ಆ್ಯಪ್ನಗರ

ಭಾಲ್ಕಿ ಪುರಸಭೆಗೆ ಛತ್ರೆ ಬಹುತೇಕ ಅವಿರೋಧ ಆಯ್ಕೆ

ಪಟ್ಟಣದ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಅ.6 ರಂದು ಚುನಾವಣೆ ನಡೆಯಲಿದ್ದು, ಸದಸ್ಯ ಶಿವಶರಣಪ್ಪ ಛತ್ರೆ ಅಧ್ಯಕ್ಷ ರಾಗಿ ಅವಿರೋಧ ಆಯ್ಕೆ ಆಗುವುದು ಬಹುತೇಕ ಖಚಿತವಾಗಿದೆ.

Vijaya Karnataka 6 Oct 2018, 3:55 pm
ಭಾಲ್ಕಿ : ಪಟ್ಟಣದ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಅ.6 ರಂದು ಚುನಾವಣೆ ನಡೆಯಲಿದ್ದು, ಸದಸ್ಯ ಶಿವಶರಣಪ್ಪ ಛತ್ರೆ ಅಧ್ಯಕ್ಷ ರಾಗಿ ಅವಿರೋಧ ಆಯ್ಕೆ ಆಗುವುದು ಬಹುತೇಕ ಖಚಿತವಾಗಿದೆ.
Vijaya Karnataka Web bhagki municipal council is unanimous choice
ಭಾಲ್ಕಿ ಪುರಸಭೆಗೆ ಛತ್ರೆ ಬಹುತೇಕ ಅವಿರೋಧ ಆಯ್ಕೆ


ಈ ಹಿಂದೆ ಅಧ್ಯಕ್ಷ ರಾಗಿದ್ದ ವಿಶಾಲ ಪೂರಿ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ತೆರವಾಗಿರುವ ಸ್ಥಾನಕ್ಕೆ ಉಳಿದ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಈ ಚುನಾವಣೆ ನಡೆಯುತ್ತಿದೆ. ಪುರಸಭೆಯಲ್ಲಿ ಕಾಂಗ್ರೆಸ್‌ ಸ್ಪಷ್ಟ ಬಹುಮತ ಹೊಂದಿದೆ. ಕಾಂಗ್ರೆಸ್‌ 17 ಸದಸ್ಯರು ಹಾಗೂ ಬಿಜೆಪಿ ಆರು ಸದಸ್ಯರು ಸೇರಿ ಒಟ್ಟು 23 ಸದಸ್ಯರ ಬಲ ಹೊಂದಿದೆ. ಇಲ್ಲಿ ಇದುವರೆಗೂ ಜೆಡಿಎಸ್‌ ಖಾತೆ ತೆರೆದಿಲ್ಲ. ಬಿಜೆಪಿಗೆ ಬಹುಮತ ಇಲ್ಲದಿರುವ ಕಾರಣಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಅವಿರೋಧ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಪುರಸಭೆ 31ನೇ ಅಧ್ಯಕ್ಷ ರಾಗಿ ಛತ್ರೆ ಆಯ್ಕೆ ?


1953ರಲ್ಲಿ ಪುರಸಭೆ ಸ್ಥಾಪನೆಗೊಂಡಿದ್ದು, ಇಲ್ಲಿವರೆಗೆ 30 ಪುರಸಭೆ ಅಧ್ಯಕ್ಷ ರು ಆಯ್ಕೆಯಾಗಿದ್ದಾರೆ. ಬಹುತೇಕ ಅಧಿಕಾರದ ಅವಧಿ ಕಾಂಗ್ರೆಸ್‌ ಪಾಲಾಗಿದೆ. ಶನಿವಾರ ನಡೆಯಲಿರುವ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಹಿಂದುವಳಿದ ವರ್ಗ (ಎ)ಗೆ ಮೀಸಲು ಆಗಿರುವುದಿರಂದ 14ನೇ ವಾರ್ಡ್‌ನ ಶಿವಶರಣಪ್ಪ ಛತ್ರೆ 31ನೇ ಅಧ್ಯಕ್ಷ ರಾಗಿ ಅವಿರೋಧ ಆಯ್ಕೆಯಾಗುವ ಸಾಧ್ಯತೆಯಿದೆ. ಪುರಸಭೆ ಆರಂಭಗೊಂಡ ಮೊದಲ ಬಾರಿಗೆ ಮಾಜಿ ಸಚಿವ ಭೀಮಣ್ಣ ಖಂಡ್ರೆ ಪುರಸಭೆ ಅಧ್ಯಕ್ಷ ರಾಗಿರುವುದು ವಿಶೇಷ.

ಐದು ವರ್ಷದಲ್ಲಿ ಐವರು ಅಧ್ಯಕ್ಷ ರು

ಪುರಸಭೆಯಲ್ಲಿ ಅಭಿವೃದ್ಧಿಗಿಂತ ಅಧಿಕಾರ ಹಿತ ಮುಖ್ಯ ಎನ್ನುವಂತಾಗಿದೆ. 2014ರಲ್ಲಿ ಪುರಸಭೆ ಆಡಳಿತ ರಚನೆಯಾಗಿದ್ದು ಐದು ವರ್ಷದ ಅಧಿಕಾರ ಅವಧಿಯಲ್ಲಿ ಐದು ಪುರಸಭೆ ಅಧ್ಯಕ್ಷ ರಾಗುತ್ತಿರುವುದು ವಿಶೇಷವೆನಿಸಿದೆ. ಮೊದಲ ಅಧ್ಯಕ್ಷ ಅವಧಿಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದರಿಂದ 2ನೇ ವಾರ್ಡ್‌ನ ವಿಶ್ವನಾಥ ಮೋರೆ, 21ನೇ ವಾರ್ಡ್‌ನ ದತ್ತು ಪವಾರ ಹಾಗೂ 22ನೇ ವಾರ್ಡ್‌ನ ಪ್ರಕಾಶ ಭಾವಿಕಟ್ಟಿ ಅಧ್ಯಕ್ಷ ರಾಗಿ ಅಧಿಕಾರ ಅನುಭವಿಸಿದರು. ಎರಡನೇ ಅವಧಿಯಲ್ಲಿ ಹಿಂದುವಳಿದ ವರ್ಗ (ಎ)ಸ್ಥಾನಕ್ಕೆ ಅಧ್ಯಕ್ಷ ಸ್ಥಾನ ಮೀಸಲಾದ್ದರಿಂದ 25 ತಿಂಗಳ ಹಿಂದೆ 8ನೇ ವಾರ್ಡ್‌ನ ವಿಶಾಲ ಪೂರಿ ಅಧ್ಯಕ್ಷ ರಾಗಿದ್ದು, ಈಗ ಅವರು ವರಿಶಿಷ್ಟರ ಸೂಚನೆಯಂತೆ ರಾಜೀನಾಮೆ ನೀಡಿರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಆ ಮೂಲಕ ಇಲ್ಲಿ ಜನಪರ ಕಾರ್ಯಗಳಿಂದ ಅಧಿಕಾರ ಅನುಭವಿಸುವುದೇ ಮುಖ್ಯವಾದಂತಾಗಿದೆ.

ಇದುವರೆಗೆ ಪುರಸಭೆಗೆ ಅಧ್ಯಕ್ಷ ರಾದವರು

ಭೀಮಣ್ಣ ಖಂಡ್ರೆ, ಕ್ವಾಜಿ ಮಹ್ಮದ್‌ ಅಲಿ, ಮಾಣಿಕಪ್ಪ ವಂಕೆ, ಶಂಕರರಾವ್‌ ಮುರುಮಕರ್‌, ಮಲ್ಲಿಕಾರ್ಜುನಪ್ಪ, ಬಸವರಾಜ ಖಂಡ್ರೆ, ಶಿವಕುಮಾರ ದೇಶಮುಖ, ಬಸವರಾಜ ಪಾಟೀಲ್‌, ಶಿವಕುಮಾರ ದೇಶಮುಖ, ಸಿ.ಕೃಷ್ಣಪ್ಪ, ಬಿ.ಎಸ್‌.ಕಾಮಣ್ಣ, ರಾಮಚಂದ್ರರಾವ್‌, ರಾಧಾಕಿಶನ್‌, ಸಿದ್ರಾಮಪ್ಪ ವಂಕೆ, ಧನಸಿಂಗ್‌ ಚವ್ಹಾಣ, ಕೈಲಾಸನಾಥ ಮೀನಕೆರೆ, ಸಿದ್ರಾಮಪ್ಪ ವಂಕೆ, ವಿಶ್ವನಾಥ ಕಾರಾಮುಂಗೆ, ಮಾಣಿಕಪ್ಪ ರೇಷ್ಮೆ, ಅಶೋಕ ಮಡ್ಡೆ, ವಿಶ್ವನಾಥ ಮೊರೆ, ಶೋಭಾವತಿ ದೇಶಮುಖ, ಅಮೀನಾ ಬೇಗಂ, ರಾಜಕುಮಾರ ವಂಕೆ, ಜಯಶ್ರೀ ಮಾನಕಾರಿ, ವಿದ್ಯಾವತಿ ಲೋಖಂಡೆ, ವಿಶ್ವನಾಥ ಮೋರೆ, ದತ್ತು ಪವಾರ್‌, ಪ್ರಕಾಶ ಭಾವಿಕಟ್ಟಿ ಮತ್ತು ವಿಶಾಲ ಪೂರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ