ಆ್ಯಪ್ನಗರ

ಬೀದರ್ ನಲ್ಲಿ ಶ್ರೀ ರಾಮಲೀಲಾ ಉತ್ಸವ ಸಮಿತಿಯಿಂದ 50 ಅಡಿ ಎತ್ತರದ ಬೃಹತ್‌ ರಾವಣ ದಹನ

ನಾಡಹಬ್ಬ ವಿಜಯ ದಶಮಿಯ (ದಸರಾ) ನಿಮಿತ್ತ ನಗರದ ಸಾಯಿ ಶಾಲೆ ಮೈದಾನದಲ್ಲಿ ಶ್ರೀ ರಾಮಲೀಲಾ ಉತ್ಸವ ಸಮಿತಿ ವತಿಯಿಂದ 50ಅಡಿ ಎತ್ತರದ ಬೃಹತ್‌ ರಾವಣ ದಹನ ಬುಧವಾರ ರಾತ್ರಿ ಜರುಗಿತು. ರಾವಣ ದಹನಕ್ಕೂ ಮುನ್ನ ವೇದಿಕೆಯಲ್ಲಿ ಶ್ರೀ ರಾಮಲೀಲಾ ಉತ್ಸವ ಗಮನ ಸೆಳೆಯಿತು. ನಗರ ಸೇರಿದಂತೆ ಸುತ್ತಲ ವಿವಿಧ ಗ್ರಾಮಗಳ ಸಾವಿರಾರು ಜನರು ರಾವಣ ದಹನವನ್ನು ಕಣ್ಣು ತುಂಬಿಕೊಂಡರು. ಇದೇ ವೇಳೆ ಮದ್ದು ಸುಡುವ ಕಾರ್ಯವೂ ಜನಮನಸೊರೆಗೊಂಡಿತು.

Vijaya Karnataka 6 Oct 2022, 1:48 pm
ಬೀದರ್‌: ನಾಡಹಬ್ಬ ವಿಜಯ ದಶಮಿಯ (ದಸರಾ) ನಿಮಿತ್ತ ನಗರದ ಸಾಯಿ ಶಾಲೆ ಮೈದಾನದಲ್ಲಿ ಶ್ರೀ ರಾಮಲೀಲಾ ಉತ್ಸವ ಸಮಿತಿ ವತಿಯಿಂದ 50ಅಡಿ ಎತ್ತರದ ಬೃಹತ್‌ ರಾವಣ ದಹನ ಬುಧವಾರ ರಾತ್ರಿ ಜರುಗಿತು.
Vijaya Karnataka Web ravan dahan


ರಾವಣ ದಹನಕ್ಕೂ ಮುನ್ನ ವೇದಿಕೆಯಲ್ಲಿ ಶ್ರೀ ರಾಮಲೀಲಾ ಉತ್ಸವ ಗಮನ ಸೆಳೆಯಿತು. ನಗರ ಸೇರಿದಂತೆ ಸುತ್ತಲ ವಿವಿಧ ಗ್ರಾಮಗಳ ಸಾವಿರಾರು ಜನರು ರಾವಣ ದಹನವನ್ನು ಕಣ್ಣು ತುಂಬಿಕೊಂಡರು. ಇದೇ ವೇಳೆ ಮದ್ದು ಸುಡುವ ಕಾರ್ಯವೂ ಜನಮನಸೊರೆಗೊಂಡಿತು.

Dasara News - ಕೋಟೆನಾಡಿನಲ್ಲಿ ಅದ್ದೂರಿಯಾಗಿ ನಡೆದ ದಸರಾ ಅಂಬಿನೋತ್ಸವ
ರಾವಣ ದಹನಕ್ಕೆಂದೇ 50 ಅಡಿ ಎತ್ತರದ ಬೃಹತ್‌ ಬಾಹುಬಲಿ ರೂಪದ ರಾವಣದ ಪ್ರತಿಕೃತಿ ನಿರ್ಮಿಸಲಾಗಿತ್ತು. ನವರಾತ್ರಿ ಹಬ್ಬದ ನಗರದ ಕೇಂದ್ರ ಬಿಂದು ಈ ರಾವಣನೇ ಆಗಿದ್ದನು. ಬುಧವಾರ ರಾತ್ರಿ ನಡೆದ ರಾವಣ ದಹನಕ್ಕೆ ಗಣ್ಯರು, ಜನಪ್ರತಿನಿಧಿಗಳು, ಸಮಾಜದ ಮುಖಂಡರು, ಸಾರ್ವಜನಿಕರು ಸಾಕ್ಷಿಯಾದರು.

ವಿಧಾನ ಪರಿಷತ್‌ ಸಭಾಪತಿ ರಘುನಾಥರಾವ್‌ ಮಲ್ಕಾಪುಧಿರೆ, ಕೆಎಸ್‌ಐಐಡಿಸಿ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಡೆಕ್ಕ ಕಿಶೋರ ಬಾಬು, ಶ್ರೀ ರಾಮಲೀಲಾ ಉತ್ಸವ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಈಶ್ವರಸಿಂಗ್‌ ಠಾಕೂರ್‌, ಅಧ್ಯಕ್ಷ ಚಂದ್ರಶೇಖರ ಗಾದಾ, ಪ್ರಧಾನ ಕಾರ್ಯದರ್ಶಿ ಮಹೇಶ್ವರ ಸ್ವಾಮಿ, ಪ್ರಮುಖರಾದ ಗುರುನಾಥ ಕೊಳ್ಳೂರು, ಡಾ. ರಜನೀಶ್‌ ವಾಲಿ, ಡಾ. ವಿನೋದ ಸಾವಳಗಿ, ನೀಲೇಶ್‌ ರಕ್ಷಾಳ್‌, ರಾಜು ಜಮಾದಾರ್‌ ಹಾಗೂ ಇತರರು ಇದ್ದರು.

ನವರಾತ್ರಿ ನಿಮಿತ್ತ ಶ್ರೀ ರಾಮಲೀಲಾ ಉತ್ಸವ ಸಮಿತಿ ವತಿಯಿಂದ ಅ. 4ರಂದು ಸಾಂಸ್ಕೃತಿಕ ಕಾರ‍್ಯಕ್ರಮಗಳು, ಹೆಣ್ಣು ಮಕ್ಕಳಿಗಾಗಿ ಉಚಿತ ದಾಂಡಿಯಾ ಕಾರ‍್ಯಕ್ರಮಗೂ ನಡೆದವು. ಒಟ್ಟಿನಲ್ಲಿ ಈ ಬಾರಿಯ ನವರಾತ್ರಿ ಉತ್ಸವ ಹಾಗೂ ರಾವಣ ದಹನ ಕಾರ‍್ಯಕ್ರಮ ಜನಮನಸೊರೆಗೊಂಡವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ