ಆ್ಯಪ್ನಗರ

ಬೀದರ್‌ನಲ್ಲಿ ಮುಂದುವರೆದ ಕೊರೊನಾ ಸಾವಿನ ಸರಣಿ; ಮತ್ತೆ 5 ಸಾವು, 4 ದಿನದಲ್ಲಿ 28 ಮಂದಿ ಬಲಿ

ಬೀದರ್‌ನಲ್ಲಿ ಕೊರೊನಾರ್ಭಟ ಜೋರಾಗಿದ್ದು, ದಿನದಿಂದ ದಿನಕ್ಕೆ ಸೋಂಕಿನಿಂದ ಸಾಯುತ್ತಿರುವವರ ಸಂಖ್ಯೆ ಜಾಸ್ತಿಯಾಗಿದೆ. ಮಂಗಳವಾರ ಮತ್ತೆ 5 ಜನ ಡೆಡ್ಲಿ ವೈರಸ್‌ಗೆ ಬಲಿಯಾಗಿದ್ದು, ನಾಲ್ಕೇ ದಿನದಲ್ಲಿ 28 ಜನರು ಕೋವಿಡ್‌ 19 ಮೃತ್ಯು ಕೂಪಕ್ಕೆ ಆಹುತಿಯಾಗಿದ್ದಾರೆ.

Vijaya Karnataka Web 7 Jul 2020, 6:26 pm
ಬೀದರ್‌: ಗಡಿ ಜಿಲ್ಲೆಯಲ್ಲಿ ಕೊರೊನಾ ವೈರಸ್‌ ಅಕ್ಷರಶಃ ಅಟ್ಟಹಾಸ ಮುಂದುವರೆಸಿದೆ. ಕಳೆದ ಮೂರು ದಿನಗಳಲ್ಲಿ 23 ಜನರನ್ನು ಬಲಿಪಡೆದಿದ್ದ ಕೊರೊನಾ ಮಂಗಳವಾರ ಮತ್ತೆ 5 ಮಂದಿಯನ್ನು ಆಹುತಿ ತೆಗೆದುಕೊಂಡಿದೆ. ಜೊತೆಗೆ ಮತ್ತೆ 51 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವುದು ಆತಂಕ ಮೂಡಿಸಿದೆ.
Vijaya Karnataka Web 5 more coronavirus deaths and 51 new positive cases reported in bidar
ಬೀದರ್‌ನಲ್ಲಿ ಮುಂದುವರೆದ ಕೊರೊನಾ ಸಾವಿನ ಸರಣಿ; ಮತ್ತೆ 5 ಸಾವು, 4 ದಿನದಲ್ಲಿ 28 ಮಂದಿ ಬಲಿ


5 ಜನ ಸಾವನ್ನಪ್ಪುವುದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಕಾರಣದಿಂದ ಸಾವನ್ನಪ್ಪಿದವರ ಸಂಖ್ಯೆ 49ಕ್ಕೆ ಏರಿಕೆಯಾಗಿದೆ. ಮತ್ತೊಂದು ಬಾರಿ ಹೊಸ ಸೋಂಕಿತರ ಸಂಖ್ಯೆ ಅರ್ಧಶತಕದ ಗಡಿ ದಾಟಿದ್ದು, ಒಟ್ಟು ಪಾಸಿಟಿವ್‌ ಕೇಸ್‌ಗಳ ಸಂಖ್ಯೆ 850ಕ್ಕೆ ಏರಿದೆ.

ಇನ್ನು, ಜಿಲ್ಲೆಯಲ್ಲಿ 231 ಕಂಟೈನ್ಮೆಂಟ್ ಝೋನ್‌ಗಳನ್ನು ಘೋಷಿಸಲಾಗಿದೆ. ಇನ್ನೂ ಜಿಲ್ಲೆಯ 2721 ಜನರ ವರದಿ ಬರಬೇಕಿದೆ. ಸೋಮವಾರದ ಸಂಜೆವರೆಗಿನ ವರದಿಯಂತೆ ಜಿಲ್ಲೆಯಲ್ಲಿ 561 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 194 ಪ್ರಕರಣಗಳು ಸಕ್ರಿಯವಾಗಿವೆ.

ಬೀದರ್‌ನಲ್ಲಿ ಕೊರೊನಾ ಅಟ್ಟಹಾಸ; ಮತ್ತೆ 9 ಸಾವು, ಮೂರೇ ದಿನದಲ್ಲಿ 23 ಮಂದಿ ಬಲಿ

ಸಾವಿನ ಸಂಖ್ಯೆಯಲ್ಲಿ ಬೀದರ್‌ಗೆ ಎರಡನೇ ಸ್ಥಾನ
ಬೀದರ್‌ನಲ್ಲಿ ನಾಲ್ಕು ದಿನದಲ್ಲಿ ಒಟ್ಟು 28 ಜನ ಕೊರೊನಾಗೆ ಬಲಿಯಾಗಿರುವುದು ಆತಂಕ ಮೂಡಿಸಿದೆ. ಜಿಲ್ಲೆಯಲ್ಲಿ ಇದುವರೆಗೂ 49 ಜನ ಕೊರೊನಾದಿಂದ ಮೃತಪಟ್ಟಿರುವುದರಿಂದ ಬೀದರ್‌ ರಾಜ್ಯದಲ್ಲಿನ ಮೃತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಬೆಂಗಳೂರು ನಗರ ಇದ್ದರೆ, ಬಳ್ಳಾರಿ ಮೂರನೇ ಸ್ಥಾನದಲ್ಲಿದೆ.

ಬೀದರ್‌ನಲ್ಲಿ ಕೊರೊನಾ ಮರಣ ಮೃದಂಗ: ಡೆಡ್ಲಿ ವೈರಸ್‌ಗೆ ಒಂದೇ ದಿನ 9 ಬಲಿ, 37ಕ್ಕೇರಿದ ಸಾವಿನ ಸಂಖ್ಯೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ