ಆ್ಯಪ್ನಗರ

ಬದುಕಿಗೆ ಸದಾ ಸ್ಫೂರ್ತಿ ಈ ಕಾಯಕಯೋಗಿ !

ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿಗಳು ಕಲಿಯುಗದಲ್ಲಿ ಕಾಯಕಯೋಗಿಯಾಗಿ ನಮ್ಮೆಲ್ಲರ ಬದುಕಿಗೆ ಸದಾ ಸ್ಫೂರ್ತಿಯಾಗಿದ್ದಾರೆ ಎಂದು ಕರವೇ ಕನ್ನಡಿಗರ ಬಣದ ರಾಜ್ಯಾಧ್ಯಕ್ಷ ಚಂದ್ರಶೇಖರ್‌ ಹೇಳಿದರು.

Vijaya Karnataka Web 23 Jan 2019, 5:00 am
ದೊಡ್ಡಬಳ್ಳಾಪುರ : ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿಗಳು ಕಲಿಯುಗದಲ್ಲಿ ಕಾಯಕಯೋಗಿಯಾಗಿ ನಮ್ಮೆಲ್ಲರ ಬದುಕಿಗೆ ಸದಾ ಸ್ಫೂರ್ತಿಯಾಗಿದ್ದಾರೆ ಎಂದು ಕರವೇ ಕನ್ನಡಿಗರ ಬಣದ ರಾಜ್ಯಾಧ್ಯಕ್ಷ ಚಂದ್ರಶೇಖರ್‌ ಹೇಳಿದರು.
Vijaya Karnataka Web siddaganga shri inspiration for life
ಬದುಕಿಗೆ ಸದಾ ಸ್ಫೂರ್ತಿ ಈ ಕಾಯಕಯೋಗಿ !


ನಗರದ ಕನ್ನಡಜಾಗೃತ ಭವನದ ಶ್ರೀಶಿವಕುಮಾರಸ್ವಾಮಿಗಳ ಸಂತಾಪ ಸೂಚಕ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಬಡವರ ಪಾಲಿಗೆ ಮಾರ್ಗದರ್ಶಕರಾಗಿ, ನೊಂದವರ ಬದುಕಿಗೆ ಬೆಳಕಾಗಿದ್ದ ಶ್ರೀಶಿವಕುಮಾರ ಸ್ವಾಮೀಜಿಗಳ ಅಗಲಿಕೆ ರಾಜ್ಯದ ಹಿರಿ ಕೊಂಡಿಯೊಂದನ್ನು ಕಳೆದುಕೊಂಡಂತಾಗಿದೆ. ಸ್ವಾಮೀಜಿಗಳ ವ್ಯಕ್ತಿತ್ವದಿಂದಾಗಿ ತುಮಕೂರಿನಲ್ಲಿ ಶೈಕ್ಷ ಣಿಕ ಪ್ರಗತಿ ಸಾಧ್ಯವಾಯಿತು. ರಾಜ್ಯದ ನಾನಾ ಮೂಲೆಗಳ ಮಕ್ಕಳು ತುಮಕೂರಿಗೆ ಬಂದು ಶಿಕ್ಷ ಣ ಪಡೆದದ್ದಿದೆ. ಬಂದ ಮಕ್ಕಳಿಗೆ ವಸತಿ, ಶಿಕ್ಷ ಣ,ಅನ್ನ ಸೇರಿದಂತೆ ವ್ಯವಸ್ಥಿತವಾಗಿ ನಡೆಯುವಂತೆ ಸ್ವಾಮೀಜಿಗಳು ಮಾಡಿದ್ದರು. ಆ ಮೂಲಕ ಅಸಂಖ್ಯ ವಿದ್ಯಾರ್ಥಿಗಳ ಜ್ಞಾನದ ದಾಹ ನೀಗಿಸಿದ ಪರಮಾತ್ಮನಾಗಿ ಶಿವಕುಮಾರ ಸ್ವಾಮೀಜಿಗಳು ನಮ್ಮ ನಡುವೆ ನಿಂತಿದ್ದಾರೆ ಎಂದರು.

ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ರಮೇಶ್‌ ಮಾತನಾಡಿದರು. ಕಾರ್ಯಕ್ರಮದಲ್ಲಿ ಫೋಟೋ ಛಾಯಾಗ್ರಾಹಕರ ಸಂಘದ ಕಾ¿åರ್‍ದರ್ಶಿ ರಾಜ್ಯ ಉಪಾಧ್ಯಕ್ಷ ನಾಗೇಶ್‌, ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ರಮೇಶ್‌, ಕರವೇ ಮುಖಂಡರಾದ ಲಿಂಗಪ್ಪ, ಬಸವರಾಜು, ಚೇತನ್‌ ಮತ್ತು ಸಾರ್ವಜನಿಕರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ