ಆ್ಯಪ್ನಗರ

ಶ್ರೀಲಂಕಾ ಸ್ಫೋಟ: ಜಿಲ್ಲೆಯಲ್ಲೂ ಪೊಲೀಸ್‌ ಅಲರ್ಟ್‌

ಶ್ರೀಲಂಕಾ ಬಾಂಬ್‌ ಸ್ಫೋಟದಲ್ಲಿ ಹಿನ್ನಲೆಯಲ್ಲಿ ಜಿಲ್ಲೆಯಲ್ಲೂ ್ಲ ಕಟ್ಟೆಚ್ಚರ ವಹಿಸಲು ಪೊಲೀಸ್‌ ಇಲಾಖೆ ಮುಂದಾಗಿದ್ದು, ವಿಧ್ವಂಸಕ ಕೃತ್ಯ ತಡೆಗಟ್ಟುವಲ್ಲಿ ಹಾಗೂ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಐಜಿಪಿ ಶರತ್‌ಚಂದ್ರ ಮನವಿ ಮಾಡಿದರು.

Vijaya Karnataka 27 Apr 2019, 5:00 am
ಧ್ವಂಸಕ ಕೃತ್ಯ ತಡೆಗೆ ಸಾರ್ವಜನಿಕರ ಸಹಕರ ಅಗತ್ಯ: ಐಜಿಪಿ
Vijaya Karnataka Web sri lanka blast police alert in district
ಶ್ರೀಲಂಕಾ ಸ್ಫೋಟ: ಜಿಲ್ಲೆಯಲ್ಲೂ ಪೊಲೀಸ್‌ ಅಲರ್ಟ್‌


ಬೆಂಗಳೂರು ಗ್ರಾಮಾಂತರ : ಶ್ರೀಲಂಕಾ ಬಾಂಬ್‌ ಸ್ಫೋಟದಲ್ಲಿ ಹಿನ್ನಲೆಯಲ್ಲಿ ಜಿಲ್ಲೆಯಲ್ಲೂ ್ಲ ಕಟ್ಟೆಚ್ಚರ ವಹಿಸಲು ಪೊಲೀಸ್‌ ಇಲಾಖೆ ಮುಂದಾಗಿದ್ದು, ವಿಧ್ವಂಸಕ ಕೃತ್ಯ ತಡೆಗಟ್ಟುವಲ್ಲಿ ಹಾಗೂ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಐಜಿಪಿ ಶರತ್‌ಚಂದ್ರ ಮನವಿ ಮಾಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಾರ್ವಜನಿಕ ಸ್ಥಳಗಳು, ಧಾರ್ಮಿಕ ಕೇಂದ್ರಗಳು ವಿಧ್ವಂಸಕರ ಪ್ರಮುಖ ಟಾರ್ಗೆಟ್‌ ಆಗಿರುವುದರಿಂದ ಯಾವುದೇ ವ್ಯಕ್ತಿಗಳ ಮೇಲೆ ಶಂಕೆ ವ್ಯಕ್ತವಾದರೆ ಕೂಡಲೇ ಪೊಲೀಸರ ಗಮನಕ್ಕೆ ತರಬೇಕು ಎಂದರು.

ಮನೆ, ಫ್ಯಾಕ್ಟರಿ, ಕಚೇರಿ ಅಥವಾ ಇನ್ನಿತರ ಕಡೆಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಳ್ಳುವುದಕ್ಕೂ ಮುನ್ನ ಅವರ ಪೂರ್ವಪರ ತಿಳಿದುಕೊಳ್ಳಬೇಕು. ಅವರ ಸಂಪೂರ್ಣ ಮಾಹಿತಿಯನ್ನು ಕಲೆಹಾಕಿ, ಅಗತ್ಯ ದಾಖಲೆ ಪಡೆದುಕೊಂಡು ನೇಮಕ ಮಾಡಿಕೊಳ್ಳಬೇಕು. ಮನೆ, ಕಚೇರಿ, ಅಂಗಡಿ ಮತ್ತು ಮಾಲ್‌ಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಬೇಕು ಎಂದು ಸೂಚಿಸಿದರು.

ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಿ: ಹೋಟೆಲ್‌, ಲಾಡ್ಜ್‌, ಮಾಲ್‌ಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು. ಬಹಳಷ್ಟು ಕಡೆಗಳಲ್ಲಿ ಸಿಸಿ ಕ್ಯಾಮೆರಾ ಕೆಲಸ ಮಾಡುತ್ತಿಲ್ಲ. ಕೇವಲ ನಾಮಕಾವಸ್ತೆಗೆ ಹಾಕಲಾಗಿದೆ. ಈ ರೀತಿ ಮಾಡುವುದು ತರವಲ್ಲ. ಕೂಡಲೇ ಮಾಲೀಕರು ಎಚ್ಚೆತ್ತುಕೊಳ್ಳಬೇಕು. ಅಕ್ರಮ ಚಟುವಟಿಕೆ ಕಂಡುಬಂದರೆ ಮಾಹಿತಿ ನೀಡಿ ನಿಮ್ಮ ಹೆಸರನ್ನು ಗೌಪ್ಯವಿಡಲಾಗುವುದು ಇಲಾಖೆಯಿಂದ ಅಗತ್ಯಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ರಾಮ್‌ ನಿವಾಸ್‌ ಸಪೆಟ್‌ ತಿಳಿಸಿದರು.

ಮಾಲ್‌, ಹೋಟೆಲ್‌, ಮಾಲ್‌ನಲ್ಲಿ ಮೆಟಲ್‌ ಡಿಟೇಕ್ಟರ್‌ ಬಳಸಬೇಕು. ಸಾರ್ವಜನಿಕ ಸಭೆ, ಸಮಾರಂಭಗಳನ್ನು ಆಯೋಜಿಸುವ ಮುನ್ನ ಪೊಲೀಸರಿಗೆ ಮಾಹಿತಿ ಕೂಡಬೇಕು. ಸ್ಥಳೀಯ ಪೊಲೀಸರ ಸಂಖ್ಯೆಗಳನ್ನು ನೋಟ್‌ ಮಾಡಿಕೊಂಡಿರಬೇಕು. ಯಾವುದೇ ಅನುಮಾನ ವ್ಯಕ್ತವಾದರೂ ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು. ಮಾಹಿತಿ ನೀಡುವ ವ್ಯಕ್ತಿ ಹೆಸರನ್ನು ಯಾವುದೇ ಕಾರಣಕ್ಕೂ ಬಹಿರಂಗಪಡಿಸುವುದಿಲ್ಲ ಎಂದರು.

ಹೊಸಕೋಟೆ ಡಿವೈಎಸ್‌ಪಿ ಸಕ್ರಿ, ಆನೇಕಲ್‌ ಡಿವೈಎಸ್‌ಪಿ ನಂಜುಂಡೇಗೌಡ, ನೆಲಮಂಗಲ ಡಿವೈಎಸ್‌ಪಿ ಪಾಂಡುರಂಗ ಸೇರಿ ಹಿರಿಯ ಪೊಲೀಸ್‌ ಅಧಿಕಾರಿಗಳು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ