Please enable javascript.ಅಲ್ಪ ಸಂಖ್ಯಾತರಲ್ಲಿ ಮಹಿಳಾ ನಾಯಕತ್ವದ ಕೊರತೆ - Alpa saṅkhyātaralli mahiḷā nāyakatvada korate - Vijay Karnataka

ಅಲ್ಪ ಸಂಖ್ಯಾತರಲ್ಲಿ ಮಹಿಳಾ ನಾಯಕತ್ವದ ಕೊರತೆ

ವಿಕ ಸುದ್ದಿಲೋಕ 28 Nov 2015, 4:19 pm
Subscribe

ಅಲ್ಪ ಸಂಖ್ಯಾತ ಮಹಿಳೆಯರಲ್ಲಿ ನಾಯಕತ್ವದ ಕೊರತೆ ಇದೆ. ಅಲ್ಪ ಸಂಖ್ಯಾತ ಸಚಿವಾಲಯದ ನಯೀ ರೋಶನಿ ಯೋಜನೆಯಡಿ ವಿಶೇಷ ಮಹಿಳಾ ನಾಯಕತ್ವ ಅಭಿವೃದ್ಧಿ ತರಬೇತಿ ನೀಡಿ ಮಹಿಳೆಯರಲ್ಲಿ ನಾಯಕತ್ವದ ಗುಣ ಬೆಳಸಲು ಮುಂದಾಗಿದೆ ಎಂದು ಜಿಲ್ಲಾ ಅಲ್ಪ ಸಂಖ್ಯಾತ ಕಲ್ಯಾಣ ಅಧಿಕಾರಿ ಅಬ್ದುಲ್ ಮಾಜೀದ್ ಹೇಳಿದರು.

alpa sakhytaralli mahi nyakatvada korate
ಅಲ್ಪ ಸಂಖ್ಯಾತರಲ್ಲಿ ಮಹಿಳಾ ನಾಯಕತ್ವದ ಕೊರತೆ
ಬೀದರ್: ಅಲ್ಪ ಸಂಖ್ಯಾತ ಮಹಿಳೆಯರಲ್ಲಿ ನಾಯಕತ್ವದ ಕೊರತೆ ಇದೆ. ಅಲ್ಪ ಸಂಖ್ಯಾತ ಸಚಿವಾಲಯದ ನಯೀ ರೋಶನಿ ಯೋಜನೆಯಡಿ ವಿಶೇಷ ಮಹಿಳಾ ನಾಯಕತ್ವ ಅಭಿವೃದ್ಧಿ ತರಬೇತಿ ನೀಡಿ ಮಹಿಳೆಯರಲ್ಲಿ ನಾಯಕತ್ವದ ಗುಣ ಬೆಳಸಲು ಮುಂದಾಗಿದೆ ಎಂದು ಜಿಲ್ಲಾ ಅಲ್ಪ ಸಂಖ್ಯಾತ ಕಲ್ಯಾಣ ಅಧಿಕಾರಿ ಅಬ್ದುಲ್ ಮಾಜೀದ್ ಹೇಳಿದರು.

ಬೀದರ್ ತಾಲೂಕಿನ ಅಷ್ಟೂರ ಗ್ರಾಮದಲ್ಲಿ ಸಹಯೋಗ ಸ್ವಯಂ ಸೇವಾ ಸಂಸ್ಥೆ ಬೀದರ್ ಹಾಗೂ ಅಲ್ಪ ಸಂಖ್ಯಾತ ಸಚಿವಾಲಯದ ಸಂಯುಕ್ತಾಶ್ರಯದಲ್ಲಿ ನಯಿ ರೋಶನಿ 2015-16ನೇ ಸಾಲಿನ ಅಡಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಿಗಾಗಿ ಮೊದಲನೇ ಬ್ಯಾಚ್‌ನ ಮಹಿಳಾ ನಾಯಕತ್ವ ಅಭಿವೃದ್ಧಿ ತರಬೇತಿಯ ಉದ್ಘಾಟಿಸಿ ಮಾತನಾಡಿದರು.

ತರಬೇತಿಗಳನ್ನು ನಡೆಸಲು ಸರಕಾರವು ಜಿಲ್ಲಾ ಮಟ್ಟದಲ್ಲಿ ಮಹಿಳೆಯರ ಬಗ್ಗೆ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳನ್ನು ಆಯ್ಕೆ ಮಾಡಿ ಅವರ ಮೂಲಕ ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ. ಹಾಗೇಯೆ ಸಹಯೋಗ ಸಂಸ್ಥೆ ಕಳೆದ 3 ವರ್ಷದಿಂದ ಬೀದರ್ ಜಿಲ್ಲೆಯಲ್ಲಿ ನಯೀ ರೋಶನಿ ಯೋಜನೆ ಉತ್ತಮವಾಗಿ ಅನಿಷ್ಠಾನಗೊಳಿಸುತ್ತಿದೆ ಎಂದರು.

ಸಹಯೋಗ ಸಂಸ್ಥೆಯ ನಿರ್ದೇಶಕ ಎಂ.ಡಿ.ಶಫಿಯೋದ್ದೀನ್ ಮಾತನಾಡಿ, ನಯೀ ರೋಶನಿ 2015-16ನೇ ಸಾಲಿನಲ್ಲಿ ಸಹಯೋಗ ಸಂಸ್ಥೆ ಬೀದರಿಗೆ 1075 ಮಹಿಳೆಯರಿಗೆ 43 ಬ್ಯಾಚ್‌ಗಳಲ್ಲಿ ತರಬೇತಿ ನೀಡಲು ಮಂಜೂರಾತಿ ನೀಡಿತ್ತು. ಪ್ರತಿ ಬ್ಯಾಚ್‌ನಲ್ಲಿ 25 ಮಹಿಳೆಯರಿಗೆ 6 ದಿನದ ತರಬೇತಿ ನೀಡಲಾಗುತ್ತಿದೆ ಎಂದರು.

ಸಂಸ್ಥೆಯು ಬೀದರ್ ತಾಲೂಕಿನ 7 ಗ್ರಾಪಂಗಳಲ್ಲಿ ಹಾಗೂ ಹುಮನಾಬಾದ್ ತಾಲೂಕಿನ 2 ಗ್ರಾಪಂಗಳಲ್ಲಿ ತರಬೇತಿಗಳನ್ನು ಹಮ್ಮಿಕೊಳ್ಳುತ್ತಿದೆ. ಅಂತೆಯೇ ಅಷ್ಟೂರ ಗ್ರಾಮದಲ್ಲಿ 5 ಬ್ಯಾಚ್ ತರಬೇತಿಗಳು ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸಹಯೋಗ ಸಂಸ್ಥೆಯ ಅಧ್ಯಕ್ಷೆ ಕವಿತಾ ಹುಷಾರೆ ಮಾತನಾಡಿ, ಮಹಿಳೆಯರು ತಮ್ಮ ಹಕ್ಕು ಪಡೆಯಬೇಕಾದರೆ ಮಹಿಳೆಯರಲ್ಲಿ ನಾಯಕತ್ವ ಗುಣಗಳು ಬೆಳೆದರೆ ಮಾತ್ರ ಸಾಧ್ಯ ಎಂದು ತಿಳಿಸಿದರು.

ಎಸ್‌ಬಿಎಚ್ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕ ಶ್ರೀಕಾಂತ ಬಿ.ಜಿ., ಮಾತನಾಡಿದರು.

ಗ್ರಾಪಂ ಪಿಡಿಒ ಶ್ರೀಧರ, ಗ್ರಾಪಂ ಅಧ್ಯಕ್ಷೆ ಸವಿತಾ ವೀರಭದ್ರಪ್ಪಾ, ಗ್ರಾಪಂ ಸದಸ್ಯರಾದ ಎಂ.ಡಿ. ಫೇರೋಜ್, ಶಾಲೆಯ ಮುಖ್ಯಗುರು ರೇಷ್ಮಾ ತಬಸೂಮ, ಗ್ರಾಪಂ ಕಾರ್ಯದರ್ಶಿ ಎಂ.ಡಿ. ನಸಿರೋದ್ಧಿನ್ ಹಾಗೂ 25 ತರಬೇತಿ ಮಹಿಳೆಯರು ಹಾಜರಿದ್ದರು. ಮೈನಮ್ಮಾ ಸ್ವಾಗತಿಸಿ, ವಂದಿಸಿದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ