ಆ್ಯಪ್ನಗರ

ಹೈವೇಯಲ್ಲಿ ಗುಂಡಿ, ಸಾಗದು ಸವಾರರ ಬಂಡಿ: ಸೂಲಿಬೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ

ಹೊಸಕೋಟೆಯಿಂದ ಸೂಲಿಬೆಲೆ ಮುಖಾಂತರ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 207ರ ದೇವನಹಳ್ಳಿ ಕ್ರಾಸ್‌ನಲ್ಲಿ ಭಾರೀ ಗಾತ್ರದ ಗುಂಡಿಗಳು ಸೃಷ್ಟಿಯಾಗಿದ್ದು ಮಳೆಗೆ ಗುಂಡಿಗಳಲ್ಲಿ ನೀರು ತುಂಬಿದ್ದು, ಸವಾರರು ಪರದಾಟ ನಡೆಸಿದರು.

Vijaya Karnataka Web 22 Oct 2020, 7:14 am
ಸೂಲಿಬೆಲೆ: ದೇವನಹಳ್ಳಿ, ಸೂಲಿಬೆಲೆ, ಹೊಸಕೋಟೆ ಈ ಮೂರು ಕಡೆ ಸಂಪರ್ಕ ಹೊಂದಿರುವ ರಸ್ತೆಯ ಮಧ್ಯಭಾಗದಲ್ಲಿ ಬೃಹತ್‌ ಗಾತ್ರದ ಗುಂಡಿಗಳು ಸೃಷ್ಟಿಯಾಗಿವೆ. ಇದರಿಂದ ಸವಾರರು ಪರದಾಡುವಂತಾಯಿತು.
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ಮಂಗಳವಾರ ರಾತ್ರಿ ಮಳೆ ನಿಂತ ಮೇಲೆ ಭಾರಿ ಗಾತ್ರದ ವಾಹನವೊಂದು ದೇವನಹಳ್ಳಿ ಕಡೆಯಿಂದ ಸೂಲಿಬೆಲೆ ಕಡೆ ತಿರುವು ಪಡೆದಿದ್ದು, ಗುಂಡಿಯನ್ನು ಹಾದು ಹೋಗುವಾಗ ಆಕ್ಸಲ್‌ ಕಟ್‌ ಆಗಿ ವಾಹನ ಮುಂದೆ ಚಲಿಸಲಾಗದೆ ನಿಂತಿದೆ. ಇದರಿಂದ ಸೂಲಿಬೆಲೆ, ಹೊಸಕೋಟೆ, ದೇವನಹಳ್ಳಿ ಕಡೆ ಹೋಗುವ ಸರಕು ಲಾರಿಗಳು, ಬಸ್‌ಗಳು ಸೇರಿದಂತೆ ಎಲ್ಲ ವಾಹನಗಳ ಗಂಟೆ ಗಟ್ಟಲೇ ನಿಂತು ಸಮಸ್ಯೆ ಎದುರಿಸಬೇಕಾಯಿತು. ಕಿ.ಮೀ ಗಟ್ಟಲೇ ವಾಹನಗಳು ನಿಂತು ಸವಾರರು ಪರದಾಟ ನಡೆಸಿದರು.
ಎರಡು ವರ್ಷಗಳಿಂದ ಪ್ರಯಾಣಿಕರ ಪರದಾಟ: ಹದಗೆಟ್ಟ ಬೆಳವಡಿ ರಸ್ತೆ, ಸಂಚಾರಕ್ಕೆ ಸಂಚಕಾರ!

ಗುಂಡಿಗಳ ಬಗ್ಗೆ ನಿರ್ಲಕ್ಷ್ಯ

ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದು ಸಾಕಷ್ಟು ದಿನಗಳಾದರೂ ಇದನ್ನು ಸರಿಪಡಿಸುವ ಕಾರ್ಯವನ್ನು ಯಾವುದೇ ಇಲಾಖೆ ಅಧಿಕಾರಿಗಳು ಮಾಡಿಲ್ಲ. ಸಣ್ಣ ಗುಂಡಿಗಳು ನೀರಿನಿಂದ ಆವೃತ್ತಗೊಂಡು ಅದರ ಮೇಲೆ ವಾಹನ ಚಲಾಯಿಸುವುದರಿಂದ ಗುಂಡಿಗಳು ಮತ್ತಷ್ಟು ಅಗಲವಾಗಿ ಇಡೀ ಹೆದ್ದಾರಿ ಪೂರ್ತಿ ಗುಂಡಿಗಳಾಗಿವೆ. ಇದು ಸಮಸ್ಯೆಗೆ ಕಾರಣವಾಗಿದೆ.
ಮಲೆ ಮಹದೇಶ್ವರಬೆಟ್ಟ ರಸ್ತೆಗೆ ಸದ್ಯಕ್ಕೆ ತೇಪೆಯಷ್ಟೇ ಗತಿ: ತಾಳು ಬೆಟ್ಟದಿಂದ ಸಂಚಾರಕ್ಕೂ ಸಮಸ್ಯೆ!

ಜನಾಕ್ರೋಶ
ಗುಂಡಿಗಳು ಸೃಷ್ಟಿಯಾಗಿ ಸಾಕಷ್ಟು ದಿನಗಳಾದ್ರೂ ಅಧಿಕಾರಿಗಳು ಇದನ್ನು ಗಮನಿಸಿ ಸರಿಪಡಿಸುವ ಕೆಲಸ ಮಾಡಿಲ್ಲ. ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸವಾರರು ಸಂಕಷ್ಟ ಎದುರಿಸುವಂತಾಗಿದೆ. ಗುಂಡಿಗಳಲ್ಲಿ ಬಿದ್ದು ಈಗಾಗಲೇ ಹಲವರು ಗಾಯಗೊಂಡು ಆಸ್ಪತ್ರೆ ಸೇರುವಂತಾಗಿದೆ. ಕೂಡಲೇ ಅಧಿಕಾರಿಗಳು ಇದರತ್ತ ಗಮನಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ: ಸ್ವಾತಂತ್ರ್ಯ ಬಂದಾಗಿನಿಂದ ಡಾಂಬರು ಕಂಡಿಲ್ಲ ಮೂರು ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆ!

ಕಳೆದ ಹಲವಾರು ದಿನಗಳಿಂದ ಈ ರೀತಿ ದೊಡ್ಡ ಗಾತ್ರದ ಗುಂಡಿ ಬಿದ್ದು ತುಂಬಾ ಸಮಸ್ಯೆಯಾಗುತ್ತಿದ್ದರೂ ಅಧಿಕಾರಿಗಳು ಇತ್ತ ಕಣ್ಣು ಹಾಯಿಸಿಲ್ಲ. ಸವಾರರಿಗೆ ನಿತ್ಯ ತೊಂದರೆ.ಅನೇಕ ಸವಾರರು ಗುಂಡಿಯಲ್ಲಿ ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ಮಳೆ ಬಂದಾಗ ವಾಹನಗಳ ಮುಂದೆ ಹೋಗಲು ಆಗಲ್ಲ. ಮೂರು ರಸ್ತೆಗಳ ತಿರುವಿನಲ್ಲಿ ಗುಂಡಿರುವ ಕಾರಣ ಸಮಸ್ಯೆ ಹೆಚ್ಚು. ಕೂಡಲೇ ಅಧಿಕಾರಿಗಳು ಇತ್ತ ಗಮನಹರಿಸಬೇಕು.
ಸುಬ್ರಹ್ಮಣಿ, ವಾಲ್ಮೀಕಿ ನಗರ ಸೂಲಿಬೆಲೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ