ಆ್ಯಪ್ನಗರ

2.70 ಲಕ್ಷ ಮೌಲ್ಯದ ಬಟ್ಟೆ, ಹೊದಿಕೆ,ಬ್ಯಾಗ್‌ ರವಾನೆ

ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿಇತ್ತೀಚೆಗೆ ಸುರಿದ ಮಹಾ ಮಳೆಗೆ ಸಿಲುಕಿದ ಸಂತ್ರಸ್ತರಿಗೆ ಹಿರೇಮಠ ಸಂಸ್ಥಾನ ಅಭಯ ನೀಡಿದೆ.

Vijaya Karnataka 6 Oct 2019, 8:09 pm
ಭಾಲ್ಕಿ:ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿಇತ್ತೀಚೆಗೆ ಸುರಿದ ಮಹಾ ಮಳೆಗೆ ಸಿಲುಕಿದ ಸಂತ್ರಸ್ತರಿಗೆ ಹಿರೇಮಠ ಸಂಸ್ಥಾನ ಅಭಯ ನೀಡಿದೆ.
Vijaya Karnataka Web belgaum victims help from hirematha bhalki
2.70 ಲಕ್ಷ ಮೌಲ್ಯದ ಬಟ್ಟೆ, ಹೊದಿಕೆ,ಬ್ಯಾಗ್‌ ರವಾನೆ


ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‌ನಿಂದ ಸಂಗ್ರಹವಾದ 2.70 ಲಕ್ಷ ರೂ. ಮೌಲ್ಯದ ಬಟ್ಟೆ, ಹೊದಿಕೆ, ವಿದ್ಯಾರ್ಥಿಗಳ ಬ್ಯಾಗ್‌ ಮತ್ತು ನೋಟ್‌ಬುಕ್‌ ಸೇರಿದಂತೆ ನಾನಾ ಸಾಮಗ್ರಿಗಳನ್ನು ಹೊತ್ತ ವ್ಯಾನ್‌ ಬೆಳಗಾವಿ ಜಿಲ್ಲೆಗೆ ಪ್ರಯಾಣ ಬೆಳೆಸಿತು.

ಚನ್ನಬಸವಾಶ್ರಮ ಪರಿಸರದಲ್ಲಿಬುಧವಾರ ರಾತ್ರಿ ಸಂತ್ರಸ್ತರ ಸಾಮಗ್ರಿ ಹೊತ್ತ ವ್ಯಾನ್‌ಗೆ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಬೀಳ್ಕೊಟ್ಟರು.

ಶ್ರೀಗಳು ಮಾತನಾಡಿ, ಇತ್ತೀಚೆಗೆ ಸುರಿದ ಮಹಾ ಮಳೆಗೆ ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳು ಅಕ್ಷರಶಃ ಮುಳುಗಡೆ ಕಂಡು ಲೆಕ್ಕಕ್ಕೆ ಸಿಗದಷ್ಟು ಆಸ್ತಿಪಾಸ್ತಿ ಹಾನಿಯಾಗಿದೆ. ಜನ-ಜಾನುವಾರುಗಳ ಸಾವು ನೋವು ಉಂಟಾಗಿದೆ. ಸಂತ್ರಸ್ತರ ನೆರವಿಗೆ ಎಲ್ಲರೂ ಮುಂದೆ ಬರಬೇಕಿದೆ. ಈ ನಿಟ್ಟಿನಲ್ಲಿಹಿರೇಮಠ ಸಂಸ್ಥಾನದಿಂದಲೂ ಒಂದಷ್ಟು ನೆರವು ನೀಡಿ ಸಂತ್ರಸ್ತರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು.

ಸಂತ್ರಸ್ತರ ಸಾಮಗ್ರಿ ಹೊತ್ತ ವ್ಯಾನ್‌ನೊಂದಿಗೆ ಬಸವಕಲ್ಯಾಣ ಅನುಭವ ಮಂಟಪದ ಸಂಚಾಲಕ ಶಿವಾನಂದ ಸ್ವಾಮೀಜಿ, ಬಸವಲಿಂಗ ದೇವರು ಬೆಳಗಾವಿಗೆ ಪ್ರಯಾಣ ಬೆಳೆಸಿದರು. ಚಂದ್ರಕಾಂತ ಬಿರಾದಾರ್‌, ಸಿಕ್ರೇಶ್ವರ ಶೆಟಕಾರ್‌, ಮಲ್ಲಮ್ಮ ನಾಗನಕೇರೆ ಹಲವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ