Please enable javascript.ಬೆಳೆ ವಿಮೆ ಪರಿಹಾರ ಕೊಡಿಸಲು ಸಚಿವರಿಗೆ ಆಗ್ರಹ - ಬೆಳೆ ವಿಮೆ ಪರಿಹಾರ ಕೊಡಿಸಲು ಸಚಿವರಿಗೆ ಆಗ್ರಹ - Vijay Karnataka

ಬೆಳೆ ವಿಮೆ ಪರಿಹಾರ ಕೊಡಿಸಲು ಸಚಿವರಿಗೆ ಆಗ್ರಹ

ವಿಕ ಸುದ್ದಿಲೋಕ 16 Dec 2016, 4:46 pm
Subscribe

ಅತಿವೃಷ್ಟಿಯಿಂದಾಗಿ ಬೆಳೆ ಹಾನಿಯಾಗಿರುವ, ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ಮಾಡಿಸಿರುವ ರೈತರಿಗೆ ತಕ್ಷಣ ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘದ ಪ್ರಮುಖರು ಸಚಿವ ಎಚ್‌.ಕೆ. ಪಾಟೀಲ್‌ ಅವರಿಗೆ ಒತ್ತಾಯಿಸಿದರು.

ಬೆಳೆ ವಿಮೆ ಪರಿಹಾರ ಕೊಡಿಸಲು ಸಚಿವರಿಗೆ ಆಗ್ರಹ

ಬೀದರ್‌;ಅತಿವೃಷ್ಟಿಯಿಂದಾಗಿ ಬೆಳೆ ಹಾನಿಯಾಗಿರುವ, ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ಮಾಡಿಸಿರುವ ರೈತರಿಗೆ ತಕ್ಷಣ ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘದ ಪ್ರಮುಖರು ಸಚಿವ ಎಚ್‌.ಕೆ. ಪಾಟೀಲ್‌ ಅವರಿಗೆ ಒತ್ತಾಯಿಸಿದರು.

ಜಿಪಂನಲ್ಲಿ ಸಚಿವರಿಗೆ ಮನವಿ ಸಲ್ಲಿಸಿದ ರೈತರು, ಎನ್‌ಡಿಆರ್‌ಎಫ್‌ ನಿಯಮದಂತೆ ಬೆಳೆ ಹಾನಿಯಾಗಿರುವ 3 ಲಕ್ಷ ಹೆಕ್ಟೇರ್‌ನ ಪ್ರತಿ ಎಕರೆಗೆ 2720 ರೂ. ಕೂಡಲೇ ಕೊಡಬೇಕು. ಬೀದರ್‌ನ ಬೀದರ್‌ ಸಹಕಾರಿ ಸಕ್ಕರೆ ಕಾರಖಾನೆಗೆ ಸರಕಾರದಿಂದ ಅನುದಾನ ಕೊಡಬೇಕು ಎಂದರು.

ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ರೈತ ಸಂಘದ ಪ್ರಮುಖರು, ರಾತ್ರಿ ವೇಳೆ ನೀಡಲಾಗುತ್ತಿರುವ ತ್ರಿ ಫೇಸ್‌ ವಿದ್ಯುತ್‌ ಬದಲು, ಹಗಲಿನಲ್ಲಿ ತ್ರಿ ಫೇಸ್‌ ವಿದ್ಯುತ್‌ ನೀಡಬೇಕು. ಕೂಡಲೇ ಸರಕಾರ ರೈತರ ಸಮಸ್ಯೆಗೆ ಸ್ಪಂದಿಸಿ ಬೇಡಿಕೆಗಳನ್ನು ಈಡೇರಿಸುವ ಮೂಲ ಭರವಸೆ ತುಂಬಬೇಕು ಎಂದು ಮನವಿ ಮಾಡಲಾಯಿತು.

ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಗೌರವಾಧ್ಯಕ್ಷ ವಿಶ್ವನಾಥ ಪಾಟೀಲ್‌ ಕೌಠಾ, ದಯಾನಂದ ಸ್ವಾಮಿ ಸಿರ್ಸಿ, ಶಾಮಣ್ಣ ಬಾವಗಿ, ಸಿದ್ರಾಮಪ್ಪ ಆಣದೂರೆ, ವಿಠಲರೆಡ್ಡಿ ಆಣದೂರ, ಪ್ರಕಾಶ್‌ ಬಾವಗಿ, ಶೋಭಾವತಿ ಕಾರಭಾರಿ, ಚಂದ್ರಶೇಖರ ಜಮದಂಡಿ, ಕೋಂಡಿಬಾರಾವ್‌ ಪಾಂಡ್ರೆ, ಸತೀಶ್‌ ನನ್ನೂರೆ, ಶ್ರೀಮಂತ ಬಿರಾದಾರ್‌ ಸೇರಿದಂತೆ ಹಲವಾರು ರೈತರು ಇದ್ದರು.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ