಾರ್ಯ, ಜನ್‌ ಧನ್‌ ಯೋಜನೆ, ಬುಲೆಟ್‌ ರೈಲು, ಬಡವರಿಗೆ ಕಡಿಮೆ ದರದಲ್ಲಿ ವಿಮಾನ ಯಾನ, ಆಯುಷ್ಮಾನ್‌ ಭಾರತ್‌, ಗಂಗಾ ಶುದ್ಧೀಕರಣ ಯೋಜನೆಗಳನ್ನು ಹೇಳುತ್ತಾ ವಿದೇಶದಲ್ಲಿಯೂ ಮೋದಿಗೆ ಅಪಾರ ಗೌರವವಿದೆ' - ಮಾಜಿ ಸಿಎಂ ಯಡಿಯೂರಪ್ಪ ಗುಣ ಗಾನ

Authored byದಿಲೀಪ್ ಡಿ. ಆರ್. | Vijaya Karnataka 22 Apr 2022, 8:37 pm

ಹೈಲೈಟ್ಸ್‌:

  • ಬಿಜೆಪಿ ಜಿಲ್ಲಾ ಕಾರ್ಯಕರ್ತರ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ಹೇಳಿಕೆ
  • ಕಾರ್ಯಕ್ರಮದಲ್ಲಿ ವಿವಿಧ ಪಕ್ಷಗಳನ್ನು ತೊರೆದ ಯುವಕರು, ಮಹಿಳೆಯರು ಬಿಜೆಪಿ ಸೇರ್ಪಡೆ
  • ವೃತ್ತಗಳು, ರಸ್ತೆಗಳು ಕೇಸರಿಮಯ..! ರಾರಾಜಿಸಿದ ಬಾವುಟ, ಬಂಟಿಂಗ್ಸ್‌, ಬ್ಯಾನರ್‌..!
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web BS Yediyurappa
ಕ್ಷೇತ್ರದಲ್ಲಿ ಯಾರ ಪರ ಜನರ ಒಲವು ಇದೆಯೋ ಅವರಿಗೇ ಟಿಕೆಟ್: ಯಡಿಯೂರಪ್ಪ ಸ್ಪಷ್ಟನೆ
undefinedವಿಜಯಪುರ (ಬೆಂಗಳೂರು ಗ್ರಾಮಾಂತರ): ಈ ಬಾರಿ ವಿಧಾನಸಭೆಗೆ ಕ್ಷೇತ್ರದ ಅಭ್ಯರ್ಥಿಯನ್ನು ಕೇಂದ್ರವೇ ಕ್ಷೇತ್ರವಾರು ಸಮೀಕ್ಷೆ ನಡೆಸಿ, ಯಾರ ಪರ ಒಲವಿರುತ್ತದೆಯೋ ಅಂಥವರಿಗೆ ಟಿಕೆಟ್‌ ನೀಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ತಿಳಿಸಿದರು.
ಪಟ್ಟಣದ ಬಸವೇಶ್ವರ ಪ್ಯಾಲೇಸ್‌ನಲ್ಲಿ ಆಯೋಜಿಸಿದ್ದ ಜಿಲ್ಲಾ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಸಕಲ ಸಿದ್ಧತೆ ಮಾಡಿಕೊಳ್ಳುವ ಜತೆಗೆ ಕಾರ್ಯಕರ್ತರಲ್ಲಿ ಚೈತನ್ಯ ತುಂಬುವ ಕೆಲಸ ಮಾಡಲಾಗುತ್ತಿದೆ. ಈ ಬಾರಿ ರಾಜ್ಯದಲ್ಲಿ 150ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲುವುದು ಖಚಿತವಾಗಿದೆ. ಕೇಂದ್ರ ಸರಕಾರವು ಕೋವಿಡ್‌ ಸಮಯದಲ್ಲಿ ಜನರಿಗೆ ಸಹಾಯ, ಮನೆ - ಮನೆಗೆ ಶೌಚಾಲಯ, ಕೃಷಿಕರ ಆದಾಯ ದುಪ್ಪಟ್ಟು ಮಾಡುವ ನಿಟ್ಟಿನಲ್ಲಿ ಕಾರ್ಯ, ಜನ್‌ ಧನ್‌ ಯೋಜನೆ, ಬುಲೆಟ್‌ ರೈಲು, ಬಡವರಿಗೆ ಕಡಿಮೆ ದರದಲ್ಲಿ ವಿಮಾನ ಯಾನ, ಆಯುಷ್ಮಾನ್‌ ಭಾರತ್‌, ಗಂಗಾ ಶುದ್ಧೀಕರಣ ಯೋಜನೆಗಳನ್ನು ಹೇಳುತ್ತಾ ವಿದೇಶದಲ್ಲಿಯೂ ಮೋದಿಗೆ ಅಪಾರ ಗೌರವವಿದೆ ಎಂದರು.

ಕಲಬುರಗಿಯಲ್ಲಿ ಬಿಜೆಪಿ 'ಮಿಶನ್‌ 150' ವಿಜಯ ಯಾತ್ರೆಗೆ ಕಹಳೆ..! ಸಿಎಂ ಬೊಮ್ಮಾಯಿ ಚಾಲನೆ
ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಮಾತನಾಡಿ, ದೇಶದ ಒಂದೊಂದು ರಾಜ್ಯವೂ ಕಾಂಗ್ರೆಸ್‌ ಮುಕ್ತವಾಗುತ್ತಾ ಬರುತ್ತಿದೆ. ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಕಾಂಗ್ರೆಸ್‌ ಸರಿಯಾದ ನಾಯಕತ್ವ ಇಲ್ಲದ ಪಕ್ಷ. ಇಂತಹ ಪಕ್ಷಗಳು ಎಂದೂ ಗಟ್ಟಿಯಾಗಿ ನೆಲೆಯೂರಲು ಸಾಧ್ಯವಿಲ್ಲ. ಇಡೀ ದೇಶವನ್ನು ಬಿಜೆಪಿ ಮಯವನ್ನಾಗಿ ಮಾಡುವ ಪಣ ತೊಟ್ಟು ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಮುಂದಾಗಬೇಕು. ಯಡಿಯೂರಪ್ಪಾಜೀ ರಾಜ್ಯದಲ್ಲಿ ನಂಬರ್‌ ಒನ್‌ ನಾಯಕ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ. ಸುಧಾಕರ್‌ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಗ್ರಾಮಾಂತರ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳು ಬಿಜೆಪಿ ಗೆಲ್ಲಿಸುವ ಮೂಲಕ ಸಾಧನೆ ತೋರಿಸಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷ 60, 30 ಸ್ಥಾನಗಳನ್ನು ದಾಟಲಾರದು ಎಂದು ತಿಳಿಸಿದರು.

ಹೊಸಪೇಟೆ: 2 ದಿನ ಎಲೆಕ್ಷನ್‌ ಕಾರ್ಯಕಾರಣಿ, 2023ರ ಚುನಾವಣೆಗೆ ರೋಡ್‌ ಮ್ಯಾಪ್‌ ಸಿದ್ಧಪಡಿಸಲಿರುವ ಬಿಜೆಪಿ ನಾಯಕರು
ಕಂದಾಯ ಸಚಿವ ಆರ್‌. ಅಶೋಕ್‌ ಮಾತನಾಡಿ, ನಾವು ಚುನಾವಣೆಗೆ ಸಿದ್ಧರಾಗುತ್ತಿದ್ದೇವೆ. ಆದರೆ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್‌ ನಡುವೆ ಜಗಳವೇ ಅಂತ್ಯವಾಗಿಲ್ಲ. ಇನ್ನು ನಾಯಕತ್ವಕ್ಕಾಗಿ 'ಟೈಟ್‌' ವಾರ್‌ ನಡೆಯುತ್ತಿದೆ ಎಂದರು.

ಕೋಲಾರ ಉಸ್ತುವಾರಿ ಸಚಿವ ಮುನಿರತ್ನ ಮಾತನಾಡಿದರು. ಸಂಸದ ಮುನಿಸ್ವಾಮಿ, ಎಂಎಲ್‌ಸಿ ವೈ. ಎ. ನಾರಾಯಣ ಸ್ವಾಮಿ, ಎಂ. ಬಿ. ನಂದೀಶ್‌, ಎಂ. ಶಂಕರಪ್ಪ, ರಾಜ್ಯ ಕಾರ‍್ಯದರ್ಶಿ ಕೆ. ಎನ್‌. ನವೀನ್‌, ಕೇಶವ ಪ್ರಸಾದ್‌, ಮಾಜಿ ಶಾಸಕರಾದ ಪಿಳ್ಳ ಮುನಿ ಶ್ಯಾಮಪ್ಪ, ಜಿ. ಚಂದ್ರಣ್ಣ ಸೇರಿದಂತೆ ತಾಲೂಕು ಬಿಜೆಪಿ ಅಧ್ಯಕ್ಷ ಸುಂದರೇಶ್‌, ಕಾರ್ಯದರ್ಶಿ ರವಿಕುಮಾರ್‌, ರಾಜ್ಯ ಎಸ್‌. ಸಿ. ಘಟಕದ ಖಜಾಂಚಿ ಎ. ಕೆ. ಪಿ. ನಾಗೇಶ್‌, ರೈತ ಮೋಚಾ ರಾಜ್ಯ ಉಪಾಧ್ಯಕ್ಷ ನಾರಾಯಣ ಗೌಡ, ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್‌. ಎಲ್‌. ಎನ್‌. ಅಶ್ವತ್ಥ ನಾರಾಯಣ್‌, ಜಿಲ್ಲಾ ಮಾಧ್ಯಮ ವಕ್ತಾರ ಪುಷ್ಪ ಶಿವಶಂಕರ್‌, ಟೌನ್‌ ಘಟಕದ ಅಧ್ಯಕ್ಷ ಆರ್‌. ಸಿ. ಮಂಜುನಾಥ್‌, ಜಿಲ್ಲಾ ಕಾರ್ಯದರ್ಶಿ ಕನಕರಾಜು, ತಾಲೂಕು ಉಪಾಧ್ಯಕ್ಷ ರಾಮಕೃಷ್ಣ ಹೆಗಡೆ, ಯುವ ಮೋರ್ಚಾ ಅಧ್ಯಕ್ಷ ಮೋಹನ್‌, ಕುಂದಾಣ ಹೋಬಳಿ ಯುವಮೋರ್ಚಾ ಅಧ್ಯಕ್ಷ ಅರುವನಹಳ್ಳಿ ವೆಂಕಟೇಗೌಡ, ನಾಗರಾಜ್‌ ಹಾಜರಿದ್ದರು.

ದಂಗೆಕೋರರಿಗೆ ಕಾಂಗ್ರೆಸ್‌ ಬೆಂಬಲ

'ರಾಜ್ಯದಲ್ಲಿ ಮುಸ್ಲಿಂ ದಂಗೆಕೋರರಿಗೆ ಕಾಂಗ್ರೆಸ್‌ ಬೆಂಬಲ ನೀಡುತ್ತಿದೆ. ಇನ್ನು ಮುಂದೆ ಯಾರಾದರೂ ಕಲ್ಲು ತೂರಾಟ ಮಾಡಿದರೆ ಬುಲ್ಡೋಜರ್‌, ಜೆಸಿಬಿಗಳ ಮೂಲಕ ಬುದ್ಧಿ ಕಲಿಸಬೇಕಾಗುತ್ತದೆ. ದೇವನಹಳ್ಳಿ ಕ್ಷೇತ್ರವನ್ನು ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಮಾಡಲು ಬಿಡುವುದಿಲ್ಲ. ಕಾರ್ಯಕರ್ತರು ಹುಮ್ಮಸ್ಸಿನಿಂದ ತಮ್ಮ ಕಾರ್ಯಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಕೆಲಸ ಮಾಡಬೇಕು' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಕರೆ ನೀಡಿದರು.
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ