Please enable javascript.ಕಡಲೆ ಬೀಜ ಕೊರತೆ, ರೈತರ ಪರದಾಟ - Chickpea seed shortages, farmers paradata - Vijay Karnataka

ಕಡಲೆ ಬೀಜ ಕೊರತೆ, ರೈತರ ಪರದಾಟ

ವಿಕ ಸುದ್ದಿಲೋಕ 29 Sep 2015, 4:47 pm
Subscribe

ಹಿಂಗಾರು ಹಂಗಾಮಿನ ಮೇಲೆ ಭರವಸೆ ಇಟ್ಟುಕೊಂಡಿರುವ ತಾಲೂಕಿನ ರೈತರಿಗೆ ಇದೀಗ ಕಡಲೆ ಬಿತ್ತನೆ ಬೀಜದ ಕೊರತೆ ಎದುರಾಗಿದೆ. ಮುಂಗಾರು ಕೈಕೊಟ್ಟು ಭೀಕರ ಬರದ ಹೊಡೆತಕ್ಕೆ ತತ್ತರಿಸಿದ ರೈತಾಪಿ ವರ್ಗಕ್ಕೆ ಈ ಮಧ್ಯದಲ್ಲಿ ಒಂದಷ್ಟು ಸುರಿದ ಮಳೆ ಭರವಸೆ ಮೂಡಿಸಿತ್ತು. ಆದರೆ ಕಡಲೆ ಬಿತ್ತನೆಗೆ ಮುಂದಾದ ರೈತರಿಗೆ ಈಗ ಅಗತ್ಯವಿದ್ದಷ್ಟು ಬೀಜ ಲಭ್ಯವಾಗುತ್ತಿಲ್ಲ.

chickpea seed shortages farmers paradata
ಕಡಲೆ ಬೀಜ ಕೊರತೆ, ರೈತರ ಪರದಾಟ
ಸುರೇಶ್ ಕನಶೆಟ್ಟೆ
ಭಾಲ್ಕಿ: ಹಿಂಗಾರು ಹಂಗಾಮಿನ ಮೇಲೆ ಭರವಸೆ ಇಟ್ಟುಕೊಂಡಿರುವ ತಾಲೂಕಿನ ರೈತರಿಗೆ ಇದೀಗ ಕಡಲೆ ಬಿತ್ತನೆ ಬೀಜದ ಕೊರತೆ ಎದುರಾಗಿದೆ. ಮುಂಗಾರು ಕೈಕೊಟ್ಟು ಭೀಕರ ಬರದ ಹೊಡೆತಕ್ಕೆ ತತ್ತರಿಸಿದ ರೈತಾಪಿ ವರ್ಗಕ್ಕೆ ಈ ಮಧ್ಯದಲ್ಲಿ ಒಂದಷ್ಟು ಸುರಿದ ಮಳೆ ಭರವಸೆ ಮೂಡಿಸಿತ್ತು. ಆದರೆ ಕಡಲೆ ಬಿತ್ತನೆಗೆ ಮುಂದಾದ ರೈತರಿಗೆ ಈಗ ಅಗತ್ಯವಿದ್ದಷ್ಟು ಬೀಜ ಲಭ್ಯವಾಗುತ್ತಿಲ್ಲ.

ಕಳೆದ ಒಂದು ವಾರದಿಂದ ರೈತರು ಜಮೀನಿನಲ್ಲಿ ಇದ್ದ ಕೆಲಸ ಬಿಟ್ಟು ಬೀಜಕ್ಕಾಗಿ ರೈತ ಸಂಪರ್ಕ ಕೇಂದ್ರದ ಮುಂದೆ ನಿಂತರೂ ಕಡಲೆ ಬೀಜ ದೊರೆಯುತ್ತಿಲ್ಲ. ಬೀಜ ಬಂದಿವೆ ಎಂದು ತಿಳಿದ ತಕ್ಷಣ ರೈತರು ರೈತ ಸಂಪರ್ಕ ಕೇಂದ್ರದ ಕಡೆ ಧಾವಿಸುತ್ತಲೇ ಬೀಜ ಮುಗಿಯುತ್ತಿವೆ ಎನ್ನುವುದು ರೈತರ ಮಾತು. ರೈತ ಸಂಪರ್ಕ ಕೇಂದ್ರಗಳಿಂದ ಖಾಸಗಿಯಾಗಿ, ನೆಂಟರಿಂದ ಹೀಗೆ ಎಲ್ಲಿ ಲಭ್ಯವೋ ಅಲ್ಲಿಂದ ಬೀಜ ಪಡೆದು, ಭೂಮಿಯ ಹದ ತಪ್ಪುವುದರೊಳಗಾಗಿ ಬಿತ್ತಬೇಕೆಂಬ ಆತುರದಲ್ಲಿದ್ದಾರೆ.

ತಾಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ನಿತ್ಯ ಮುಂಜಾನೆಯಿಂದಲೇ ಸರತಿಯಲ್ಲಿ ಕಾದು ನಿಲ್ಲುವ ರೈತರೆಲ್ಲರಿಗೂ ಬಿತ್ತನೆ ಬೀಜ ಸಿಗುವ ಭರವಸೆ ಇಲ್ಲ ಇದರಿಂದ ರೈತರ ಆಕ್ರೋಶ ಮುಗಿಲು ಮುಟ್ಟಿದೆ. ಇಂದಲ್ಲಾ ನಾಳೆ ಬೀಜ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ರೈತರು ದಿನದೂಡುತ್ತಿದ್ದಾರೆ.

ಬಾಕ್ಸ್‌ನಲ್ಲಿ ಬಳಸಿ

685 ಕ್ವಿಂಟಾಲ್ ಬೀಜ ಪೂರೈಕೆ

ತಾಲೂಕಿನಲ್ಲಿ 29 ಸಾವಿರ ಹೆಕ್ಟೇರ್ ಭೂಮಿ ಹಿಂಗಾರು ಬಿತ್ತನೆ ಗುರಿ ಹೊಂದಿದ್ದು, ಅದರಲ್ಲಿ 18 ಸಾವಿರ ಹೆ. ಕಡಲೆ ಬಿತ್ತನೆ ಪ್ರದೇಶ ಇದ್ದು, 10500 ಕ್ವಿಂಟಾಲ್ ಕಡಲೆ ಬೀಜದ ಬೇಡಿಕೆ ಇದೆ. ಕಷಿ ಅಧಿಕಾರಿಗಳ ಮಾಹಿತಿ ಪ್ರಕಾರ ತಾಲೂಕಿನ 6 ರೈತ ಸಂಪರ್ಕ ಸೇರಿ ಇದುವರೆಗೂ ಕೇವಲ 685 ಕ್ವಿಂ. ಕಡಲೆ ಬೀಜ ಪೂರೈಕೆಯಾಗಿದ್ದು, ಅದು ಕೂಡ ಈಗಾಗಲೇ ಖಾಲಿಯಾಗಿದೆ. ಮತ್ತೆ ಬೀಜ ಯಾವಾಗ ಸಿಗುತ್ತದೆ ಎಂದು ಕಾತರದಲ್ಲಿದ್ದಾರೆ.

ಹಿಂಗಾರು ಬಿತ್ತನೆಗೆ ರೈತರು ಕಡಲೆ ಬೀಜ ಬಿತ್ತಲು ಮುಂದಾಗಿದ್ದಾರೆ. ಬೇಡಿಕೆಯಷ್ಟು ಕಡಲೆ ಬೀಜ ಪೂರೈಕೆಯಾಗಿಲ್ಲ. ಇದರಿಂದ ಬೀಜದ ಕೊರತೆ ಎದುರಾಗಿದೆ. ಶೀಘ್ರವೇ ಸಮಸ್ಯೆ ಬಗೆ ಹರಿಯಲಿದೆ ಯಾವುದೇ ಕಾರಣಕ್ಕೂ ರೈತರು ಆತಂಕ ಪಡಬೇಕಾಗಿಲ್ಲ.

-ಅನಸೂಯ ಹೂಗಾರ, ಸಹಾಯಕ ಕಷಿ ನಿರ್ದೇಶಕರು ಭಾಲ್ಕಿ

ಮುಂಗಾರು ಹಂಗಾಮಿನಲ್ಲಿ ಮಳೆ ಕೈಕೊಟ್ಟಿದ್ದು ಬಿತ್ತನೆ ಮಾಡಿದ ಬೆಳೆಗಳು ನೆಲಕಚ್ಚಿವೆ. ಇದೀಗ ಹಿಂಗಾರು ಕೈಹಿಡಿಯಬಹುದು ಎಂಬ ನಿರೀಕ್ಷೆಯಲ್ಲಿ ಇದ್ದೇವೆ. ಆದರೆ ಈಗ ಕಡಲೆ ಬೀಜದ ಕೊರತೆ ಎದುರಾಗಿದ್ದು ದಿಕ್ಕು ತೋಚದಂತಾಗಿದೆ.

- ಕಲ್ಲಪ್ಪ ಪರ್ಮಾ, ರೈತರು ಸಿದ್ದೇಶ್ವರ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ