ಆ್ಯಪ್ನಗರ

ಜಿಲ್ಲೆಯಿಂದ 500 ಪ್ಯಾಕೆಟ್‌ ರಕ್ತದಾನ

ನರೇಂದ್ರಚಾರ್ಯಜಿ ಬಹಳ ಸರಳ ಜೀವಿಯಾಗಿದ್ದು, ಸಮಾಜ ಸೇವೆಯಲ್ಲಿತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಈ ಸೇವೆಯಿಂದಾಗಿ ನಾವೆಲ್ಲರೂ ಸಹೋದರತೆಯಿಂದ ಬಾಳಲು ಸಹಕಾರಿಯಾಗಿದೆ ಎಂದು ಸಂಸದ ಭಗವಂತ ಖೂಬಾ ಹೇಳಿದರು.

Vijaya Karnataka 6 Oct 2019, 7:59 pm
ಬೀದರ್‌:ನರೇಂದ್ರಚಾರ್ಯಜಿ ಬಹಳ ಸರಳ ಜೀವಿಯಾಗಿದ್ದು, ಸಮಾಜ ಸೇವೆಯಲ್ಲಿತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಈ ಸೇವೆಯಿಂದಾಗಿ ನಾವೆಲ್ಲರೂ ಸಹೋದರತೆಯಿಂದ ಬಾಳಲು ಸಹಕಾರಿಯಾಗಿದೆ ಎಂದು ಸಂಸದ ಭಗವಂತ ಖೂಬಾ ಹೇಳಿದರು.
Vijaya Karnataka Web 500 packets of blood donated from the district
ಜಿಲ್ಲೆಯಿಂದ 500 ಪ್ಯಾಕೆಟ್‌ ರಕ್ತದಾನ


ಸರಕಾರಿ ಆಸ್ಪತ್ರೆಯ ಬ್ಲಡ್‌ ಬ್ಯಾಂಕ್‌ಲ್ಲಿಈಚೆಗೆ ಜಗದ್ಗುರು ನರೇಂದ್ರಚಾರ್ಯ ಮಹಾರಾಜರ 54ನೇ ಜನ್ಮದಿನದ ನಿಮಿತ್ತ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಮಾತನಾಡಿ, ಸ್ವಾಮೀಜಿ ಸದಾ ಜನರಿಗೆ ಒಳ್ಳೆಯ ಸಂದೇಶ ಕೊಡುತ್ತಾರೆ, ಅವರ ಸಂದೇಶದಂತೆ ನಡೆದರೆ ಜೀವನದಲ್ಲಿಸುಖ ಶಾಂತಿ ಸಿಗುತ್ತದೆ ಎಂದರು.

ದಿಲೀಪಕುಮಾರ ಪಾಂಚಾಳ್‌ ಮಾತನಾಡಿ, ಸ್ವಾಮೀಜಿ ಅವರ ಪರಿಚಯ, ಸಾಮಾಜಿಕ ಉಪಕ್ರಮದ ಬಗ್ಗೆ ಮಾಹಿತಿ ನೀಡಿದರು. ಜನ್ಮದಿನದ ನಿಮಿತ್ತ ಅ.1 ರಿಂದ ಅ.15 ವರೆಗೆ 54 ಸಾವಿರ ರಕ್ತದ ಪ್ಯಾಕೆಟ್‌ ಬಡ ಜನರಿಗೆ ಉಪಯೋಗವಾಗುವಂತೆ ಆಸ್ಪತ್ರೆಗೆ ನೀಡಲು ಸಂಕಲ್ಪ ಮಾಡಲಾಗಿದೆ. ಅದರಲ್ಲಿಬೀದರ್‌ ಜಿಲ್ಲೆಯಿಂದ 500 ಪ್ಯಾಕೆಟ್‌ ರಕ್ತ ದಾನ ಮಾಡಲು ನಿಶ್ಚಯಿಸಿರುವುದಾಗಿ ಮಾಹಿತಿ ನೀಡಿದರು.

ಡಾ. ರತಿಕಾಂತ ಸ್ವಾಮಿ, ಡಾ.ಕ್ಷೀರಸಾಗರ, ಡಾ.ರಾಜೇಶ್‌ ಪಾರಾ, ರಾಯಚೂರು ಬಾಲಾಜಿ ಕೊಟಾರೆ, ಶಿವಕುಮಾರ ಭಾಲ್ಕೆ, ಝರೆಪ್ಪಾ ಮಮದಾಪೂರ, ನಾಗನಾಥ ಪಾಟೀಲ್‌, ಯಾಧವರೆಡ್ಡಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ