ಆ್ಯಪ್ನಗರ

ವೈಕುಂಠ ಏಕಾದಶಿ: ಜಿಲ್ಲೆಯ ನಾನಾ ದೇವಾಲಯಗಳಲ್ಲಿ ಸಿದ್ಧತೆ

ವೈಕುಂಠ ಏಕಾದಶಿ ಪ್ರಯುಕ್ತ ನಂದಗುಡಿ ಹೋಬಳಿಯಾದ್ಯಂತ ನಾನಾ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

Vijaya Karnataka 18 Dec 2018, 5:00 am
ನಂದಗುಡಿ: ವೈಕುಂಠ ಏಕಾದಶಿ ಪ್ರಯುಕ್ತ ನಂದಗುಡಿ ಹೋಬಳಿಯಾದ್ಯಂತ ನಾನಾ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
Vijaya Karnataka Web vykuntha yekadashi preparations at tempeles
ವೈಕುಂಠ ಏಕಾದಶಿ: ಜಿಲ್ಲೆಯ ನಾನಾ ದೇವಾಲಯಗಳಲ್ಲಿ ಸಿದ್ಧತೆ


ಹೋಬಳಿಯ ಹಲವು ಗ್ರಾಮಗಳ ದೇವಾಲಯಗಳಲ್ಲಿ ವೈಕುಂಠ ಏಕಾದಶಿಯನ್ನು ಕಳೆದ ವರ್ಷದಂತೆ ಈ ಬಾರಿಯೂ ಸಡಗರ ಸಂಭ್ರಮದಿಂದ ಆಚರಿಸಲು ಸಕಲ ಸಿದ್ಧತೆಗಳು ನಡೆದಿದೆ. ವಿಶೇಷವಾಗಿ ವಿಷ್ಣು ಸಂಬಂಧಿತ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ನಂದಗುಡಿಯ ಸಮೀಪದ ಈಸ್ತೂರು ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ಮುಂಜಾನೆಯಿಂದಲೇ ಪೂಜಾ ಕಾರ್ಯಗಳು ಆರಂಭವಾಗಿ ಶ್ರೀ ವಾಸುದೇವ ಪುಣ್ಯಾಹ, ಶ್ರೀಸ್ವಾಮಿಗೆ ಪಂಚಾಮೃತ ಅಭಿಷೇಕ ಮತ್ತು ಅಲಂಕಾರ ಉತ್ತರ ದ್ವಾರ ಪ್ರವೇಶ ನಂತರ ಮಹಾ ಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಲಿದೆ.

ಕೆ.ಸತ್ಯವಾರದ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯದಲ್ಲಿ ಶುಭ ಬ್ರಾಹ್ಮಿ ಮುಹೂರ್ತದಲ್ಲಿ ಪೂಜಾ ಕೈಂಕರ್ಯಗಳು ಪ್ರಾರಂಭಗೊಂಡು ನಾನಾ ಸೇವೆಗಳೊಂದಿಗೆ, ಹೋಮ, ಹವನ, ಅಭಿಷೇಕಗಳನ್ನು ನೆರವೇರಿಸಿ ಶ್ರೀಸ್ವಾಮಿಗೆ ಅಲಂಕರಿಸಿ ಉಯ್ಯಾಲೆ ಸೇವೆಯೊಂದಿಗೆ ಸ್ವರ್ಗದ ಬಾಗಿಲು ಪ್ರವೇಶ ಮಾಡಿ ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ಕಾರ್ಯವನ್ನು ಅದ್ದೂರಿಯಾಗಿ ನೆರವೇರಿಸಲಾಗುತ್ತದೆ.

ಬೆಂಗಳೂರು-ಚಿಂತಾಮಣಿ ಮುಖ್ಯ ರಸ್ತೆಯಲ್ಲಿರುವ ಶಿವನಾಪುರ ಕ್ರಾಸ್‌ನ ಚಂದ್ರಗಿರಿ ವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿಯ ಅಂಗವಾಗಿ ವೆಂಕಟೇಶ್ವರ ಸ್ವಾಮಿಗೆ ಬೆಳಗ್ಗೆ ಸುಪ್ರಭಾತ ಸೇವೆ, ಗಣಪತಿ ಪೂಜೆ, ನವಗ್ರಹ ಪೂಜೆ, ಕಲಶ ಆರಾಧನೆ, ಅಗ್ನಿ ಪ್ರತಿಷ್ಠೆ, ಗಣಪತಿ ಹೋಮ, ನವಗ್ರಹ ಹೋಮ, ಪೂರ್ಣಾಹುತಿ ನಂತರ ಅಷ್ಟಾಕ್ಷ ರಿ ಹೋಮ, ನೈವೇದ್ಯ, ಅಷ್ಟಾವಧಾನ ಸೇವೆ, ಶಾತ್ತುಮೊರೈ ಹಾಗೂ ಮಹಾಮಂಗಳಾರತಿ ಸೇವೆಗಳನ್ನು ಹಮ್ಮಿಕೊಳ್ಳಲಾಗಿದೆ.

ವೈಕುಂಠ ಏಕಾದಶಿ ಅಂಗವಾಗಿ ಹೋಬಳಿಯ ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆ ಇದ್ದು ಸಕಲ ರೀತಿಯ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ