ಆ್ಯಪ್ನಗರ

ಚಳಿಗಾಲದ ಆರಂಭದಲ್ಲೇ ಬರಿದಾದ ಕೆರೆಗಳು..! ಬೇಸಿಗೆಕಾಲದಲ್ಲಿ ಉಂಟಾಗಲಿದೆ ನೀರಿನ ಅಭಾವ..!

ಮಳೆಗಾಲ ಮುಕ್ತಾಯಕ್ಕೂ ಮುನ್ನವೇ ಕೆರೆಗಳಲ್ಲಿ ನೀರು ಬರಿದಾಗಿ, ಬೇಸಿಗೆಯಲ್ಲಿ ನೀರಿನ ಅಭಾವ ಹೆಚ್ಚಾಗುವ ಸಾಧ್ಯತೆ ಹೆಚ್ವಿದೆ. ತಾಲೂಕಿನ ಪ್ರಮುಖ ಕೆರೆಗಳಾದ ಬಾಶೆಟ್ಟಿಹಳ್ಳಿ, ವೀರಾಪುರ, ಅರಳುಮಲ್ಲಿಗೆ, ಮತ್ತೂ್ತರು ಕೆರೆ ಸೇರಿ ಅನೇಕ ಕೆರೆಗಳು ಬರಿದಾಗಿದ್ದು, ಇತ್ತೀಚಿನ ದಿನಗಳಲ್ಲಿಅಂತರ್ಜಲ ಮಟ್ಟ 1200-1400 ಅಡಿ ಆಳಕ್ಕೆ ಕುಸಿದಿದೆ.

Vijaya Karnataka Web 11 Dec 2020, 6:39 am
ದೊಡ್ಡಬಳ್ಳಾಪುರ: ಪ್ರಾಣಿ ಪಕ್ಷಿಗಳ ದಾಹ ನೀಗಿಸುವ ಜಲಮೂಲಗಳಲ್ಲಿ ಒಂದಾದ ಕೆರೆಗಳು ಈ ವರ್ಷ ಮಳೆಗಾಲ ಆರಂಭದಲ್ಲಿ ಭರ್ತಿಯಾಗಿ ಕಂಗೊಳಿಸುತ್ತಿದ್ದವು.
Vijaya Karnataka Web lake
ಸಾಂದರ್ಭಿಕ ಚಿತ್ರ


ಆದರೆ ಮಳೆಗಾಲ ಮುಕ್ತಾಯಕ್ಕೂ ಮುನ್ನವೇ ಕೆರೆಗಳಲ್ಲಿ ನೀರು ಬರಿದಾಗಿ, ಬೇಸಿಗೆಯಲ್ಲಿ ನೀರಿನ ಅಭಾವ ಹೆಚ್ಚಾಗುವ ಸಾಧ್ಯತೆ ಹೆಚ್ವಿದೆ. ತಾಲೂಕಿನ ಪ್ರಮುಖ ಕೆರೆಗಳಾದ ಬಾಶೆಟ್ಟಿಹಳ್ಳಿ, ವೀರಾಪುರ, ಅರಳುಮಲ್ಲಿಗೆ, ಮತ್ತೂ್ತರು ಕೆರೆ ಸೇರಿ ಅನೇಕ ಕೆರೆಗಳು ಬರಿದಾಗಿದ್ದು, ಇತ್ತೀಚಿನ ದಿನಗಳಲ್ಲಿಅಂತರ್ಜಲ ಮಟ್ಟ 1200-1400 ಅಡಿ ಆಳಕ್ಕೆ ಕುಸಿದಿದೆ.

ಈ ಬಾರಿ ಹೊಸ ವರ್ಷ ಸಂಭ್ರಮಾಚರಣೆಗೆ ನಂದಿಬೆಟ್ಟಕ್ಕಿಲ್ಲ ಎಂಟ್ರಿ‌..!

ವಲಸೆ ಪಕ್ಷಿಗಳಿಗಿಲ್ಲ ನೆಲೆ: ನವೆಂಬರ್‌ನಲ್ಲಿ ಚಳಿಗಾಲ ಆರಂಭವಾಗುತ್ತಿದ್ದಂತೆ ವಿದೇಶಿ ಪಕ್ಷಿಗಳು ತಾಲೂಕಿನ ಕೆರೆಗಳಿಗೆ ವಲಸೆ ಬಂದು ಸಂತಾನೋತ್ಪತ್ತಿ ಮಾಡಿ ನಂತರ ಮಳೆಗಾಲ ಆರಂಭವಾಗುತ್ತಿದ್ದಂತೆ ಹಿಂತಿರುಗುತ್ತಿದ್ದವು. ಆದರೆ ಈ ಬಾರಿ ಕೆರೆಗಳು ಚಳಿಗಾಲ ಆರಂಭಕ್ಕೂ ಮುನ್ನವೇ ಬರಿದಾದ ಪರಿಣಾಮ ಅವುಗಳಿಗೆ ಆಹಾರ ಸಮಸ್ಯೆ ಎದುರಾಗಲಿದೆ.
ಸಿಂಗಾಪುರದಿಂದ ತಂದಿದ್ದ 15 ಲ್ಯಾಪ್‌ಟಾಪ್‌ಗೆ ಕಸ್ಟಮ್ಸ್‌ ವಿಧಿಸದೆ ಲಂಚ ಕೇಳಿದ ಅಧಿಕಾರಿಗಳಿಗೆ 4 ವರ್ಷ ಜೈಲು

ಕೆರೆ ಸುತ್ತಮುತ್ತ ಗೂಡು ಕಟ್ಟಿಕೊಳ್ಳಲು ಅವು ಪರಿತಪಿಸುತ್ತಿವೆ. ತಾಲೂಕಿನ ಬಹುಪಾಲು ಕೆರೆಗಳು ಬರಿದಾದ ಪರಿಣಾಮ ಈ ವರ್ಷ ಮೀನುಗಾರಿಕೆಗೆ ಹೊಡೆತ ಬೀಳಲಿದೆ. ಇದರಿಂದಾಗಿ ಪ್ರತಿವರ್ಷ ಮೀನುಗಾರಿಕೆ ಆದಾಯವು ನಷ್ಟವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ