ಆ್ಯಪ್ನಗರ

ನರೇಗಾ ಅನುಷ್ಠಾನದಲ್ಲಿ ತೂಬಗೆರೆಗೆ 3ನೇ ಸ್ಥಾನ

ನರೇಗಾ ಯೋಜನೆಯ ಅನುಷ್ಠಾನ ಮತ್ತು ಅನುದಾನ ಬಳಕೆಯಲ್ಲಿ ತೂಬಗೆರೆ ತಾಲೂಕಿನಲ್ಲಿ 3ನೇ ಸ್ಥಾನ ಗಳಿಸಿದ್ದು, ಮೊದಲ ಸ್ಥಾನಕ್ಕೆ ಮುನ್ನಡೆಯಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮತ್ತಷ್ಟು ಪರಿಶ್ರಮ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಜಯಮ್ಮ ಹೇಳಿದರು.

Vijaya Karnataka 4 Jan 2019, 5:00 am
ವಿಕ ಸುದ್ದಿಲೋಕ ದೊಡ್ಡಬಳ್ಳಾಪುರ
Vijaya Karnataka Web thoubagare is ranked 3rd in the narega implementation
ನರೇಗಾ ಅನುಷ್ಠಾನದಲ್ಲಿ ತೂಬಗೆರೆಗೆ 3ನೇ ಸ್ಥಾನ


ನರೇಗಾ ಯೋಜನೆಯ ಅನುಷ್ಠಾನ ಮತ್ತು ಅನುದಾನ ಬಳಕೆಯಲ್ಲಿ ತೂಬಗೆರೆ ತಾಲೂಕಿನಲ್ಲಿ 3ನೇ ಸ್ಥಾನ ಗಳಿಸಿದ್ದು, ಮೊದಲ ಸ್ಥಾನಕ್ಕೆ ಮುನ್ನಡೆಯಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮತ್ತಷ್ಟು ಪರಿಶ್ರಮ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಜಯಮ್ಮ ಹೇಳಿದರು.

ತಾಲೂಕಿನ ತೂಬಗೆರೆ ಗ್ರಾಮ ಪಂಚಾಯಿತಿ ಕಾರಾರ‍ಯಲಯಕ್ಕೆ ಬುಧವಾರ ಭೇಟಿ ನೀಡಿ, ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಮತ್ತು ಗ್ರಾಪಂ ಆಡಳಿತ ವೈಖರಿ ಅಧ್ಯಯನ ಕೈಗೊಂಡು ಅವರು ಮಾತನಾಡಿದರು.

ಅನುಷ್ಠಾನದ ಅಗತ್ಯ: ಚರಂಡಿಗಳ ನಿರ್ಮಾಣ, ಸ್ವಚ್ಛತೆ, ಕೃಷಿಹೊಂಡಗಳ ನಿರ್ಮಾಣ ನಿರ್ವಹಣೆ, ಕೆರೆ-ಕಟ್ಟೆಗಳ ಹೂಳೆತ್ತುವ ಕಾಮಗಾರಿ ಸೇರಿದಂತೆ ಸಾರ್ವಜನಿಕ ಉಪಯೋಗದ ಮೂಲಸೌಕರ‍್ಯ ಅಭಿವೃದ್ಧಿ ಕಾಮಗಾರಿಗಳಲ್ಲಿ ಜನರನ್ನು ತೊಡಗಿಸಿಕೊಂಡು ಕೆಲಸಗಳನ್ನು ಅನುಷ್ಠಾನಕ್ಕೆ ತರುವ ಅಗತ್ಯವಿದೆ ಎಂದರು.

ವ್ಯವಸ್ಥೆ ಕಲ್ಪಿಸಲು ನಿರ್ದೇಶನ: ತೂಬಗೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಾರನಾಳ, ಸುಣ್ಣಘಟ್ಟಹಳ್ಳಿ, ಟಿ.ಹೊಸಹಳ್ಳಿ ಮತ್ತು ಹಿರೇನಗುಡ್ಡದಹಳ್ಳಿಗಳಲ್ಲಿ ಕೊಳವೆಬಾವಿ ಕೊರೆಯುವ ಕಾಮಗಾರಿ ಮುಕ್ತಾಯವಾಗದ್ದು, ಪೈಪ್‌ ಮತ್ತು ಪಂಪ್‌ ಅಳವಡಿಕೆಯೂ ಮುಗಿದಿದೆ. ಆದರೆ ಟ್ರಾನ್ಸ್‌ಫಾರ್ಮರ್‌ ಅಳವಡಿಸಿ ವಿದ್ಯುತ್‌ ಸಂಪರ್ಕ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಬೆಸ್ಕಾಂ ಅಧಿಕಾರಿಗಳ ಜತೆ ದೂರವಾಣಿಯಲ್ಲಿ ಮಾತನಾಡಿ ತಕ್ಷ ಣ ವ್ಯವಸ್ಥೆ ಕಲ್ಪಿಸುವಂತೆ ನಿರ್ದೇಶಿಸಿದರು.

ಅಭಿವೃದ್ಧಿಗೆ ಶ್ರಮಿಸಿ: ಗ್ರಾಮ ಪಂಚಾಯಿತಿಯಲ್ಲಿ ಸುಮಾರು 85 ಲಕ್ಷ ರೂಪಾಯಿ ಕಂದಾಯ ವಸೂಲಾತಿ ಬಾಕಿ ಉಳಿದಿದೆ. ಕೇವಲ 7 ಲಕ್ಷ ರೂಪಾಯಿ ಕಂದಾಯ ಮಾತ್ರ ಸಂಗ್ರಹವಾಗಿದೆ. ಈ ಬಗ್ಗೆ ಬಿಲ್‌ಕಲೆಕ್ಟರ್‌ಗಳು ಪರಿಶ್ರಮವಹಿಸಿ ಕೆಲಸ ಮಾಡಬೇಕು. ಅಭಿವೃದ್ಧಿ ವಿಚಾರದಲ್ಲಿ ಪಕ್ಷ , ವರ್ಗಗಳ ಭೇದ ಬೇಡ ಎಂದ ಅವರು, ಪಕ್ಷಾತೀತವಾಗಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿಗೆ ಶ್ರಮಿಸುವಂತೆ ಕರೆ ನೀಡಿದರು.

ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯರಾದ ಸುಷ್ಮ ಮಂಜುನಾಥ್‌, ಜಯಲಕ್ಷ ್ಮಮ್ಮ, ಗಂಗಮ್ಮ, ಮುನಿರಾಜು, ಚಿಕ್ಕಪಿಳ್ಳಪ್ಪ, ನಾಗರಾಜ್‌, ತಿಮ್ಮರಾಜು, ಮಾಜಿ ಅಧ್ಯಕ್ಷ ರಾಜ್‌ಕುಮಾರ್‌, ಗ್ರಾಪಂ ಅಭಿವೃದ್ಧಿ ಅಧಿಕಾರಿ ಮತ್ತಿತರರು ಪಾಲ್ಗೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ