ಆ್ಯಪ್ನಗರ

ಕನ್ನಡ ನಾಡಿನ ರಸಿಕರ ಮನ ಗೆದ್ದ ‘ಶಿವಗಂಗೆ’

ಹೆಸರಾಂತ ನಿರ್ದೇಶನದ ಪುಟ್ಟಣ ಕಣಕಗಲ್‌ ನಿರ್ದೇಶನದ, ಅಂಬರೀಶ್‌, ಆರತಿ, ಅಶೋಕ್‌ ಅಭಿನಯದ ಸೂಪರ್‌ ಹಿಟ್‌ ಚಲನಚಿತ್ರ ರಂಗನಾಯಕಿ ಕನ್ನಡ ಚಿತ್ರರಂಗದಲ್ಲೇ ಇತಿಹಾಸವನ್ನು ಸೃಷ್ಟಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೆ. ಆದರೆ ಈ ಚಿತ್ರದಲ್ಲಿರುವ 'ರಂಗನಾಯಕಿ' ಟೈಟಲ್‌ ಸಾಂಗ್‌ ಹಿಂದಿನ ಶೂಟಿಂಗ್‌ ಸ್ಪಾಟ್‌ ಮಾತ್ರ ಬಹುತೇಕರಿಗೆ ನೆನಪಿರುವುದಿಲ್ಲ.

Vijaya Karnataka 11 May 2019, 5:00 am
ಇತಿಹಾಸ ಪ್ರಸಿದ್ಧ ಬೆಟ್ಟದಲ್ಲಿ ರಂಗನಾಯಕಿ ಚಿತ್ರದ ಟೈಟಲ್‌ ಸಾಂಗ್‌ ಶೂಟಿಂಗ್‌
Vijaya Karnataka Web BNG-1005-2-2-DABASPETE  SHOOTING SPOT


ಪ್ರಸನ್ನಕುಮಾರ್‌/ ಹೊನ್ನಶಾಮಯ್ಯ ದಾಬಸಪೇಟೆ

ಹೆಸರಾಂತ ನಿರ್ದೇಶನದ ಪುಟ್ಟಣ ಕಣಕಗಲ್‌ ನಿರ್ದೇಶನದ, ಅಂಬರೀಶ್‌, ಆರತಿ, ಅಶೋಕ್‌ ಅಭಿನಯದ ಸೂಪರ್‌ ಹಿಟ್‌ ಚಲನಚಿತ್ರ ರಂಗನಾಯಕಿ ಕನ್ನಡ ಚಿತ್ರರಂಗದಲ್ಲೇ ಇತಿಹಾಸವನ್ನು ಸೃಷ್ಟಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೆ. ಆದರೆ ಈ ಚಿತ್ರದಲ್ಲಿರುವ 'ರಂಗನಾಯಕಿ' ಟೈಟಲ್‌ ಸಾಂಗ್‌ ಹಿಂದಿನ ಶೂಟಿಂಗ್‌ ಸ್ಪಾಟ್‌ ಮಾತ್ರ ಬಹುತೇಕರಿಗೆ ನೆನಪಿರುವುದಿಲ್ಲ.

'ಕನ್ನಡ ನಾಡಿನ ರಸಿಕರ ಮನವ ಸೂರೇಗೊಂಡ ನಾಯಕಿ....ರಂಗನಾಯಕಿ' ಈ ಹಾಡಿನ ಸಂಪೂರ್ಣ ಚಿತ್ರೀಕರಣವನ್ನು ದಾಬಸ್‌ಪೇಟೆ ಬಳಿಯ ಶಿವಗಂಗೆ ಬೆಟ್ಟದಲ್ಲಿ ಚಿತ್ರೀಕರಿಸಲಾಗಿತ್ತು. ನಾಟಕದಲ್ಲಿ ಅಭಿನಯಿಸುತ್ತಿದ್ದ ನಾಯಕಿ ಅಶೋಕ್‌ ಅವರನ್ನು ವರಿಸಿ ಮದುವೆಯಾದ ಬಳಿಕ ಆಕೆಯನ್ನು ಗಂಡನ ಮನೆಗೆ ಕಳುಹಿಸಿಕೊಡುವ ಸನ್ನಿವೇಶವನ್ನು ಮನಮಿಡಿಯುವಂತೆ ಬೆಟ್ಟದ ಸುತ್ತಮುತ್ತ ಚಿತ್ರೀಕರಿಸಲಾಗಿತ್ತು.

ಬೆಟ್ಟದಲ್ಲಿನ ಕೆಂಪೇಗೌಡ ಹಜಾರ, ನೃತ್ಯ ಮಂಟಪ, ಗಂಗಾಧರೇಶ್ವರ ದೇವರ ಸನ್ನಿದಿ, ಬೆಟ್ಟಕ್ಕೆ ಹತ್ತುವ ಸಾಲುಸಾಲು ಮೆಟ್ಟಿಲುಗಳು, ನೂರೊಂದು ಕಲ್ಯಾಣಿ, ದೊಡ್ಡಕಲ್ಯಾಣಿ, ಬೃಹತ್‌ನಂದಿ ,ಗಣೇಶ ವಿಗ್ರಹ, ಶಾರದಕ್ರಾಸ್‌ ಸ್ಥಳಗಳÜಲ್ಲಿ ಹಾಡಿನ ಚಿತ್ರೀಕರಣ ನಡೆಯಿತು. ನಿರ್ದೇಶಕ ಪುಟ್ಟಣ ಕಣಗಲ್‌ ಅವರು ಬೆಟ್ಟದ ಮೇಲಿನ ರಮಣೀಯ ದೃಶ್ಯಕಾವ್ಯವನ್ನು ಚಿತ್ರದಲ್ಲಿ ತೋರಿಸಿರುವುದು ಇಂದಿಗೂ ಅಚ್ಚಳಿಯದೇ ಉಳಿದಿದೆ.

ಕಣಗಲ್‌ ಪ್ರಭಾಕರ್‌ ಶಾಸ್ತ್ರಿ ಅವರಿಂದ ರಚಿತಗೊಂಡ ಹಾಡಿಗೆ ಎಂ.ರಂಗರಾವ್‌ ಸಂಗೀತ ಸಂಯೋಜಿಸಿದ್ದಾರೆ. ಎಸ್‌.ಪಿ ಬಾಲಸುಬ್ರಮಣ್ಯಂ, ಎಸ್‌.ಪಿ ಜಾನಕಿ ಅವರ ಕಂಠದಲ್ಲಿ ಹೊರಹೊಮ್ಮಿದ ಈ ಹಾಡು ಚಿತ್ರ ರಸಿಗರ ಮನಸೂರೆಗೊಂಡಿತು. 1981ರಲ್ಲಿ ಬಿಡುಗಡೆಗೊಂಡ ಈ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಕೂಡ ಸಿಕ್ಕಿತು.

ನೂರಾರು ಚಿತ್ರಗಳು, ಹತ್ತಾರು ಧಾರವಾಹಿಗಳು

ವರನಟ ಡಾ.ರಾಜಕುಮಾರ್‌ ಅವರ ನಾ ನಿನ್ನ ಮರೆಯಲಾರೆ, ವಿಷ್ಣುವರ್ದನ್‌ ಅಭಿನಯದ ಸೌಭಾಗ್ಯಲಕ್ಷ್ಮಿ, ಅನಂತನಾಗ್‌ ಅವರ ಓಲವೆ ಬದುಕು, ಶಿವರಾಜ್‌ಕುಮಾರ್‌ ನಟನೆಯ ಆನಂದ್‌, ಕುರುಬರರಾಣಿ, ಕಾಂಚನಗಂಗಾ, ನಂಜುಂಡಿ, ಹಗಲುವೇಷ, ಅದೇರಾಗ ಅದೇಹಾಡು. ಕ್ರೇಜಿಸ್ಟಾರ್‌ ರವಿಚಂದ್ರನ್‌ ನಟನೆಯ ರವಿಮಾಮ, ನೀಲಕಂಠ, ಒಂದಾಗೋಣ ಬಾ ಸಿನಿಮಾಗಳ ಶೂಟಿಂಗ್‌ ನಡೆದಿವೆ. ಇದರ ಜತೆಗೆ ರಂಗನಾಯಕಿ, ಉಪಾಸನೆ, ಅದೃಷ್ಟವಂತ, ಗಂಗಾಧರೇಶ್ವರ ಮಹಿಮೆ, ಪಟ್ರೆ ಲವ್‌ ಪದ್ಮ, ಪ್ರಗ್ನೆಟ್‌, ಮನಮೆಚ್ಚಿದ ಹುಡುಗಿ, ದಂಡುಪಾಳ್ಯ, ಹಳೆ ಸಿನಿಮಾಗಳಾದ ಗಂಗೇಗೌರಿ, ಬೇಡರ ಕಣ್ಣಪ್ಪ, ಶಿವಗಂಗೆ ಮಹಿಮೆ ಸೇರಿದಂತೆ ಇನ್ನೂ ಹಲವು ಸಿನಿಮಾಗಳು ಇಲ್ಲಿ ಶೂಟಿಂಗ್‌ ಆಗಿವೆ. ಮಾಂಗಲ್ಯ, ರಾಘವೇಂದ್ರ ವೈಭವ, ಶಿವಕುಮಾರ ಸ್ವಾಮೀಜಿ ಸಾಕ್ಷ ಚಿತ್ರಗಳು ಸೇರಿದಂತೆ ಇನ್ನು ಹಲವು ಧಾರವಾಹಿಗಳು ಚಿತ್ರಿಕರಣಗೊಂಡಿವೆ.


ರಂಗನಾಯಕಿ ಚಿತ್ರದ ಶೂಟಿಂಗ್‌ ಬೆಳಿಗಿನಿಂದ ಸಂಜೆಯವರೆಗೂ ಶಿವಗಂಗೆ ಬೆಟ್ಟದ ಹಜಾರ ಮತ್ತು ಮೆಟ್ಟಿಲುಗಳ ಬಳಿ ನಡೆಯುತ್ತಿತ್ತು. ಒಂದೇ ದೃಶ್ಯವನ್ನು ಹಲವು ಬಾರಿ ಚಿತ್ರೀಕರಿಸಲಾಗುತ್ತಿತ್ತು. ಶೂಟಿಂಗ್‌ ಸನ್ನಿವೇಶವನ್ನು ನಾವೆಲ್ಲ ನೋಡಿ ಎಂಜಾಯ್‌ ಮಾಡುತ್ತಿದ್ದೆವು. ನಟರ ಜೊತೆ ಫೋಟೋ ತೆಗೆಸಿಕೊಳ್ಳುವುದೇ ಒಂದು ಕ್ರೇಜ್‌.

-ಜ್ಯೋತಿ, ಶಿವಗಂಗೆ ನಿವಾಸಿ

..............

ಸೀರಿಯಲ್‌ ಶೂಟಿಂಗ್‌ ಮಾಡುತ್ತಿದ್ದಾಗ ನಾವು ಅದನ್ನು ನೋಡಲು ತೆರಳಿದಾಗ ನಮಗೂ ಅದರಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟಿದ್ದರು.

-ಶಿಲ್ಪ, ಹೊಸಪಾಳ್ಯ

...........

- ಶಿವಗಂಗೆ ಬೆಟ್ಟವೇ ಒಂದು ದೈವ ಭಾವನೆಯಿಂದ ಕೂಡಿದೆ. ನಾಲ್ಕು ದಿಕ್ಕಿನಿಂದಲು ಒಂದೊಂದು ರೀತಿಯಲ್ಲಿ ಕಾಣುವುದರಿಂದ ಇಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋತ ನಟ, ನಿರ್ದೇಶಕ ಎಸ್‌. ನಾರಾಯಣ್‌ ಶಿವಗಂಗೆಯ ತಪ್ಪಲಲ್ಲಿ ತೋಟದ ಮನೆ ಮಾಡಿಕೊಂಡು ವಾಸವಿದ್ದಾರೆ.

- ನರಸಿಂಹರಾಜು,
ಅಗಲಕುಪ್ಪೆ

ಶಿವಗಂಗೆಯಲ್ಲಿ ನಡೆದ ರಂಗನಾಯಕಿ ಸಿನಿಮಾ ಶೂಟಿಂಗ್‌ ಸ್ಪಾಟ್‌ಗಳು. " />

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ