ಆ್ಯಪ್ನಗರ

ಬಾಲಕಿ ಅಪಹರಣ:ಫೋಕ್ಸೊ ದಾಖಲು

ಅಪ್ರಾಪ್ತ ವಯಸ್ಸಿನ ಬಾಲಕಿಯ ಅಪಹರಣ ಮಾಡಿರುವ ಆರೋಪದ ಮೇರೆಗೆ ತಾಲೂಕಿನ ಜಲಸಂಗಿ ಗ್ರಾಮದ 6 ಜನರ ವಿರುದ್ಧ ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Vijaya Karnataka 12 Jun 2018, 4:33 pm
ಹುಮನಾಬಾದ್‌: ಅಪ್ರಾಪ್ತ ವಯಸ್ಸಿನ ಬಾಲಕಿಯ ಅಪಹರಣ ಮಾಡಿರುವ ಆರೋಪದ ಮೇರೆಗೆ ತಾಲೂಕಿನ ಜಲಸಂಗಿ ಗ್ರಾಮದ 6 ಜನರ ವಿರುದ್ಧ ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
Vijaya Karnataka Web child abduction record foxo
ಬಾಲಕಿ ಅಪಹರಣ:ಫೋಕ್ಸೊ ದಾಖಲು


ಗ್ರಾಮದಲ್ಲಿ ಬಾಲಕಿ ಶಾಲೆಗೆ ಹೋಗುವಾಗ ಅವಳಿಗೆ ಚುಡಾಯಿಸಿದ ಆರೋಪಿ ಸುರೇಶ ಲಾಲಪ್ಪಾ ಮೇಲ್ಕೆರಿ, ಲೈಂಗಿಕ ಪ್ರಚೋದನೆ ಮಾತುಗಳನ್ನು ಆಡುತ್ತ ಬಂದಿರುತ್ತಾನೆ. ಆರೋಪಿಯು ಅವರ ಸಂಬಂಧಿ ಹಾಗು ಮಿತ್ರರಾದ ತೇಜಮ್ಮಾ ಲಾಲಪ್ಪಾ ಮೇಲ್ಕೆರಿ, ರಮೇಶ ಲಾಲಪ್ಪಾ ಮೇಲ್ಕೆರಿ, ಗೋಪಾಲ ಲಾಲಪ್ಪಾ ಮೇಲ್ಕೆರಿ, ಸುಧಾಕರ ಮಾಣಿಕ, ರಾಹುಲ ಪ್ರಕಾಶ ಮೇತ್ರೆ ಅವರ ಸಹಾಯದಿಂದ ವ್ಯವಸ್ಥಿತ ಸಂಚು ರೂಪಿಸಿ, ಫಿರ್ಯಾದಿಯವರ ಮಗಳಿಗೆ ಪುಸಲಾಯಿಸಿ ಜೂ.2 ರಂದು ನಸುಕಿನಲ್ಲಿ ಅಪಹರಿಸಿಕೊಂಡು ಹೋಗಿದ್ದಾನೆ ಎಂದು ಬಾಲಕಿಯ ತಂದೆ ದೂರಿದ್ದಾರೆ. ಹುಮನಾಬಾದ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ