ಆ್ಯಪ್ನಗರ

ಗುಣಮಟ್ಟದ ಶಿಕ್ಷಣ ನೀಡುವುದು ಗುರಿಯಾಗಲಿ

ಪ್ರತಿ ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷ ಣ ನೀಡುವುದು ಆಯಾ ಶಾಲಾಡಳಿತ ಮಂಡಳಿಯ ಗುರಿಯಾಗಬೇಕು. ಗುಣಮಟ್ಟದ ಶಿಕ್ಷ ಣ ನೀಡಿ ಸಮಾಜಕ್ಕೆ ಉತ್ತಮ ಪ್ರಜೆಯನ್ನಾಗಿಸಬೇಕು ಎಂದು ಸಾರ್ವಜನಿಕ ಶಿಕ್ಷ ಣ ಇಲಾಖೆ ಉಪನಿರ್ದೇಶಕ ಟಿ.ಕೃಷ್ಣಮೂರ್ತಿ ತಿಳಿಸಿದರು.

Vijaya Karnataka 10 Jul 2019, 5:00 am
ಸಾರ್ವಜನಿಕ ಶಿಕ್ಷ ಣ ಇಲಾಖೆ ಉಪನಿರ್ದೇಶಕ ಟಿ.ಕೃಷ್ಣಮೂರ್ತಿ ಸಲಹೆ
Vijaya Karnataka Web the goal is to provide quality education
ಗುಣಮಟ್ಟದ ಶಿಕ್ಷಣ ನೀಡುವುದು ಗುರಿಯಾಗಲಿ

ಕುಂದಾಣ : ಪ್ರತಿ ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷ ಣ ನೀಡುವುದು ಆಯಾ ಶಾಲಾಡಳಿತ ಮಂಡಳಿಯ ಗುರಿಯಾಗಬೇಕು. ಗುಣಮಟ್ಟದ ಶಿಕ್ಷ ಣ ನೀಡಿ ಸಮಾಜಕ್ಕೆ ಉತ್ತಮ ಪ್ರಜೆಯನ್ನಾಗಿಸಬೇಕು ಎಂದು ಸಾರ್ವಜನಿಕ ಶಿಕ್ಷ ಣ ಇಲಾಖೆ ಉಪನಿರ್ದೇಶಕ ಟಿ.ಕೃಷ್ಣಮೂರ್ತಿ ತಿಳಿಸಿದರು.

ಕುಂದಾಣ ಹೋಬಳಿಯ ಚಪ್ಪರದಕಲ್ಲು ಸರ್ಕಲ್‌ ಸಮೀಪದಲ್ಲಿರುವ ವಿಹಾನ್‌ ಪಬ್ಲಿಕ್‌ ಶಾಲೆಯ ಆವರಣದಲ್ಲಿ ಶಾಲಾ ವತಿಯಿಂದ ಹಮ್ಮಿಕೊಂಡಿದ್ದ 7ನೇ ವರ್ಷದ ಸಂಸ್ಥಾಪಕ ದಿನ ಹಾಗೂ ಪರಿಸರ ದಿನಾಚರಣೆಯನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸರಕಾರಿ ಶಾಲೆಯಾಗಿರಬಹುದು, ಖಾಸಗಿ ಶಾಲೆಯಾಗಿರಬಹದು ಪೋಷಕರು ಮೊದಲಿಗೆ ಮಕ್ಕಳ ವಿದ್ಯಾಭ್ಯಾಸ ಗುಣಮಟ್ಟದ್ದಾಗಿದೆಯೇ, ಮಕ್ಕಳಿಗೆ ಈ ಶಾಲೆ ಸುರಕ್ಷಿತವಾಗಿದೆಯೇ ಎಂಬುವುದನ್ನು ನೋಡುತ್ತಾರೆ. ಒಂದು ಶಾಲೆಯನ್ನು ನಡೆಸಬೇಕಾದರೆ ಹಲವಾರು ಸಮಸ್ಯೆಗಳನ್ನು ಎದುರಿಸುವಂತೆ ಆಗುತ್ತದೆ. ಬಹಳ ಜವಾಬ್ದಾರಿಯುತವಾಗಿ ಮಕ್ಕಳಿಗೆ ಶಿಕ್ಷ ಣ ನೀಡುವ ಸಂಸ್ಥೆಯಾಗಬೇಕು. ಸಾಮಾನ್ಯವಾಗಿ ಶಿಸ್ತು, ಶಿಕ್ಷ ಣ, ಪಠ್ಯಕ್ರಮ ಹೀಗೆ ಹತ್ತುಹಲವಾರು ಇರುತ್ತದೆ. ಮಕ್ಕಳಿಗೆ ಸುರಕ್ಷಿತ ದೃಷ್ಠಿಯಿಂದಲೂ ಸಹ ಶಾಲಾಡಳಿತ ಮಂಡಳಿ ಬಹಳ ಜವಾಬ್ದಾರಿಯುತವಾಗಿರುತ್ತದೆ. ಶಿಕ್ಷ ಕರು ಮಕ್ಕಳನ್ನು ಮಿನುಗುವ ನಕ್ಷ ತ್ರಗಳಂತೆ ಮಾಡಬೇಕು. ಇನ್ನೂ ಹೆಚ್ಚಿನ ಗುಣಮಟ್ಟದ ಶಿಕ್ಷ ಣವನ್ನು ನೀಡುವ ಮೂಲಕ ಶಾಲೆ ಮತ್ತಷ್ಟು ಎತ್ತರಕ್ಕೆ ಹೋಗಬೇಕು ಎಂದು ಹಾರೈಸಿದರು.

ವಿಹಾನ್‌ ಪಬ್ಲಿಕ್‌ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಪ್ರೋ.ಪ್ರತಾಪ್‌ಯಾದವ್‌ ಮಾತನಾಡಿ, ಹಸಿರು ವಾತಾವರಣವುಳ್ಳ ಶಾಲೆಯ ಆವರಣದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಪೋಷಕರು ಸಹ ಸಹಕರಿಸುತ್ತಿರುವುದು ಶ್ಲಾಘನೀಯ. ಇದರ ಜೊತೆಜೊತೆಯಲ್ಲಿ ನಮ್ಮ ಪರಿಸರವನ್ನು ಸ್ವಚ್ಛ ಸುಂದರವಾಗಿಡಲು ಈ ದಿನದಂದೇ ಸುಮಾರು 1000 ಗಿಡಗಳನ್ನು ಬೊಮ್ಮವಾರದ ಗೇಟ್‌ ಹಾಗೂ ಪೂರ್ಣ ಪ್ರಜ್ಞಾ ಸಂಸ್ಥೆಯ ರಸ್ತೆಯ ಬದಿಗಳಲ್ಲಿ ನೆಡಲಾಗುತ್ತಿದೆ. ಎಲ್ಲಿ ಪರಿಸರ ಸಮೃದ್ಧಿಯಾಗಿರುತ್ತದೆಯೋ ಅಲ್ಲಿ ಆರೋಗ್ಯ ಸಮಸ್ಯೆ ಬರುವುದಿಲ್ಲ. ನಮ್ಮ ತಂದೆ ದಿವಾಂಗತ ಗಂಗಾಧರಯ್ಯ ಜ್ಞಾಪಕಾರ್ಥಕವಾಗಿ ಹುಟ್ಟೂರು ಆದ ನೆಲಮಂಗಲದಲ್ಲಿ ಒಂದು ಸರಕಾರಿ ಶಾಲೆಯನ್ನು ದತ್ತು ತೆಗೆದುಕೊಳ್ಳಲು ಮುಂದಾಗಿದ್ದೇನೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಬೆಂಗಳೂರಿನ ಲಯನ್ಸ್‌ ಸಂಸ್ಥೆಯ ರೋಹಿತ್‌ಯಾದವ್‌, ಟ್ರಸ್ಟ್‌ ಉಪಾಧ್ಯಕ್ಷೆ ರಜಿನಿ, ಮುಖ್ಯಶಿಕ್ಷ ಕಿ ಏವಾಂಜಲೀನ್‌, ಶಾಲಾ ಶಿಕ್ಷ ಕವೃಂದ, ಶಾಲಾ ಬೋಧಕೇತರ ಸಿಬ್ಬಂದಿ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ