ಆ್ಯಪ್ನಗರ

ದೂರು ಪೆಟ್ಟಿಗೆ ಕಾರ್ಯಾರಂಭ ನಾಳೆಯಿಂದ

ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸುವ ನಿಟ್ಟಿನಲ್ಲಿಜಿಲ್ಲಾಕೇಂದ್ರ ಬೀದರ್‌ ಹಾಗೂ ವಿವಿಧ ತಾಲೂಕು ಕೇಂದ್ರಗಳಲ್ಲಿನ ಪ್ರಮುಖ ಕಚೇರಿಗಳಲ್ಲಿಸೋಮವಾರ ದೂರು ಪೆಟ್ಟಿಗೆಗಳನ್ನು ಅಳವಡಿಸಲಾಗುತ್ತಿದೆ ಎಂದು ಜಿಲ್ಲಾಉಸ್ತುವಾರಿ ಸಚಿವ ಪ್ರಭು ಚವ್ಹಾಣ್‌ ಅವರು ತಿಳಿಸಿದ್ದಾರೆ.

Vijaya Karnataka 20 Oct 2019, 10:11 pm
ಬೀದರ್‌:ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸುವ ನಿಟ್ಟಿನಲ್ಲಿಜಿಲ್ಲಾಕೇಂದ್ರ ಬೀದರ್‌ ಹಾಗೂ ವಿವಿಧ ತಾಲೂಕು ಕೇಂದ್ರಗಳಲ್ಲಿನ ಪ್ರಮುಖ ಕಚೇರಿಗಳಲ್ಲಿಸೋಮವಾರ ದೂರು ಪೆಟ್ಟಿಗೆಗಳನ್ನು ಅಳವಡಿಸಲಾಗುತ್ತಿದೆ ಎಂದು ಜಿಲ್ಲಾಉಸ್ತುವಾರಿ ಸಚಿವ ಪ್ರಭು ಚವ್ಹಾಣ್‌ ಅವರು ತಿಳಿಸಿದ್ದಾರೆ.
Vijaya Karnataka Web complaint box from the start tomorrow
ದೂರು ಪೆಟ್ಟಿಗೆ ಕಾರ್ಯಾರಂಭ ನಾಳೆಯಿಂದ


ವಿವಿಧ ಸರಕಾರಿ ಕಚೇರಿಗಳಲ್ಲಿಜನರ ಕೆಲಸಗಳಿಗೆ ದೀರ್ಘ ಅವಧಿಯವರೆಗೆ ಸ್ಪಂದನೆ ಸಿಗುತ್ತಿಲ್ಲ. ಸರಕಾರದ ಯೋಜನೆಗಳ ಲಾಭ ಸಮರ್ಪಕವಾಗಿ ದೊರಕುತ್ತಿಲ್ಲ. ಸಣ್ಣಪುಟ್ಟ ಸಮಸ್ಯೆಗಳ ಪರಿಹಾರಕ್ಕೂ ತಿಂಗಳುಗಟ್ಟಲೇ ಅಲೆದಾಡಬೇಕಾಗುತ್ತಿದೆ. ಅಲ್ಲದೇ ಪ್ರಮುಖ ಕಚೇರಿಗಳಲ್ಲಿಭ್ರಷ್ಟಾಚಾರ ಹೆಚ್ಚಾಗಿದೆ ಎಂಬ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದಿವೆ. ಈ ಎಲ್ಲಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪೂರಕವಾಗಿ ನಾನಾ ಕಚೇರಿಗಳಲ್ಲಿದೂರು ಪೆಟ್ಟಿಗೆ ಇಡಲಾಗುತ್ತಿದೆ ಎಂದು ಹೇಳಿದ್ದಾರೆ.

''ಸೋಮವಾರ ನಾನು ಸ್ವತಃ ವಿವಿಧ ಕಡೆಗಳಿಗೆ ತೆರಳಿ ಈ ದೂರು ಪೆಟ್ಟಿಗೆ ಅಳವಡಿಸುತ್ತಿದ್ದೇನೆ. ಅ.21ರಂದು ಬೆಳಗ್ಗೆ 10ಗಂಟೆಗೆ ಭಾಲ್ಕಿ, 11 ಗಂಟೆಗೆ ಹುಲಸೂರು, 12ಕ್ಕೆ ಬಸವಕಲ್ಯಾಣ, 1 ಗಂಟೆಗೆ ಹುಮನಾಬಾದ್‌, 2ಗಂಟೆಗೆ ಚಿಟಗುಪ್ಪದಲ್ಲಿನ ತಹಸೀಲ್ದಾರ್‌ ಕಚೇರಿಗಳಲ್ಲಿದೂರು ಪೆಟ್ಟಿಗೆ ಇರಿಸಲಾಗುತ್ತದೆ. ಮಧ್ಯಾಹ್ನ 3ಗಂಟೆಗೆ ಬೀದರ್‌ ಜಿಲ್ಲಾಧಿಕಾರಿ ಕಚೇರಿ, ನಗರಸಭೆ ಕಚೇರಿ ಹಾಗೂ ತಹಸೀಲ್ದಾರ್‌ ಕಚೇರಿಗಳಲ್ಲಿದೂರು ಪೆಟ್ಟಿಗೆ ಅಳವಡಿಸಲಾಗುತ್ತದೆ. ನಂತರ ಔರಾದ್‌ ನಲ್ಲಿಇದನ್ನು ಅಳವಡಿಸಲಾಗುವುದು''ಎಂದು ಸಚಿವರು ತಿಳಿಸಿದ್ದಾರೆ.

ಸರಕಾರದ ಯೋಜನೆಗಳ ಲಾಭ ಜನರಿಗೆ ಸಿಗಬೇಕು. ವಿವಿಧ ಇಲಾಖೆಗಳಲ್ಲಿಜನರ ಕೆಲಸ ಬೇಗ ಆಗಬೇಕು. ದೂರು ಅರ್ಜಿಗಳು ಬೇಗ ಇತ್ಯರ್ಥವಾಗಬೇಕು. ಭ್ರಷ್ಟಾಚಾರ ಮುಕ್ತವಾದ ಆಡಳಿತ ಇರಬೇಕೆಂಬುದು ತಮ್ಮ ಧ್ಯೇಯ. ಈಗ ಅಳವಡಿಸುತ್ತಿರುವ ದೂರು ಪೆಟ್ಟಿಗೆಯಲ್ಲಿಸಾರ್ವಜನಿಕರು ತಮ್ಮ ಯಾವುದೇ ಅಹವಾಲು ಸಲ್ಲಿಸಬಹುದು ಎಂದು ಅವರು ಹೇಳಿದ್ದಾರೆ.

ದೂರು ಪೆಟ್ಟಿಗೆಯಲ್ಲಿಸಾರ್ವಜನಿಕರು ತಮ್ಮ ಸಮಸ್ಯೆ, ಎಲ್ಲಿಏನಾಗಿದೆ? ಏನಾಗಬೇಕಿದೆ ಎಂಬ ಮಾಹಿತಿ ಬರೆದು ಹಾಕಬೇಕು. ಅಧಿಕಾರಿ ಅಥವಾ ಸಿಬ್ಬಂದಿ ಹಣದ ಬೇಡಿಕೆ ಇಟ್ಟರೂ ತಿಳಿಸಬೇಕು. ನಡೆದಿರುವ ಬಗ್ಗೆ ಮಾಹಿತಿ ಇದ್ದರೂ ಸಹ ಹೇಳಬಹುದು. ದೂರು ಪೆಟ್ಟಿಗೆಗೆ ಹಾಕುವ ಅರ್ಜಿಗಳನ್ನು ನಮ್ಮ ಕಚೇರಿ (ಉಸ್ತುವಾರಿ ಸಚಿವರ ಕಚೇರಿ) ಸಿಬ್ಬಂದಿ ನಿಯಮಿತವಾಗಿ ತೆಗೆದು ಪರಿಶೀಲನೆ ಮಾಡುತ್ತಾರೆ.

ಇಲ್ಲಿಸ್ವೀಕರಿಸುವ ದೂರುಗಳ ಮೇಲೆ ಕೂಡಲೇ ಕ್ರಮಕ್ಕೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ. ಭ್ರಷ್ಟಾಚಾರದ ಕುರಿತು ಮಾಹಿತಿ ನೀಡಲು ಬಯಸದವರ ಹೆಸರು ಗೌಪ್ಯವಾಗಿ ಸಹ ಇಡಲಾಗುತ್ತದೆ. ಹಂತಹಂತವಾಗಿ ಹೆಚ್ಚಿನ ಕಚೇರಿಗಳಲ್ಲಿಈ ವ್ಯವಸ್ಥೆ ಜಾರಿಗೆ ತರಲಾಗುವುದು. ಸಾರ್ವಜನಿಕರು ಈ ದೂರು ಪೆಟ್ಟಿಗೆ ಲಾಭ ಪಡೆದುಕೊಳ್ಳಬೇಕು ಎಂದು ಸಚಿವ ಚವ್ಹಾಣ್‌ ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ