ಆ್ಯಪ್ನಗರ

ಸೋಂಕಿತ ಎಂದು ನಿಂದಿಸಿದಕ್ಕೆ ಆತ್ಮಹತ್ಯೆಗೆ ಶರಣು; ಮಾಜಿ ಜನಪ್ರತಿನಿಧಿ, ಸ್ಥಳೀಯರಿಂದ ಅವಮಾನ?

ಅವಮಾನಿಸಿದ್ದರಿಂದ ಸೋಂಕಿತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಡ್ಡ ಬಳ್ಳಾಪುರದ ಖಾಸ್‌ಬಾಗ್‌ನಲ್ಲಿ ನಡೆದಿದೆ. ಈ ಬಗ್ಗೆ ಕುಟುಂಬಸ್ಥರು ಆರೋಪಿಸಿದ್ದು ಮಾಜಿ ಜನಪ್ರತಿನಿಧಿ ಹಾಗೂ ಸ್ಥಳೀಯರು ನಿಂದಿಸಿದ್ದರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ.

Vijaya Karnataka Web 22 Jul 2020, 8:07 am
ದೊಡ್ಡಬಳ್ಳಾಪುರ: ಸ್ಥಳೀಯ ಮಾಜಿ ನಗರ ಸಭಾಧ್ಯಕ್ಷರೊಬ್ಬರು ಮತ್ತು ಸ್ಥಳೀಯರು ಅವಮಾನಿಸಿದ್ದರಿಂದ 48 ವರ್ಷದ ಸೋಂಕಿತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಖಾಸ್‌ಬಾಗ್‌ನಲ್ಲಿ ನಡೆದಿದೆ ಎನ್ನಲಾಗಿದೆ. ಅವಮಾನಕ್ಕೆ ಬೇಸತ್ತು ರಾತ್ರಿ ಇಡೀ ದೊಡ್ಡಬಳ್ಳಾಪುರದಿಂದ ಬೆಂಗಳೂರಿನ ಹೆಸರುಘಟ್ಟಕ್ಕೆ ನಡೆದು ಹೋಗಿ ಅಲ್ಲಿನ ಕೆರೆಯ ಪಕ್ಕದಲ್ಲಿದ್ದ ಮರವೊಂದಕ್ಕೆ ನೇಣು ಬಿಗಿದಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
Vijaya Karnataka Web jpg - 2020-07-22T080249.666


ಈ ಕುರಿತು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಬಳಿಕ ಸತ್ಯಾಂಶ ಹೊರಬರಬೇಕಿದೆ. ಕೋವಿಡ್‌19 ಸೋಂಕು ತಗುಲಿದ್ದ ಕುಟುಂಬಕ್ಕೆ ಬೇರೆ ಕಡೆ ಹೋಗಿ ವಾಸಿಸುವಂತೆ ಜನಪ್ರತಿನಿಧಿ ದರ್ಪ ತೋರಿದ್ದರಿಂದ ನೇಣಿಗೆ ಶರಣಾಗಿದ್ದಾರೆ ಎಂದು ಕುಟುಂಬದ ಮೂಲಗಳು ಆರೋಪಿಸಿವೆ.

ಸೋಂಕಿತನ ಮಗ ಬೆಂಗಳೂರಿನಲ್ಲಿ ವಾಸವಿದ್ದ!
ಬೆಂಗಳೂರಿನಲ್ಲಿದ್ದ ಪುತ್ರನ ಆರೋಗ್ಯ ಕೈ ಕೊಟ್ಟಿತ್ತು. ಮಗನನ್ನು ನೋಡಿಕೊಳ್ಳಲು ಬೆಂಗಳೂರಿಗೆ ಬಂದಿದ್ದ. ಸೋಂಕಿತನ ಪತ್ನಿಗೂ ಸೋಂಕು ತಗಲಿತ್ತು. ಪತ್ನಿಯನ್ನು ದೊಡ್ಡಬಳ್ಳಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ ಬಳಿಕ ಸೋಂಕಿತನ ಇನ್ನೊಬ್ಬ ಪುತ್ರನನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು.

ಬೆಂಗಳೂರು ಗ್ರಾಮಾಂತರ: ಒಂದೇ ದಿನ 208 ಕೊರೊನಾ ಪ್ರಕರಣ, ಸೋಂಕಿತರ ಸಂಖ್ಯೆ 845ಕ್ಕೆ ಏರಿಕೆ

ಸೋಂಕಿತ ವ್ಯಕ್ತಿ ದೊಡ್ಡಬಳ್ಳಾಪುರ ನಗರದ ಸರಕಾರಿ ಆಸ್ಪತ್ರೆಯಲ್ಲಿ ಒಂದು ವಾರಗಳ ಚಿಕಿತ್ಸೆ ಪಡೆದುಕೊಂಡು ಮನೆ ಬಂದಾಗ ಮನೆಯನ್ನು ಸೀಲ್‌ಡೌನ್‌ ಮಾಡಲಾಗಿತ್ತು. ಈ ಬಗ್ಗೆ ಅಕ್ಕಪಕ್ಕದ ಮನೆಯವರು ಹೀಯಾಳಿಸಿ ಅವಮಾನ ಮಾಡಿದ್ದರು. 'ನಿಮ್ಮಿಂದ ನಮಗೆಲ್ಲಾ ಸಮಸ್ಯೆಯಾಯಿತು' ಎಂದು ಮೂದಲಿಸಿದ್ದರು.

ಸಾಯುವ ಮುನ್ನ ಮೃತರು ಮಗಳಿಗೆ ಕರೆ ಮಾಡಿ ತನಗೆ ಆದ ನೋವನ್ನು ತಿಳಿಸಿದ್ದಾರೆ. ''ಬುದ್ಧಿ ಮಾತು ಹೇಳಿದ್ದೇವೆ ಅಷ್ಟೇ, ಯಾರು ಮನೆಯಿಂದ ಹೊರ ಬರಬೇಡಿ ಅಂತಾ ಅಷ್ಟೇ.. ಅವರನ್ನು ನಾವು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿಲ್ಲ,'' ಎಂದು ನಗರಸಭಾ ಮಾಜಿ ಅಧ್ಯಕ್ಷ ಮುದ್ದಪ್ಪ ಸ್ಪಷ್ಟನೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ