ಆ್ಯಪ್ನಗರ

ಖಾಸಗಿ ವಾಹನದಲ್ಲಿ ಆಕಸ್ಮಿಕ ಬೆಂಕಿ

ಸರಕಾರಿ ಪದವಿ ಪೂರ್ವ ಕಾಲೇಜಿನ ಸಮೀಪ ಓಮಿನಿ ವಾಹನದಲ್ಲಿ ಎಲ್‌ಪಿಜಿ ಗ್ಯಾಸ್‌ ಸೋರಿಕೆಯಾದ ಪರಿಣಾಮ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣಗೊಂಡ ಘಟನೆ ಶನಿವಾರ ನಡೆದಿದೆ. ಗ್ಯಾಸ್‌ ಸೋರಿಕೆ ವಾಸನೆ ಬಡಿಯುತಿದ್ದಂತೆ ಸುತ್ತಲಿನ ಜನರು ಭಯದಿಂದ ಓಡಿ ಹೋಗಿದ್ದಾರೆ.

Vijaya Karnataka 18 Jul 2019, 7:01 pm
ಹುಮನಾಬಾದ್‌: ಸರಕಾರಿ ಪದವಿ ಪೂರ್ವ ಕಾಲೇಜಿನ ಸಮೀಪ ಓಮಿನಿ ವಾಹನದಲ್ಲಿ ಎಲ್‌ಪಿಜಿ ಗ್ಯಾಸ್‌ ಸೋರಿಕೆಯಾದ ಪರಿಣಾಮ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣಗೊಂಡ ಘಟನೆ ಶನಿವಾರ ನಡೆದಿದೆ. ಗ್ಯಾಸ್‌ ಸೋರಿಕೆ ವಾಸನೆ ಬಡಿಯುತಿದ್ದಂತೆ ಸುತ್ತಲಿನ ಜನರು ಭಯದಿಂದ ಓಡಿ ಹೋಗಿದ್ದಾರೆ.
Vijaya Karnataka Web fire in the vehicle
ಖಾಸಗಿ ವಾಹನದಲ್ಲಿ ಆಕಸ್ಮಿಕ ಬೆಂಕಿ


ಈ ವೇಳೆ ಕೆಲವರು ಧೈರ್ಯದಿಂದ ಮುಂದೆ ಹೋಗಿ ವಾಹನದ ಗಾಜು ಒಡೆದು ಎಲ್‌ಪಿಜಿ ಸೋರಿಕೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಒಂದು ವೇಳೆ ಆಕಸ್ಮಿಕವಾಗಿ ಬೆಂಕಿ ತಗುಲಿದರೆ ದೊಡ್ಡ ಅನಾಹುತವೇ ಸಂಭವಿಸುತಿತ್ತು ನಂತರ ವಾಹನದ ಮಾಲೀಕ ಎಲ್‌ಪಿಜಿ ಸಿಲಿಂಡರ್‌ ಗ್ಯಾಸ್‌ ತೆಗೆದುಕೊಳ್ಳಲು ಆಗಮಿಸಿದ ವೇಳೆ ಸುತ್ತಲಿನ ಜನರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸುವಷ್ಟರಲ್ಲಿ ಪರಿಸ್ಥಿತಿ ತಿಳಿಗೊಂಡ ಹಿನ್ನಲೆಯಲ್ಲಿ ವಾಪಸ್‌ ಹೋಗಬೇಕಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ