ಆ್ಯಪ್ನಗರ

ಜೆಇ ವಿಜಯ ರೆಡ್ಡಿ ಮನೆ ಮೇಲೆ ಎಸಿಬಿ ದಾಳಿ

ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಉಪ-ವಿಭಾಗ ಕಚೇರಿಯ ಕಿರಿಯ ಎಂಜಿನಿಯರ್‌ ವಿಜಯರಡ್ಡಿ ಸ್ವಗ್ರಾಮವಾದ ನಿರ್ಣಾ ಹಾಗೂ ಹುಮನಾಬಾದ ನಿವಾಸದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಗುರುವಾರ ನಸುಕಿನ ಜಾವ ದಾಳಿ ನಡೆಸಿದ್ದಾರೆ.

Vijaya Karnataka 4 Oct 2019, 10:48 pm
ಹುಮನಾಬಾದ್‌:ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಉಪ-ವಿಭಾಗ ಕಚೇರಿಯ ಕಿರಿಯ ಎಂಜಿನಿಯರ್‌ ವಿಜಯರಡ್ಡಿ ಸ್ವಗ್ರಾಮವಾದ ನಿರ್ಣಾ ಹಾಗೂ ಹುಮನಾಬಾದ ನಿವಾಸದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಗುರುವಾರ ನಸುಕಿನ ಜಾವ ದಾಳಿ ನಡೆಸಿದ್ದಾರೆ.
Vijaya Karnataka Web acb attacks on house of je vijaya reddy
ಜೆಇ ವಿಜಯ ರೆಡ್ಡಿ ಮನೆ ಮೇಲೆ ಎಸಿಬಿ ದಾಳಿ


ಎಸಿಬಿ ಎಸ್‌ಪಿ ವಿ.ಎಂ. ಜ್ಯೋತಿ ಮಾರ್ಗದರ್ಶನದಲ್ಲಿಬೀದರ್‌ ಡಿವೈಎಸ್‌ಪಿ ಬಿ.ಬಿ. ಪಟೇಲ್‌ ನೇತೃತ್ವದಲ್ಲಿದಾಳಿ ನಡೆಸಿದ ತಂಡ, ನಿರ್ಣಾ ಗ್ರಾಮದ ನಿವಾಸ, ತೋಟದಲ್ಲಿನ ಮನೆ, ಹುಮನಾಬಾದ ಪಟ್ಟಣದ ಬಸವನಗರ ಬಡಾವಣೆಯ ನಿವಾಸ ಹಾಗೂ ಕಚೇರಿ ಹೀಗೆ ನಾಲ್ಕು ಕಡೆಗಳಲ್ಲಿಏಕಕಾಲಕ್ಕೆ ದಾಳಿ ನಡೆಸಿದೆ. ಅಧಿಕಾರಿಗಳು ಮಹತ್ವದ ದಾಖಲೆ ಪರಿಶೀಲನೆ ನಡೆಸಿದರು. ಈ ವೇಳೆ ಅಕ್ರಮವಾಗಿ ಆಸ್ತಿಗಳಿಕೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಎಸಿಬಿ ಮೂಲಗಳು ಖಚಿತಪಡಿಸಿವೆ.

ಆಸ್ತಿ ದಾಖಲೆ ಪತ್ತೆ:

ಅಧಿಕಾರಿಗಳು ಲಕ್ಷಾಂತರ ರೂಪಾಯಿ ಮೌಲ್ಯದ ನಗದು ಹಾಗೂ ಬಂಗಾರ -ಬೆಳ್ಳಿ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ಸಂದರ್ಭದಲ್ಲಿಮನೆ, ಜಮೀನು, ಪ್ಲಾಟ್‌ಗಳ ಹಲವು ದಾಖಲೆಗಳು ಪತ್ತೆಯಾಗಿವೆ. ಎಸಿಬಿ ತಂಡಗಳಿಂದ ವಿಜಯರಡ್ಡಿ ನಿವಾಸ ಹಾಗೂ ಕಚೇರಿಯಲ್ಲಿ ಆಸ್ತಿ-ಪಾಸ್ತಿ ಮೂಲದ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಹುಮನಾಬಾದ ಪಟ್ಟಣದಲ್ಲಿ50 ಲಕ್ಷ ವೆಚ್ಚದಲಿ ಮನೆ ನಿರ್ಮಾಣ, ನಿರ್ಣಾ ಗ್ರಾಮದಲ್ಲಿಹೊಲ ಖರೀದಿ ಹಾಗೂ ಮನೆಯಿಂದ 40 ತೊಲ ಚಿನ್ನ, 12 ತೊಲ ಬೆಳ್ಳಿ, 27 ಸಾವಿರ ನಗದು ಹಣ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

1984 ರಿಂದ ಪಂಚಾಯತ್‌ ರಾಜ್‌ ಹುಮನಾನಾಬಾದ ಉಪ ವಿಭಾಗ ಇಲಾಖೆಯಲ್ಲಿಕಿರಿಯ ಎಂಜಿನಿಯರಾಗಿದ್ದ ಇವರು ಹಳ್ಳಿಖೇಡ (ಕೆ), ಮುತ್ತಂಗಿ, ಕಲ್ಲೂರ, ಗ್ರಾಪಂ ಹಾಗೂ ಹುಮನಾಬಾದ ಪಟ್ಟಣಕ್ಕೆ ಕಿರಿಯ ಎಂಜಿನಿಯರ್‌ ಸೇವೆ ಸಲ್ಲಿಸುತ್ತಿದ್ದು, ಇವರು, ಕ್ಷೇಮಾಭಿವೃದ್ಧಿ ನೌಕರ (ದಿನಗೂಲಿ) ಹೆಸರಿನಲ್ಲಿ36 ಸಾವಿರ ಮಾಸಾಶÜನ ಪಡೆಯುತ್ತಿದ್ದಾರೆ.

ನಿರ್ಣಾ ಗ್ರಾಮದಲ್ಲಿಪಿತ್ರಾಜಿತ ಆಸ್ತಿ ಕೇವಲ 11 ಎಕರೆ ಜಮೀನು ಹೊಂದಿದ್ದು, ಹುಮನಾಬಾದ ಬಸವನಗರ ಬಡಾವಣೆಯಲ್ಲಿ50 ಲಕ್ಷದ ಮನೆ, ಇಬ್ಬರು ಮಕ್ಕಳಲ್ಲಿಮಗ ಎಂಜಿನಿಯರಿಂಗ್‌ನಲ್ಲಿಎಂಟೆಕ್‌ ಹಾಗೂ ಮಗಳು ಎಂ.ಬಿ.ಬಿ.ಎಸ್‌ ಶಿಕ್ಷಣ ಪಡೆಯುತ್ತಿದ್ದಾರೆ.

ಆಸ್ತಿ ನ್ಯಾಯಬದ್ಧವಾಗಿದೆ ಎಂಬುವುದನ್ನು ಸಾಬೀತುಪಡಿಸಲು ಅವಕಾಶ ನೀಡಲಾಗುತ್ತದೆ. ಅದು ತನಿಖೆಯ ಭಾಗ ಎಂದು ಎಸಿಬಿ ಬೀದರ್‌ ಡಿವೈಎಸ್‌ಪಿ ಬಿ.ಬಿ.ಪಟೇಲ್‌ ತಿಳಿಸಿದ್ದಾರೆ.

ಯಾದಗಿರಿ ಜಿಲ್ಲೆಯ ಡಿವೈಎಸ್‌ಪಿ ಸುಧಾ ಆದಿ, ಪೊಲೀಸ್‌ ಇನ್ಸ್‌ಪೆಕ್ಟರ್‌ಗಳಾದ ಬೀದರನ ಶರಣಬಸಪ್ಪ ಕೂಡ್ಲಾ, ಯಾದಗಿರಿ ಜಿಲ್ಲೆಯ ಗುರುಪಾದ ಬಿರಾದಾರ, ಕಲಬುರಗಿ ಜಿಲ್ಲೆಯ ಇಸ್ಮಾಯಿಲ್‌ ಶರೀಫ್‌, ಸಿಬ್ಬಂದಿಗಳಾದ ಶ್ರಿಕಾಂತ ಸ್ವಾಮಿ, ಅನಿಲ ಪರಶಟ್ಟಿ, ರಮೇಶ, ಸರಸ್ವತಿ, ಮಲ್ಲಮ್ಮಾ ಲಿಂಗದಾಳ, ಶ್ರೀಮಂತ ಪೂಜಾರಿ, ಮರೆಪ್ಪಾ, ವಿಜಯಕುಮಾರ, ಅಮರ ದಾಳಿ ಸಂದರ್ಭದಲ್ಲಿಇದ್ದರು.

ಆಸ್ತಿ ಪ್ರಮಾಣದಲ್ಲಿಹೆಚ್ಚಳ


ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಉಪ-ವಿಭಾಗ ಕಚೇರಿಯ ಕಿರಿಯ ಎಂಜಿನಿಯರ್‌ ವಿಜಯರಡ್ಡಿ ಮನೆ ಮೇಲೆ ಎಸಿಬಿ ಅಧಿಕಾರಿಗಳು ಗುರುವಾರ ನಸುಕಿನ ಜಾವ ದಾಳಿ ನಡೆಸಿ, 75.35 ಲಕ್ಷ ಚರಾಸ್ತಿ, 112.87 ಕೋಟಿ ಸ್ಥಿರಾಸ್ತಿ, 1.27 ಲಕ್ಷ ನಗದು ಸಿಕ್ಕಿದ್ದು, ಒಟ್ಟು ಆದಾಯ ಶೇ.134 ರಷ್ಟು ಹೆಚ್ಚಿದೆ ಎಂಬುದು ದಾಳಿ ವೇಳೆ ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ