ಆ್ಯಪ್ನಗರ

ರಾಜೀನಾಮೆ ವಿಷಯದಲ್ಲಿ ರಮೇಶ್‌ ಜಾರಕಿಹೊಳಿ ದುಡುಕಬಾರದು: ಬಂಡೆಪ್ಪ ಕಾಶೆಂಪುರ್‌

ಸಮ್ಮಿಶ್ರ ಸರಕಾರದಲ್ಲಿ ರಮೇಶ್‌ ಜಾರಕಿಹೊಳಿಯವರಿಗೆ ತನ್ನದೇ ಆದ ಘನತೆ ಗೌರವವಿದೆ. ಅವರು ರಾಜೀನಾಮೆ ವಿಷಯದಲ್ಲಿ ದುಡುಕಬಾರದು. ಅವರಿಗೆ ತಕ್ಕ ಸ್ಥಾನಮಾನ ದೊರೆಯುತ್ತದೆ ಎಂದು ರಾಜ್ಯ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್‌ ಮಾರ್ಗದರ್ಶನ ಮಾಡಿದರು.

Vijaya Karnataka 25 Dec 2018, 3:32 pm
ನೆಲಮಂಗಲ: ಸಮ್ಮಿಶ್ರ ಸರಕಾರದಲ್ಲಿ ರಮೇಶ್‌ ಜಾರಕಿಹೊಳಿಯವರಿಗೆ ತನ್ನದೇ ಆದ ಘನತೆ ಗೌರವವಿದೆ. ಅವರು ರಾಜೀನಾಮೆ ವಿಷಯದಲ್ಲಿ ದುಡುಕಬಾರದು. ಅವರಿಗೆ ತಕ್ಕ ಸ್ಥಾನಮಾನ ದೊರೆಯುತ್ತದೆ ಎಂದು ರಾಜ್ಯ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್‌ ಮಾರ್ಗದರ್ಶನ ಮಾಡಿದರು.
Vijaya Karnataka Web ramesh should not be involved in resignation bandepa kashmepur
ರಾಜೀನಾಮೆ ವಿಷಯದಲ್ಲಿ ರಮೇಶ್‌ ಜಾರಕಿಹೊಳಿ ದುಡುಕಬಾರದು: ಬಂಡೆಪ್ಪ ಕಾಶೆಂಪುರ್‌


ಪಟ್ಟಣ ಸಮೀಪದ ದಾಸನಪುರ ಎಪಿಎಂಸಿ ಉಪಮಾರುಕಟ್ಟೆ ಸಭಾಂಗಣದಲ್ಲಿ ಎಸ್‌ಬಿಐ ಬ್ಯಾಂಕ್‌ ಉದ್ಘಾಟನೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ರಮೇಶ್‌ ಜಾರಕಿಹೊಳಿ ರಾಜೀನಾಮೆ ವಿಷಯ ಕುರಿತು ಮಾತನಾಡಿದರು.

ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಉತ್ತಮವಾಗಿ ಆಡಳಿತ ನಿರ್ವಹಿಸುತಿದ್ದು, ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತರಲು ಶ್ರಮಿಸುತ್ತಿದ್ದೇವೆ. ಇತ್ತೀಚಿಗೆ ಕಾಂಗ್ರೆಸ್‌ ಪಕ್ಷದ ಎಂಟು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ವಿಚಾರವಾಗಿ ರಮೇಶ್‌ ಜಾರಕಿಹೊಳಿ ರಾಜೀನಾಮೆ ನೀಡುತ್ತಾರೆ ಎಂಬ ಊಹಾಪೋಹಗಳನ್ನು ನಂಬುವ ಅವಶ್ಯಕತೆಯಿಲ್ಲ. ಅವರು ನಮ್ಮ ಆತ್ಮೀಯ ಸ್ನೇಹಿತರು. ಅವರು ತನ್ನದೇ ಆದ ಘನತೆ ಗೌರವ ಕಾಪಾಡಿಕೊಂಡಿದ್ದಾರೆ. ರಾಜೀನಾಮೆ ವಿಷಯದಲ್ಲಿ ದುಡುಕುವುದಿಲ್ಲ ಎಂಬ ಭರವಸೆಯಿದೆ. ಆದರೆ ಪರರ ಮಾತನ್ನು ಕೇಳಿ ಈ ವಿಚಾರದಲ್ಲಿ ದುಡುಕಬಾರದು. ಪಕ್ಷ ಅವರಿಗೆ ಉತ್ತಮ ಸ್ಥಾನಮಾನ ನೀಡುತ್ತದೆ ಎಂದರು.

ರಾಜ್ಯ ನಾಯಕರ ತೀರ್ಮಾನದಿಂದ ಸಚಿವ ಸಂಪುಟ ವಿಸ್ತರಣೆಯಾಗಿಲ್ಲ. ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿಯವರು ಸಚಿವ ಸ್ಥಾನದ ಪಟ್ಟಿಯನ್ನು ಅಂತಿಮಗೊಳಿಸಿದ ನಂತರ ಪ್ರಮಾಣ ವಚನ ಸ್ವೀಕರಿಸಿದ್ದಾರೆ, ಅವರ ತೀರ್ಮಾನದಂತೆ ಉಳಿದ ಸಚಿವ ಅಕಾಂಕ್ಷಿಗಳಿಗೆ ಉತ್ತಮ ಸ್ಥಾನಮಾನ ನೀಡುತ್ತಾರೆ ಎಂದರು.

ವಿಧಾನ ಪರಿಷತ್‌ಸದಸ್ಯ ಬಿ.ಎಮ್‌.ಎಲ್‌ ಕಾಂತರಾಜು ಮಾತನಾಡಿ, ಮಾರುಕಟ್ಟೆಯ ಪ್ರದೇಶದಲ್ಲಿ ನೂತನ ಬ್ಯಾಂಕ್‌ ಉದ್ಘಾಟನೆ ಮಾಡಿರುವ ವ್ಯವಹಾರಕ್ಕೆ ಪ್ರಯೋಜನವಾಗಿದೆ. ಹೆಚ್ಚು ಹೆಚ್ಚು ಹಣವನ್ನು ನಗದು ರೂಪದಲ್ಲಿ ತೆಗೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ, ಬ್ಯಾಂಕ್‌ ಸಮೀಪವಿದ್ದರೆ ವ್ಯಾಪಾರಿಗಳಿಗೆ ಹಾಗೂ ರೈತರಿಗೂ ಬಹಳ ಅನುಕೂಲವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಎಪಿಎಂಸಿ ಮಾರುಕಟ್ಟೆ ಮುಖ್ಯಸ್ಥರಾದ ಶ್ರೀರಾಮರೆಡ್ಡಿ, ಮುನಿರಾಜು, ಬಿರಾದರ್‌, ಕೆ.ಪಿ.ಕುಮಾರ್‌, ಶಿವನಾಣಿ, ಮಲ್ಲಿಕಾರ್ಜುನ್‌, ಪರಮೇಶ್‌, ತಿಪ್ಪೇಸ್ವಾಮಿ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ