ಆ್ಯಪ್ನಗರ

ಕುದರೆಗಳ ಪಾಲಿನ ಹೆಮ್ಮಾರಿ 'ಗ್ಲ್ಯಾಂಡರ್ಸ್‌' ಬೇನೆ ನಿರ್ಮೂಲನೆಗೆ ಪ್ರಭು ಚವ್ಹಾಣ್‌ ನಿರ್ದೇಶನ

ಕುದುರೆಗಳಲ್ಲಿ ಕಾಣಿಸಿಕೊಳ್ಳುವ ಗ್ಲ್ಯಾಂಡರ್ಸ್‌ ರೋಗ ಇತ್ತೀಚೆಗೆ ವ್ಯಾಪಕವಾಗಿ ಹರಡುತ್ತಿದೆ. ಈ ರೋಗದ ನಿಯಂತ್ರಣ ಮಾಡುವಂತೆ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

Vijaya Karnataka Web 19 Oct 2019, 5:03 pm
ಬೀದರ್‌: ಕುದರೆಗಳ ಪಾಲಿಗೆ ಮಾರಣಾಂತಿಕವಾಗಬಲ್ಲ ಗ್ಲ್ಯಾಂಡರ್ಸ್‌ ರೋಗವನ್ನು ನಿಯಂತ್ರಿಸಲು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ತಿಳಿಸಿದರು.
Vijaya Karnataka Web glanders disease


ಬೀದರ್‌ನ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಶನಿವಾರ ವಿಕದೊಂದಿಗೆ ಮಾತನಾಡಿದ ಅವರು, ಪತ್ರಿಕೆಯಲ್ಲಿ ಪ್ರಕಟವಾದ ವಿಶೇಷ ವರದಿ ಗಮನಿಸಿದ್ದೇನೆ, ಅಲ್ಲದೆ, ಈ ರೋಗ ಹರಡದಂತೆ ಅಗತ್ಯವಿರುವ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದರು.

ಕಾಲುಬಾಯಿ ರೋಗ ತಡೆಗೆ ಲಸಿಕೆ ಪರಿಹಾರ

ಸೋಮವಾರ ಬೆಂಗಳೂರಿನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ಕುರಿತು ಮತ್ತೊಮ್ಮೆ ಚರ್ಚಿಸುವೆ. ಈ ರೋಗವು ನೆರೆಯ ರಾಜ್ಯದಿಂದ ಹರಡಿದೆ ಎನ್ನುವ ಮಾಹಿತಿಯಿದೆ. ಹೀಗಾಗಿ, ಅಲ್ಲಿಂದ ಬೀದರ್‌ಗೆ ಕುದರೆ, ಕತ್ತೆಗಳನ್ನು ಸಾಗಿಸುವುದಕ್ಕೆ ನಿರ್ಬಂಧಿಸಲು ಸೂಚಿಸಿದ್ದೇನೆ.

ಕುದುರೆಮುಖ ಐರನ್ ಓರ್ ಕಂಪನಿಗೆ ನೇರ ಸಂದರ್ಶನ ಮೂಲಕ ನೇಮಕಾತಿ

ಬೀದರ್‌ನಲ್ಲಿರುವ ಕುದರೆಗಳ ರಕ್ತ ಪರೀಕ್ಷೆಯನ್ನು ನಮ್ಮ ಅಧಿಕಾರಿಗಳು ನಡೆಸುತ್ತಿದ್ದಾರೆ. ಈಗಾಗಲೇ ರೋಗ ಪತ್ತೆಯಾದ ಸ್ಥಳದಿಂದ ಸುತ್ತಲ 5 ಕಿಮೀ ವ್ಯಾಪ್ತಿಯನ್ನು ಸಾಂಕ್ರಾಮಿಕ ವಲಯ ಎಂದು ಘೋಷಿಸಲಾಗಿದೆ, ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ ಎಂದರು.

ಪಶು ಆಸ್ಪತ್ರೆಗಳಲ್ಲಿ ಔಷಧ ಬರ: ರೈತರು ಕಂಗಾಲು

ಗ್ಲ್ಯಾಂಡರ್ಸ್‌ ರೋಗವನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗುವುದು. ಯಾವುದೇ ಕಾರಣಕ್ಕೂ ಜನತೆ ಹೆದರಬೇಕಿಲ್ಲ. ಕುದರೆ, ಕತ್ತೆಗಳ ಮಾಲೀಕರು ಸಹ ನಮಗೆ ಸಹಕಾರ ನೀಡಬೇಕಾಗುತ್ತದೆ.

ಅಧಿಕಾರಿಗಳು ರೋಗ ನಿಯಂತ್ರಣಕ್ಕೆ ಸಕಲ ಕ್ರಮಕೈಗಳನ್ನು ಕೈಗೊಳ್ಳಲಿದ್ದಾರೆ ಎಂದು ಸಚಿವ ಪ್ರಭು ಚವ್ಹಾಣ್ ತಿಳಿಸಿದರು. ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ಗೌತಮ್ ಅರಳಿ ಹಾಗೂ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ