ಆ್ಯಪ್ನಗರ

ಯುವಕರಲ್ಲಿ ಸಮಾಜ ಪರಿವರ್ತನೆಯ ಶಕ್ತಿ ಇದೆ

ಯುವಕರಲ್ಲಿ ಸಮಾಜದ ಪರಿವರ್ತನೆಯ ಶಕ್ತಿ ಇದ್ದು ಧರ್ಮದ ಒಳಿತಿಗೆ ಮುಂದಾಗಬೇಕು. ನಾವು ಧರ್ಮವನ್ನು ಕಾಪಾಡಿದರೆ ಧರ್ಮವು ನಮ್ಮನ್ನು ಕಾಪಾಡುತ್ತದೆ ಎಂದು ಚೌಡಪನಹಳ್ಳಿ ಮುನೇಗೌಡ ಹೇಳಿದರು.

Vijaya Karnataka 14 Dec 2018, 5:00 am
ವಿಜಯಪುರ: ಯುವಕರಲ್ಲಿ ಸಮಾಜದ ಪರಿವರ್ತನೆಯ ಶಕ್ತಿ ಇದ್ದು ಧರ್ಮದ ಒಳಿತಿಗೆ ಮುಂದಾಗಬೇಕು. ನಾವು ಧರ್ಮವನ್ನು ಕಾಪಾಡಿದರೆ ಧರ್ಮವು ನಮ್ಮನ್ನು ಕಾಪಾಡುತ್ತದೆ ಎಂದು ಚೌಡಪನಹಳ್ಳಿ ಮುನೇಗೌಡ ಹೇಳಿದರು.
Vijaya Karnataka Web youth has the power to change society
ಯುವಕರಲ್ಲಿ ಸಮಾಜ ಪರಿವರ್ತನೆಯ ಶಕ್ತಿ ಇದೆ


ಪಟ್ಟಣದ ಸಮೀಪವಿರುವ ಕೊಮ್ಮಸಂದ್ರ ಗ್ರಾಮದದಲ್ಲಿ ಯೋಗಿನಾರಾಯಣ ದೇವಾಲಯದಲ್ಲಿ ಸದ್ಗುರು ಯೋಗಿ ನಾರೇಯಣ ಯತೀಂದ್ರ ಸೇವಾ ಟ್ರಸ್ಟ್‌ ವತಿಯಿಂದ ಶ್ರೀದೇವಿ ಭೂದೇವಿ ಸಹಿತ ತಿರುಕಲ್ಯಾಣೋತ್ಸವದ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜನರಲ್ಲಿ ಭಕ್ತಿ ಆಧ್ಯಾತ್ಮಿಕ ಮನೋಭಾವವನ್ನು ಬೆಳೆಸುವಲ್ಲಿ ದೇವಾಲಯಗಳ ಅವಶ್ಯವಿದೆ. ಜೀವನದಲ್ಲಿ ಧಾರ್ಮಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ದೇವಾಲಯಗಳು ಅವಶ್ಯಕ. ದೇವಾಲಯಗಳು ಶ್ರದ್ಧಾ ಕೇಂದ್ರಗಳಾಗಬೇಕು. ಪ್ರತಿಯೊಬ್ಬ ಮನುಷ್ಯನೂ ತನ್ನ ಜೀವನದಲ್ಲಿ ಧಾರ್ಮಿಕ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಶಾಂತಿ ನೆಮ್ಮದಿ ಸಿಗುತ್ತದೆ. ಇಂದು ಸಮಾಜವು ಮೋಸ, ವಂಚನೆ, ಅಪ್ರಾಮಾಣಿಕತೆ, ಭ್ರಷ್ಟಾಚಾರಗಳಿಂದ ಕಲುಷಿತಗೊಳ್ಳುತ್ತಲಿದೆ. ಹಲವಾರು ಜಂಜಾಟಗಳ ಒತ್ತಡದಲ್ಲಿ ಜನರಿಗೆ ದೇವರಲ್ಲಿ ಭಕ್ತಿ ಕಡಿಮೆ ಆಗುತ್ತಿರುವುದು ವಿಷಾದಕರ ಸಂಗತಿ ಎಂದರು.

ಮುಖಂಡ ದೇವರಾಜು ಮಾತನಾಡಿ, ಧಾರ್ಮಿಕ ಕೇಂದ್ರಗಳಾದ ದೇವಾಲಯಗಳ ಉಳಿಯುವಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು, ಮನುಷ್ಯ ಹುಟ್ಟುವಾಗ ಮತ್ತು ಸಾಯುವಾಗ ಏನನ್ನೂ ತಂದು ತೆಗೆದುಕೊಂಡು ಹೋಗುವುದಿಲ್ಲ. ಬದುಕಿದ್ದಷ್ಟು ದಿನ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಬಲಮುರಿ ಶ್ರೀನಿವಾಸ್‌, ವಿ.ಕೃಷ್ಣಪ್ಪ, ಡಿ.ಎಸ್‌.ಲಕ್ಷ್ಮೀಪತಿ, ಸ್ವಾಮಿ ನಾರಾಯಣಸ್ವಾಮಿ, ಕೆಂಪೇಗೌಡ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ