ಆ್ಯಪ್ನಗರ

112 ತುರ್ತು ಸ್ಪಂದನ ಸಹಾಯ ವ್ಯವಸ್ಥೆಗೆ ಚಾಲನೆ

112 ತುರ್ತು ಸ್ಪಂದನ ಸಹಾಯ ವ್ಯವಸ್ಥೆಗೆ ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಟಿ. ಶ್ರೀಧರ್‌ ಅವರು ನಗರದ ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಅವರ ಕಚೇರಿ ಆವರಣದಲ್ಲಿಗುರುವಾರ ಸಂಜೆ ಚಾಲನೆ ನೀಡಿದರು.

Vijaya Karnataka 1 Nov 2019, 5:00 am
ಬೀದರ್‌:112 ತುರ್ತು ಸ್ಪಂದನ ಸಹಾಯ ವ್ಯವಸ್ಥೆಗೆ ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಟಿ. ಶ್ರೀಧರ್‌ ಅವರು ನಗರದ ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಅವರ ಕಚೇರಿ ಆವರಣದಲ್ಲಿಗುರುವಾರ ಸಂಜೆ ಚಾಲನೆ ನೀಡಿದರು.
Vijaya Karnataka Web 112 emergency response assistance system
112 ತುರ್ತು ಸ್ಪಂದನ ಸಹಾಯ ವ್ಯವಸ್ಥೆಗೆ ಚಾಲನೆ


ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 112 ತುರ್ತು ಸ್ಪಂದನ ಸಹಾಯ ವ್ಯವಸ್ಥೆಯು ಅಪರಾಧಗಳನ್ನು ಕಡಿಮೆ ಮಾಡಲು, ಅಪರಾಧ ವಿಶ್ಲೇಷಣೆ ಮತ್ತು ಮುನ್ಸೂಚನೆ ಬೆಂಬಲಕ್ಕೆ ಸಹಾಯವಾಗಲಿದೆ ಎಂದು ತಿಳಿಸಿದರು.

ಮೊಬೈಲ್‌ಗಳ ಮೂಲಕ 112 ಸಂಖ್ಯೆಗೆ ಡಯಲ್‌ ಮಾಡುವ ವಿಧಾನ, ಪ್ಯಾನಿಕ್‌ ಅಲರ್ಟ್‌ಗಾಗಿ ಸಾಮಾನ್ಯ ಫೋನಿನಲ್ಲಿ5 ಅಥವಾ 9 ಸಂಖ್ಯೆಯನ್ನು ಲಾಂಗ್‌ಪ್ರೆಸ್‌ ಅಥವಾ ಪವರ್‌ ಬಟನ್‌ ಅನ್ನು 3 ಇಲ್ಲವೇ 5 ಬಾರಿ ವೇಗವಾಗಿ ಪ್ರೆಸ್‌ ಮಾಡುವ ವಿಧಾನ, 112ಇಂಡಿಯಾ ಮೊಬೈಲ್‌ ಆ್ಯಪ್‌ ವಿಧಾನಗಳ ಮೂಲಕ ತುರ್ತು ಸಂದರ್ಭದಲ್ಲಿಸಾರ್ವಜನಿಕರು ತುರ್ತು ಸೇವೆಗಳನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.

112 ಎನ್ನುವುದು ದೇಶದಾದ್ಯಂತ ಒಂದೇ ತುರ್ತು ಕರೆ ಸಂಖ್ಯೆಯಾಗಿದೆ ಎಂದು ಹೇಳಿದ ಅವರು, ರಾಜ್ಯ ತುರ್ತು ಪ್ರತಿಕ್ರಿಯೆ ಕೇಂದ್ರದಿಂದ ಸೇವಾ ಸಮನ್ವಯ, ನಾಗರಿಕರಿಗೆ 24/7 ಕಾಲ ತುರ್ತು ಪ್ರತಿಕ್ರಿಯೆ ಬೆಂಬಲ ಸೇವೆಗಳು, ಸೇವಾ ವಿನಂತಿದಾರರ ಸ್ವಯಂಚಾಲಿತ ಸ್ಥಳ ಗುರುತಿಸುವಿಕೆ, ಡಿಜಿಟಲ್‌ ನಕ್ಷೆಯಲ್ಲಿಸೇವಾ ವಿನಂತಿಗಳು ಮತ್ತು ತುರ್ತು ಸ್ಪಂದನ ವಾಹನಗಳ ನೇರ ಪತ್ತೆಯು ಈ 112 ತುರ್ತು ಸ್ಪಂದನ ಸಹಾಯ ವ್ಯವಸ್ಥೆಯ ಅನುಕೂಲತೆಗಳಾಗಿವೆ ಎಂದು ಅವರು ವಿವರಿಸಿದರು.

ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಅವರ ಕಚೇರಿಯ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ