ಆ್ಯಪ್ನಗರ

ಸರಕಾರಿ ನೌಕರರ ಸಂಘದ ಚುನಾವಣಾ ದಿನಾಂಕ ಪ್ರಕಟ

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೀದರ್‌ ಜಿಲ್ಲಾ ಶಾಖೆಯ ಕಾರ್ಯಕಾರಿ ಸಮಿತಿಯ ಚುನಾವಣೆಯ ದಿನಾಂಕಗಳನ್ನು ಘೋಷಿಸಲಾಗಿದೆ. ನಾಮಪತ್ರಗಳನ್ನು ಮೇ.27ರಿಂದ ಜೂನ್‌ 3ರ ಸಂಜೆ 4 ಗಂಟೆಯವರೆಗೆ ವಿತರಿಸಲಾಗುತ್ತದೆ. ನಾಮಪತ್ರಗಳನ್ನು ಸಲ್ಲಿಸಲು ಜೂನ್‌ 3ರ ಸಂಜೆ 5 ಗಂಟೆವರೆಗೆ ಅವಕಾಶವಿರುತ್ತದೆ. ಜೂನ್‌ 3ರ ಸಂಜೆ 5 ಗಂಟೆಯ ನಂತರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಪರಿಶೀಲನೆಯ ನಂತರ ಅರ್ಹ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗುತ್ತದೆ.

Vijaya Karnataka 30 May 2019, 4:32 pm
ಬೀದರ್‌ :ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೀದರ್‌ ಜಿಲ್ಲಾ ಶಾಖೆಯ ಕಾರ್ಯಕಾರಿ ಸಮಿತಿಯ ಚುನಾವಣೆಯ ದಿನಾಂಕಗಳನ್ನು ಘೋಷಿಸಲಾಗಿದೆ. ನಾಮಪತ್ರಗಳನ್ನು ಮೇ.27ರಿಂದ ಜೂನ್‌ 3ರ ಸಂಜೆ 4 ಗಂಟೆಯವರೆಗೆ ವಿತರಿಸಲಾಗುತ್ತದೆ. ನಾಮಪತ್ರಗಳನ್ನು ಸಲ್ಲಿಸಲು ಜೂನ್‌ 3ರ ಸಂಜೆ 5 ಗಂಟೆವರೆಗೆ ಅವಕಾಶವಿರುತ್ತದೆ. ಜೂನ್‌ 3ರ ಸಂಜೆ 5 ಗಂಟೆಯ ನಂತರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಪರಿಶೀಲನೆಯ ನಂತರ ಅರ್ಹ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗುತ್ತದೆ.
Vijaya Karnataka Web election date of government employees association
ಸರಕಾರಿ ನೌಕರರ ಸಂಘದ ಚುನಾವಣಾ ದಿನಾಂಕ ಪ್ರಕಟ


ನಾಮಪತ್ರಗಳನ್ನು ವಾಪಸ್ಸು ಪಡೆಯಲು ಜೂನ್‌ 4ರ ಸಂಜೆ 4 ಗಂಟೆಯವರೆಗೆ ಅವಕಾಶವಿರುತ್ತದೆ. ನಾಮಪತ್ರಗಳನ್ನು ವಾಪಸ್ಸು ಪಡೆದ ನಂತರ ಅಂದು ಸಂಜೆ 5 ಗಂಟೆಯ ಬಳಿಕ ಚುನಾವಣಾ ಕಣದಲ್ಲಿ ಉಳಿದ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಲಾಗುತ್ತದೆ. ಜೂನ್‌ 13ರ ಬೆಳಗ್ಗೆ 11ರಿಂದ ಸಂಜೆ 4ರವರೆಗೆ ಚುನಾವಣೆ ನಡೆಯಲಿದೆ. ಅಂದು ಸಂಜೆ 4.30 ಗಂಟೆಯ ನಂತರ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಮತ ಎಣಿಕೆ ಮುಗಿದ ನಂತರ ಫಲಿತಾಂಶವನ್ನು ಪ್ರಕಟಿಸಲಾಗುವುದು.

ನಾಮಪತ್ರಗಳನ್ನು ಜಿಲ್ಲಾ ಸಂಘದ ಕಚೇರಿಯಲ್ಲಿ ನಾಮಪತ್ರಗಳ ವಿತರಣೆ ದಿನಾಂಕದಿಂದ ನಾಮಪತ್ರಗಳ ವಿತರಣೆಯ ಕೊನೆಯ ದಿನಾಂಕದವರೆಗೆ ಬೆಳಗ್ಗೆ 11ರಿಂದ ಸಂಜೆ 5 ಗಂಟೆಯವರೆಗೆ ಪಡೆಯಬಹುದಾಗಿದೆ.

ಚುನಾವಣಾ ಪ್ರಕ್ರಿಯೆ ಪ್ರಕಾರ ಸಂಘದ ಕಚೇರಿಯು ರಜಾ ದಿನಗಳಂದು ಸಹ ತೆರೆದಿರುತ್ತದೆ. ಮತದಾರರ ಪಟ್ಟಿ ಹಾಗೂ ನಾಮಪತ್ರ ನಮೂನೆಗಳನ್ನು ಸಂಘದ ಕಚೇರಿ ವೇಳೆಯಲ್ಲಿ ನಿಗದಿತ ಶುಲ್ಕವನ್ನು ಪಾವತಿಸಿ ಚುನಾವಣಾಧಿಕಾರಿಗಳಿಂದ ಪಡೆಯಬೇಕು.

ಮತದಾನವು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೀದರ್‌ ಜಿಲ್ಲಾ ಶಾಖೆ, ಸಮುದಾಯ ಭವನ, ಪ್ರತಾಪನಗರ ಕಟ್ಟಡದಲ್ಲಿ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬೀದರ್‌ ಜಿಲ್ಲಾ ಶಾಖೆಯ ಚುನಾವಣಾಧಿಕಾರಿ ವೀರಪ್ಪ ಪಸಾರಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ