ಆ್ಯಪ್ನಗರ

ಶಿಬಿರದಲ್ಲಿ118 ಜನರ ಆರೋಗ್ಯ ತಪಾಸಣೆ

ಹಾರಕೂಡನ ಡಾ.ಚನ್ನವೀರ ಶಿವಾಚಾರ್ಯರ 57ನೇ ಜನ್ಮ ದಿನದ ನಿಮಿತ್ತ ಸ್ವಾಗತ ಸಮಿತಿಯಿಂದ ನಗರದ ಎಸ್‌ಎಸ್‌ಕೆಬಿ ಕಾಲೇಜು ಹತ್ತಿರದ ಯಾತ್ರಿ ನಿವಾಸದಲ್ಲಿಬುಧವಾರ ಹೃದಯ ರೋಗ ತಪಾಸಣೆ ಶಿಬಿರ ಯಶಸ್ವಿಯಾಗಿ ನಡೆಯಿತು.

Vijaya Karnataka 15 Nov 2019, 10:08 pm
ಬಸವಕಲ್ಯಾಣ:ಹಾರಕೂಡನ ಡಾ.ಚನ್ನವೀರ ಶಿವಾಚಾರ್ಯರ 57ನೇ ಜನ್ಮ ದಿನದ ನಿಮಿತ್ತ ಸ್ವಾಗತ ಸಮಿತಿಯಿಂದ ನಗರದ ಎಸ್‌ಎಸ್‌ಕೆಬಿ ಕಾಲೇಜು ಹತ್ತಿರದ ಯಾತ್ರಿ ನಿವಾಸದಲ್ಲಿಬುಧವಾರ ಹೃದಯ ರೋಗ ತಪಾಸಣೆ ಶಿಬಿರ ಯಶಸ್ವಿಯಾಗಿ ನಡೆಯಿತು.
Vijaya Karnataka Web 118 people health check of
ಶಿಬಿರದಲ್ಲಿ118 ಜನರ ಆರೋಗ್ಯ ತಪಾಸಣೆ


ಸುಮಾರು 118ಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ನಗರ ಪ್ರದೇಶ ಸೇರಿದಂತೆ ದೂರದ ಗ್ರಾಮಗಳಿಂದ ಆಗಮಿಸಿ ಆರೋಗ್ಯದ ಸಮಸ್ಯೆ ಕುರಿತು ವೈದ್ಯರೊಂದಿಗೆ ಚರ್ಚಿಸಿದರು.

ಹೈದರಾಬಾದನ ಸಿಟಿಜನ್ಸ್‌ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯ ಶ್ರೀಕಾಂತ ರಡ್ಡಿ ನೇತೃತ್ವದಲ್ಲಿಜರುಗಿದ ತಪಾಸಣಾ ಶಿಬಿರದಲ್ಲಿನಗರದ ಖ್ಯಾತ ವೈದ್ಯ ಸದಾನಂದ ಪಾಟೀಲ ರೋಗಿಗಳ ಹೃದಯ ತಪಾಸಣೆ ನಡೆಸಿದರು. ಅಲ್ಲದೆ ಡಾ.ಜಿ.ಎಸ್‌. ಭುರಾಳೆ, ಡಾ. ಬಸವರಾಜ ಸ್ವಾಮಿ ಭಾಗವಹಿಸಿದ್ದರು. ನಗರದ ದೊಡ್ಡಪ್ಪ ಅಪ್ಪ ಕಾಲೇಜಿನ ಬಿಎಡ್‌ ವಿದ್ಯಾರ್ಥಿಗಳು ನೆರವಾದರು.

ದೇಸಿ ಆಹಾರ ಸೇವಿಸಿ

ಶಾಸಕ ಬಿ.ನಾರಾಯಣರಾವ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ನಮ್ಮ ದೇಸಿ ಆಹಾರಗಳಿಗೆ ಮೊದಲಾದ್ಯತೆ ನೀಡಿದರೆ ಆರೋಗ್ಯಯುತವಾಗಿರಲು ಸಾಧ್ಯ. ಸಿರಿಧಾನ್ಯ ಆಹಾರಗಳಿಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಪ್ರಮುಖರಾದ ಸ್ವಾಗತ ಸಮಿತಿ ಕಾರ್ಯದರ್ಶಿ ಚಂದ್ರಕಾಂತ ಸ್ವಾಮಿ, ವೀರಣ್ಣ ಶೀಲವಂತ, ಶರಣು ಪವಾಡಶೆಟ್ಟಿ, ಸೂರ್ಯಕಾಂತ ಮಠ, ಸಿದ್ರಾಮ ಕವಳೆ, ಪ್ರಭುಲಿಂಗಯ್ಯ ಟಂಕಸಾಲಿಮಠ, ವೀರಶೆಟ್ಟಿ ಮಲಶೆಟ್ಟಿ, ಬ್ಲಾಕ್‌ ಕಾಂಗ್ರೆಸ್‌ ತಾಲೂಕು ಅಧ್ಯಕ್ಷ ನೀಲಕಂಠ ರಾಠೋಡ, ಪ್ರೊ.ರುದ್ರೇಶ್ವರ ಗೋರ್ಟಾ, ರಾಜಕುಮಾರ ದೇಗಾಂವ ಅನೇಕರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ