ಆ್ಯಪ್ನಗರ

ಖಾಸಗಿ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಹೈ ಫೀವರ್‌!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಹುತೇಕ ಖಾಸಗಿ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಫೀವರ್‌ ಹೆಚ್ಚಾಗಿದೆ. ಮಾರ್ಚ್‌ 21ರಿಂದ ಆರಂಭವಾಗಲಿರುವ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಜಿದ್ದಿಗೆ ಬಿದ್ದಂತೆ ವಿದ್ಯಾರ್ಥಿಗಳ ಮೇಲೆ ಅಧಿಕ ಬೋಧನಾಹೊರೆ ಹಾಕಿದ್ದಾರೆ. ಇದು ವಿದ್ಯಾರ್ಥಿಗಳಲ್ಲಿ ಹಲವು ಸಮಸ್ಯೆಗೆ ಎಡೆಮಾಡಿದೆ.

Vijaya Karnataka 18 Jan 2019, 5:00 am
ರಿಸಲ್ಟ್‌ಗಾಗಿ ಶಾಲೆಗಳಿಂದ ಹೆಚ್ಚುವರಿ ತರಗತಿ | ವಿದ್ಯಾರ್ಥಿಗಳ ದಿನಚರಿಯಲ್ಲೇ ವ್ಯತ್ಯಯ | ಪುಸ್ತಕದ ಹುಳುಗಳಾಗುತ್ತಿರುವ ಮಕ್ಕಳು
Vijaya Karnataka Web BRL-1701DBPVK1


ನಾಗರಾಜು.ಎ ದೊಡ್ಡಬಳ್ಳಾಪುರ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಹುತೇಕ ಖಾಸಗಿ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಫೀವರ್‌ ಹೆಚ್ಚಾಗಿದೆ. ಮಾರ್ಚ್‌ 21ರಿಂದ ಆರಂಭವಾಗಲಿರುವ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಜಿದ್ದಿಗೆ ಬಿದ್ದಂತೆ ವಿದ್ಯಾರ್ಥಿಗಳ ಮೇಲೆ ಅಧಿಕ ಬೋಧನಾಹೊರೆ ಹಾಕಿದ್ದಾರೆ. ಇದು ವಿದ್ಯಾರ್ಥಿಗಳಲ್ಲಿ ಹಲವು ಸಮಸ್ಯೆಗೆ ಎಡೆಮಾಡಿದೆ.

ದಿನದ ಹನ್ನೊಂದು ತಾಸು ಓದೋಕ್ಕೆ ಮೀಸಲು : ಜಿಲ್ಲೆಯ ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ ಹಾಗೂ ಹೊಸಕೋಟೆ ಭಾಗದಲ್ಲಿ ಕೆಲ ಖಾಸಗಿ ಶಾಲೆಗಳು ಉತ್ತಮ ಫಲಿತಾಂಶ ಪಡೆಯಲು ವಿದ್ಯಾರ್ಥಿಗಳಿಗೆ ಅಧಿಕ ಸಮಯದ ವೇಳಾಪಟ್ಟಿಗಳನ್ನು ಜಾರಿಗೊಳಿಸಿಕೊಂಡಿವೆ. . ಬೆಳಿಗ್ಗೆ 8:30ರಿಂದ ಸಂಜೆ 7:30ರವರೆಗೆ ನಿರಂತರ ತರಗತಿಗಳನ್ನು ನಡೆಸಲಾಗುತ್ತಿದೆ.ಇದು ಮಕ್ಕಳ ಮಾನಸಿಕ ಸ್ಥಿತಿಗತಿ ಮೇಲೆ ಪರಿಣಾಮ ಬೀರುತ್ತಿದೆಯಲ್ಲದೆ, ಮಕ್ಕಳ ಮೇಲೆ ಪರೀಕ್ಷೆಯ ಆತಂಕ ಸೃಷ್ಟಿಯಾಗುವಂತಾಗಿದೆ.

ಪಠ್ಯೇತರ ಚಟುವಟಿಕೆ ಮೂಲೆಗುಂಪು: ಮಕ್ಕಳಿಗೆ ಅಗತ್ಯವಾದ ಪಠ್ಯೇತರ ಚಟುವಟಿಕೆಗಳನ್ನೆಲ್ಲಾ ಮೂಲೆಗುಂಪು ಮಾಡಿ, ಕೇವಲ ಫಲಿತಾಂಶಕ್ಕಷ್ಟೇ ಮೀಸಲು ಮಾಡಲಾಗಿದೆಯೆಂಬ ಆಕ್ಷೇಪ ಕೇಳಿಬಂದಿದೆ,ಫಲಿತಾಂಶ ಉತ್ತಮವಾಗಿಸಲುಾಸಗಿ ಶಾಲೆಗಳು ಹಾಗೂ ಸಾರ್ವಜನಿಕ ಶಿಕ್ಷ ಣ ಇಲಾಖೆ ಮಾಡುತ್ತಿರುವ ಪ್ರಯತ್ನ ಒಳ್ಳೆಯದು. ಆದರೆ, ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಯ ಬಗ್ಗೆ ಯೋಚಿಸಬೇಕುಅಂಕಗಳಿಗಾಗಿ ಮಕ್ಕಳ ಮಾನಸಿಕ ಸ್ಥಿತಿಯನ್ನು ಹಾಳುಮಾಡುವುದು ಏಕೆ ಎಂದು ಮಾನಸಿಕ ಸಲಹೆಗಾರರಾದ ಲಕ್ಷ್ಮೀ ಪ್ರಶ್ನಿಸುತ್ತಾರೆ.

ಶಿಕ್ಷ ಕರಿಗೂ ಹೆಚ್ಚಿನ ಹೊರೆ ; ಖಾಸಗಿ ಶಾಲೆಗಳ ಈ ನಿರ್ಧಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಶಿಕ್ಷ ಕರಿಗೂ ಹೆಚ್ಚಿನ ಹೊರೆಯ ಸನ್ನಿವೇಶ ಸೃಷ್ಟಿಸಿದೆ. ಫಲಿತಾಂಶದ ಸ್ಪರ್ಧೆಯಲ್ಲಿ ಶಾಲೆಗೆ ಉತ್ತಮ ಹೆಸರು ಗಳಿಸಬೇಕೆಂಬ ಹಠಕ್ಕೆ ಬಿದ್ದು ಬೆಳಿಗ್ಗೆ 8ರಿಂದ ಆರಂಭವಾಗುವ ಶಾಲೆಯ ದಿನಚರಿ ರಾತ್ರಿವರೆಗೂ ಮುಂದುವರೆಯುತ್ತಿದ್ದು, ಶಿಕ್ಷ ಕರಿಗೂ ಮಾನಸಿಕವಾಗಿ ಹಿಂಸೆ ಎದುರಾಗುತ್ತಿದೆ ಎಂದು ಹೆಸರೇಳಲಿಚ್ಚಿಸಿದ ಖಾಸಗಿ ಶಿಕ್ಷಕರು ಅವಲತ್ತುಕೊಳ್ಳುತ್ತಿದ್ದಾರೆ. ಜತೆಗೆ ಪರೀಕ್ಷೆ ಸಮಯದಲ್ಲಿ ನಕಲು, ಪ್ರಶ್ನೆಪತ್ರಿಕೆ ಲೀಕ್‌ನಂತಹ ಅಡ್ಡದಾರಿಗೆ ಇಳಿಯಲು ಕಾರಣವಾಗುತ್ತಿದೆ ಎಂದು ತಜ್ಞರು ಹೇಳುತ್ತಿದ್ದಾರೆ.
------

ಪರೀಕ್ಷೆ ಸಮೀಪಿಸುತ್ತಿದ್ದಂತೆ ವಿದ್ಯಾರ್ಥಿಗಳಿಗೆ ಕ್ರೀ

ಸಾಂದರ್ಭಿಕ ಚಿತ್ರ.

ಡೆ ಮರೀಚಿಕೆಯಾಗುತ್ತಿದೆ. ಶೈಕ್ಷ ಣಿಕ ಪ್ರಗತಿಗೆ ಕ್ರೀಡೆ ಅಗತ್ಯವೆಂದು ಹೇಳುವ ಶಿಕ್ಷ ಕರೇ ತಮ್ಮ ವಿದ್ಯಾರ್ಥಿಗಳನ್ನು ಕ್ರೀಡೆಯಿಂದ ದೂರವಿಡುತ್ತಿದ್ದಾರೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ, ಗ್ರಂಥಾಲಯ ಅಗತ್ಯವಾಗಿ ಬೇಕಾಗುತ್ತದೆ. ಪುಸ್ತಕಕ್ಕೆ ಸೀಮಿತಗೊಳಿಸುತ್ತ ಮಕ್ಕಳು ಕ್ರೀಡೆ ಹಾಗೂ ಇತರ ಚಟುವಟಿಕೆಗಳಿಗೆ ವಿಮುಖರಾಗುತ್ತಿರುವುದರಿಂದ ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳು ಹೆಚ್ಚಾಗಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ.

-ಡಾ.ಮನೋಹರ್‌, ಮಾನಸಿಕ ತಜ್ಞ ವೈದ್ಯರು.

----

ಹತ್ತನೇ ತರಗತಿಗೆ ಬಂದಾಗ ಮಾತ್ರ ವಿದ್ಯಾರ್ಥಿಗಳಿಗೆ ಹೆಚ್ಚಿನ ಹೊರೆ ಹಾಕುವ ಬದಲಿಗೆ ಪ್ರಾಥಮಿಕ ಹಂತದಿಂದ ಪಠ್ಯಗಳ ಕಲಿಕೆಗೆ ಹೆಚ್ಚಿನ ಮಾನ್ಯತೆ ನೀಡಬೇಕು. ಎಸ್ಸೆಸೆಲ್ಸಿಯಲ್ಲಿ ಕೇವಲ ಅಂಕಗಳ ಗಳಿಕೆಯ ಹಿಂದೆ ಬಿದ್ದು ಮಕ್ಕಳಿಗೆ ತೊಂದರೆ ಕೊಡುತ್ತಿರುವುದು ಎಷ್ಟು ಸರಿ?

-ಚಿದಾನಂದ್‌

---

ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಕ್ಕೆ ಪ್ರಯತ್ನ ಒಳ್ಳೆಯದು, ಆದರೆ ಮಕ್ಕಳಿಗೆ ಮಾನಸಿಕ ಹೇರಿಕೆಯಾಗಬಾರದು. ಗುಂಪುಚರ್ಚೆಗಳ ಮೂಲಕ ಅಭ್ಯಾಸಕ್ಕೆ ಮನ್ನಣೆ ನೀಡಬೇಕು. ಈ ಬಗ್ಗೆ ಸಂಬಂಧಪಟ್ಟ ಖಾಸಗಿ ಶಾಲೆಗಳಿಗೆ ಸೂಚನೆ ನೀಡಲಾಗುತ್ತದೆ.

-ಆರ್‌.ರಂಗಪ್ಪ, ಕ್ಷೇತ್ರ ಶಿಕ್ಷ ಣಾಧಿಕಾರಿ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ