ಆ್ಯಪ್ನಗರ

ಮತದಾನ ಜಾಗೃತಿಗಾಗಿ ಕಾಲ್ನಡಿಗೆ ಜಾಥ, ಬೀದಿ ನಾಟಕ

ನವೋದಯ ಚಾರಿಟೆಬಲ್‌ ಟ್ರಸ್ಟ್‌ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ, ಬೆಂಗಳೂರು ಐಐಪಿಚ್‌ ಆತ್ರೆಯ ಆಯುರ್ವೇದ ಮಹಾವಿದ್ಯಾಲಯದ ಸಹಯೋಗದೊಂದಿಗೆ ದೊಡ್ಡಬಳ್ಳಾಪುರ ನಗರದಲ್ಲಿ ಕಡ್ಡಾಯ ಮತದಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕಾಲ್ನಡಿಗೆ ಜಾಥ ಮತ್ತು ಬೀದಿ ನಾಟಕ ನಡೆಯಿತು.

Vijaya Karnataka 17 Apr 2019, 5:00 am
ವಿಕ ಸುದ್ದಿಲೋಕ ದೊಡ್ಡಬಳ್ಳಾಪುರ
Vijaya Karnataka Web walkathan for voting awareness street play
ಮತದಾನ ಜಾಗೃತಿಗಾಗಿ ಕಾಲ್ನಡಿಗೆ ಜಾಥ, ಬೀದಿ ನಾಟಕ

ನವೋದಯ ಚಾರಿಟೆಬಲ್‌ ಟ್ರಸ್ಟ್‌ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ, ಬೆಂಗಳೂರು ಐಐಪಿಚ್‌ ಆತ್ರೆಯ ಆಯುರ್ವೇದ ಮಹಾವಿದ್ಯಾಲಯದ ಸಹಯೋಗದೊಂದಿಗೆ ದೊಡ್ಡಬಳ್ಳಾಪುರ ನಗರದಲ್ಲಿ ಕಡ್ಡಾಯ ಮತದಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕಾಲ್ನಡಿಗೆ ಜಾಥ ಮತ್ತು ಬೀದಿ ನಾಟಕ ನಡೆಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಅಧಿಕಾರಿ ಯೋಗೇಶ್‌ ಗೌಡ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ದೇಹದ ಆರೋಗ್ಯಕ್ಕೆ ವೈದ್ಯರು ಎಷ್ಟು ಮುಖ್ಯವೋ ಹಾಗೇ ದೇಶದ ಆರೋಗ್ಯ ಮತ್ತು ಅಭಿವೇದ್ಧಿಗೆ ಮತದಾನ ಅಷ್ಟೇ ಮುಖ್ಯ. ಹಾಗಾಗಿ ಮತದಾರರೆಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಹೇಳಿದರು.

ನವೋದಯ ಚಾರಿಟೆಬಲ್‌ ಟ್ರೆಸ್ಟ್‌ ಅಧ್ಯಕ್ಷ ನವೋದಯ ಚೇತನ್‌ ಮಾತನಾಡಿ, ಈಗಷ್ಟೇ ಮತದಾನದ ಹಕ್ಕನ್ನು ಪಡೆದಿರುವ ಯುವ ಮತದಾರರು ಮತಚಲಾಯಿಸುವುದರ ಮೂಲಕ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಬೇಕೆಂದು ತಿಳಿಸಿದರು.

ಆತ್ರೇಯ ಕಾಲೇಜಿನ ವಿದ್ಯಾರ್ಥಿಗಳು ಬೀದಿ ನಾಟಕ ಮಾಡುವುದರ ಮುಖಾಂತರ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಅಧಿಕಾರಿ ಯೋಗೇಶ್‌ ಗೌಡ, ಡಾ.ಪರಮೇಶ್‌, ತಾಲೂಕು ಹೆಲ್ತ್‌ ಇನ್ಸ್ಪೆಕ್ಟರ್‌ ನರಸಿಂಹಮೂರ್ತಿ, ಆತ್ರೆಯ ಆಯುರ್ವೇದ ಕಾಲೇಜಿನ ಡಾ.ಧನ್ಯ, ನವೋದಯ ಚಾರಿಟೆಬಲ್‌ ಟ್ರಸ್ಟ್‌ ಅಧ್ಯಕ್ಷ ನವೋದಯ ಚೇತನ್‌, ಕಾನೂನು ಸಲಹೆಗಾರ ಮಂಜುನಾಥ್‌, ವೈ.ಟಿ.ಲೋಹಿತ್‌, ಜನಾರ್ಧನ್‌, ಸಂತೋಷ್‌, ಆಶಾ ಕಾರ್ಯಕರ್ತೆಯರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಮತ್ತು ಆತ್ರೆಯ ಆಯುರ್ವೇದ ಕಾಲೇಜಿನ 50 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ