ಆ್ಯಪ್ನಗರ

100 ಕಡೆ ದಾಳಿ; ಟನ್‌ಗೂ ಅಧಿಕ ಪ್ಲಾಸ್ಟಿಕ್‌ ಜಪ್ತಿ

ಒಂದು ವಾರದಲ್ಲಿ 100ಕ್ಕೂ ಅಧಿಕ ಸ್ಥಳಗಳಲ್ಲಿ ದಾಳಿ ನಡೆಸಿರುವ ಬೀದರ್‌ ನಗರ ಸಭೆಯ ಅಧಿಕಾರಿಗಳು ಒಂದು ಟನ್‌ಗೂ ಅಧಿಕ ಪ್ಲಾಸ್ಟಿಕ್‌ ಜಪ್ತಿ ಮಾಡಿದ್ದಾರೆ.

Vijaya Karnataka 22 Jul 2019, 5:00 am
ಬೀದರ್‌:ಒಂದು ವಾರದಲ್ಲಿ 100ಕ್ಕೂ ಅಧಿಕ ಸ್ಥಳಗಳಲ್ಲಿ ದಾಳಿ ನಡೆಸಿರುವ ಬೀದರ್‌ ನಗರ ಸಭೆಯ ಅಧಿಕಾರಿಗಳು ಒಂದು ಟನ್‌ಗೂ ಅಧಿಕ ಪ್ಲಾಸ್ಟಿಕ್‌ ಜಪ್ತಿ ಮಾಡಿದ್ದಾರೆ. ಪ್ಲಾಸ್ಟಿಕ್‌ ಮುಕ್ತ ಆಂದೋಲನ ಮಾದರಿಯಲ್ಲಿ ನಡೆಯುತ್ತಿರುವ ಈ ದಾಳಿಯಿಂದಾಗಿ ಅವ್ಯಾಹತವಾಗಿ ಚಾಲ್ತಿಯಲ್ಲಿದ್ದ ಪ್ಲಾಸ್ಟಿಕ್‌ ಬಳಕೆ ಒಂದಷ್ಟು ಕಡಿಮೆಯಾಗುವ ಭರವಸೆ ಮೂಡಿಸಿದೆ. ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಬೇಡ ಎಂಬ ನಿಯಮ ಜಾರಿಯಲ್ಲಿದ್ದರೂ ನಗರದಲ್ಲಿ ಮಾತ್ರ ಬಳಕೆಯಲ್ಲಿತ್ತು, ಅದಕ್ಕೀಗ ನಗರಸಭೆ ಮತ್ತೆ ಬ್ರೇಕ್‌ ಹಾಕುತ್ತಿದೆ.
Vijaya Karnataka Web 100 side attacks more than one ton of plastic foreclosure
100 ಕಡೆ ದಾಳಿ; ಟನ್‌ಗೂ ಅಧಿಕ ಪ್ಲಾಸ್ಟಿಕ್‌ ಜಪ್ತಿ


ನಗರದ ನೂರಕ್ಕೂ ಅಧಿಕ ಅಂಗಡಿ-ಮುಂಗಟ್ಟು, ಹೋಟೆಲ್‌, ಮಳಿಗೆ, ಬಟ್ಟೆ ಅಂಗಡಿಗಳ ಮೇಲೆ ನಗರಸಭೆಯ ಅಧಿಕಾರಿಗಳು ದಾಳಿ ನಡೆಸಿ, ಟನ್‌ಗಟ್ಟಲೆ ಪ್ಲಾಸ್ಟಿಕ್‌ ಸಂಗ್ರಹಿಸಿದ್ದಾರೆ. ಇಲ್ಲಿನ ವಿಜಯಲಕ್ಷ್ಮಿ ಸಾರಿ ಸೆಂಟರ್‌, ಸಾಯಿ ಫ್ಯಾಬ್ರಿಕ್ಸ್‌, ರಾಯಲ್‌ ಅನಮೋಲ್‌ ಹೋಟೆಲ್‌ ಸೇರಿದಂತೆ ಪ್ರಮುಖ ಮಳಿಗೆಗಳು ಹಾಗೂ ಹೋಟೆಲ್‌ಗಳಲ್ಲಿ ದಾಳಿ ನಡೆಸಿ ಅಲ್ಲಿ ಬಳಕೆಯಲ್ಲಿದ್ದ ಪ್ಲಾಸ್ಟಿಕ್‌ ಅನ್ನು ಜಪ್ತಿ ಮಾಡಲಾಗಿದೆ.

ಕಿರಾಣಾ ಅಂಗಡಿಗಳು, ತರಕಾರಿಯ ತಳ್ಳು ಬಂಡಿಗಳು, ಪಾನಿ ಪುರಿ ಬಂಡಿಗಳು, ಹೋಟೆಲ್‌ಗಳು ಹೀಗೆ ವಿವಿಧೆಡೆ ಎಗ್ಗಿಲ್ಲದೆ ಬಳಕೆ ನಡೆಯುತ್ತಿದೆ. ಅಧಿಕಾರಿಗಳ ಮಾತಿಗೆ ಹಾಗೂ ಕಾನೂನನ್ನು ಮೀರಿ ನಡೆದುಕೊಳ್ಳÜಲಾಗುತ್ತಿದೆ. ಇದೀಗ ನಗರಸಭೆಯವರು ಪ್ಲಾಸ್ಟಿಕ್‌ ನಿಯಂತ್ರಣಕ್ಕೆ ಮತ್ತೆ ಮುಂದಾಗಿದ್ದು, ಇದು ಒಂದೆರಡು ದಿನ ನಡೆಸಿ ನಿಲ್ಲಿಸಬಾರದು. ನಿರಂತರ ದಾಳಿ ನಡೆಸುವ ಮೂಲಕ ಪ್ಲಾಸ್ಟಿಕ್‌ಮುಕ್ತ ನಗರವಾಗಿಸಬೇಕು ಎಂಬುದು ಸ್ಥಳೀಯರ ಒತ್ತಾಸೆಯಾಗಿದೆ.

ಪ್ಲಾಸ್ಟಿಕ್‌ ಪಡೆಯುವವರ ಮೇಲೂ ದಂಡ


ಪ್ಲಾಸ್ಟಿಕ್‌ ಬಳಕೆ ಮಾಡುವವರಷ್ಟೇ ಅಲ್ಲದೆ, ಅದನ್ನು ಅಂಗಡಿ, ಹೋಟೆಲ್‌, ಮಳಿಗೆಗಳಿಂದ ಪಡೆದುಕೊಂಡು ಒಯ್ಯುವವರ ಮೇಲೂ ದಂಡ ವಿಧಿಸಲಾಗುತ್ತದೆ ಎಂದು ಬೀದರ್‌ ನಗರಸಭೆಯ ಪೌರಾಯುಕ್ತ ಬಲಭೀಮ್‌ ಕಾಂಬಳೆ ವಿಕಕ್ಕೆ ತಿಳಿಸಿದರು. ನಗರದ ಎಲ್ಲ 35 ವಾರ್ಡ್‌ಗಳಲ್ಲಿ ಕಟ್ಟು ನಿಟ್ಟಾಗಿ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಲಾಗಿದೆ. ಯಾರೂ ಬಳಸಬಾರದು. ಯಾರೂ ಒಯ್ಯಕೂಡದು. ಬಳಸಿದವರ ಹಾಗೂ ಒಯ್ಯುವವರ ಮೇಲೂ ದಂಡ ವಿಧಿಸಲಾಗುತ್ತದೆ. ನಗರದ ಜನರೂ ಸಹ ನಗರಸಭೆಯ ಈ ಕಾರ‍್ಯಕ್ಕೆ ಸಾಥ್‌ ನೀಡಬೇಕು ಎಂದು ಕಾಂಬಳೆ ಮನವಿ ಮಾಡಿದ್ದಾರೆ.

ಬೀದರ್‌ ನಗರದಲ್ಲಿ ಕಳೆದ ಒಂದು ವಾರದಿಂದ ನಗರಸಭೆಯಿಂದ 100ಕ್ಕೂ ಅಧಿಕ ಕಡೆಗಳಲ್ಲಿ ದಾಳಿ ನಡೆಸಿ, ಒಂದು ಟನ್‌ಗೂ ಅಧಿಕ ಪ್ಲಾಸ್ಟಿಕ್‌ ಜಪ್ತಿ ಮಾಡಲಾಗಿದೆ. ಈ ದಾಳಿ ಇನ್ನು ಮೇಲೆ ನಿರಂತರವಾಗಿ ನಡೆಯಲಿದೆ. ನಗರದಲ್ಲಿ ಯಾರೊಬ್ಬರೂ ಪ್ಲಾಸ್ಟಿಕ್‌ ಬಳಕೆ ಮಾಡಬಾರದು. ಈ ಮೂಲಕ ನಗರಸಭೆಗೆ ಸಾಥ್‌ ನೀಡಬೇಕು. ಇನ್ಮುಂದೆ, ಪ್ಲಾಸ್ಟಿಕ್‌ ಬಳಕೆ ಮಾಡುವವರ ಹಾಗೂ ಅದನ್ನು ಕೊಂಡೊಯ್ಯುವವರ ಮೇಲೂ ದಂಡ ಹೇರಲಾಗುವುದು.

- ಬಲಭೀಮ್‌ ಕಾಂಬಳೆ, ಪೌರಾಯುಕ್ತ, ನಗರಸಭೆ ಬೀದರ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ