ಆ್ಯಪ್ನಗರ

9ವರ್ಷದಿಂದ ಗಣಿತ ಶಿಕ್ಷ ಕರಿಲ್ಲದ ಸರಕಾರಿ ಪ್ರೌಢಶಾಲೆ

ಖತಗಾಂವ ಸರಕಾರಿ ಪ್ರೌಢಶಾಲೆಯಲ್ಲಿ ಒಂಬತ್ತು ವರ್ಷದಿಂದ ಗಣಿತ ಶಿಕ್ಷ ಕರಿಲ್ಲವೆಂದರೆ ಆಶ್ಚರ್ಯಪಡಬೇಕಿಲ್ಲ. ನಿಜಕ್ಕೂ ಇಲ್ಲಿ ವಿಷಯ ಬೋಧಕರಿಲ್ಲದೆ ವಿದ್ಯಾರ್ಥಿಗಳು ವಿದ್ಯೆಯಿಂದ ವಂಚಿತಗೊಳ್ಳುವಂತಾಗಿದೆ.

Vijaya Karnataka 6 Jan 2019, 5:00 am
ಕಮಲನಗರ : ತಾಲೂಕಿನ ಖತಗಾಂವ ಸರಕಾರಿ ಪ್ರೌಢಶಾಲೆಯಲ್ಲಿ ಒಂಬತ್ತು ವರ್ಷದಿಂದ ಗಣಿತ ಶಿಕ್ಷ ಕರಿಲ್ಲವೆಂದರೆ ಆಶ್ಚರ್ಯಪಡಬೇಕಿಲ್ಲ. ನಿಜಕ್ಕೂ ಇಲ್ಲಿ ವಿಷಯ ಬೋಧಕರಿಲ್ಲದೆ ವಿದ್ಯಾರ್ಥಿಗಳು ವಿದ್ಯೆಯಿಂದ ವಂಚಿತಗೊಳ್ಳುವಂತಾಗಿದೆ.
Vijaya Karnataka Web government higher school mathematics teacher is not 9 years old
9ವರ್ಷದಿಂದ ಗಣಿತ ಶಿಕ್ಷ ಕರಿಲ್ಲದ ಸರಕಾರಿ ಪ್ರೌಢಶಾಲೆ


ಇನ್ನು ಶಿಕ್ಷಕರ ಹುಡುಕಾಟದಲ್ಲಿ ಶಿಕ್ಷಣ ಇಲಾಖೆ ಕಾಲ ಹರಣ ಮಾಡುತ್ತಿದೆ. ಮಕ್ಕಳು ಶಿಕ್ಷಣದಿಂದ ವಂಚಿತರಾದರೂ ತನಗೆ ಸಂಬಂಧವಿಲ್ಲದಂತೆ ಶಿಕ್ಷ ಣ ಇಲಾಖೆ ವರ್ತಿಸುತ್ತಿದೆ.

ಸರಕಾರಿ ಪ್ರೌಢಶಾಲೆಯಲ್ಲಿ ಒಟ್ಟು 77 ವಿದ್ಯಾರ್ಥಿಗಳು ಇದ್ದಾರೆ. ಗಂಡು ಮಕ್ಕಳು 31 ಮತ್ತು ವಿದ್ಯಾರ್ಥಿನಿಯರು 36 ಜನರು ಅಭ್ಯಾಸ ಮಾಡುತ್ತಿದ್ದಾರೆ. 6 ಸುಸಜ್ಜಿತ ಬೋಧನಾ ಕೋಣೆಗಳಿವೆ. ಕುಡಿಯುವ ನೀರು, ವಿಶಾಲವಾದ ಆಟದ ಮೈದಾನ ಸೇರಿದಂತೆ ಉತ್ತಮ ಪರಿಸರ ಇಲ್ಲಿದೆ. 2010ರಲ್ಲಿ ಗಣಿತ ಶಿಕ್ಷ ಕರ ವರ್ಗಾವಣೆ ಆಗಿದ್ದು, ಇದುವರೆಗೆ ಸರಕಾರ ಕಾಯಂ ಶಿಕ್ಷ ಕರನ್ನು ನೇಮಕ ಮಾಡಿಕೊಂಡಿಲ್ಲ.

ಇನ್ನೇನು 45 ದಿವಸಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭವಾಗಲಿವೆ. ಗಣಿತ ವಿಷಯದ ಅತಿಥಿ ಶಿಕ್ಷ ಕರ ಹುಡುಕಾಟದಲ್ಲಿ ಆರು ತಿಂಗಳು ಕಳೆದಿದೆ. ಈಗ ಇಲಾಖೆಗೆ ಜ್ಞಾನೋದಯವಾಗಿದೆ. ಮಕ್ಕಳ ಭವಿಷ್ಯ ರೂಪಿಸುವುದು ತಮ್ಮ ಕರ್ತವ್ಯ ಎಂದು ಹೇಳಿಕೆ ನೀಡುವ ಅಧಿಕಾರಿಗಳ ಸೋಮಾರಿತನದಿಂದಾಗಿ ಶಿಕ್ಷಣ ವ್ಯವಸ್ಥೆ ಹಳ್ಳ ಹಿಡಿದಿದೆ.

ಶಾಲೆ ಮುಖ್ಯಗುರುಗಳಿಗೆ ಮಕ್ಕಳ ಭವಿಷ್ಯಕ್ಕಿಂತ ಹುದ್ದೆ ಮುಖ್ಯವಾಗಿದೆ. ಗಣಿತ ಶಿಕ್ಷ ಕರ ಕೊರೆತಯಿಂದ ಮಕ್ಕಳ ಭವಿಷ್ಯ ಅತಂತ್ರದಲ್ಲಿದೆ.

ಶಾಲೆಗೆ ಬೀಗ

ಸೋಮವಾರದೊಳಗೆ ಜ. 7ರೊಳಗೆ ಗಣಿತ ವಿಷಯ ಶಿಕ್ಷ ಕರನ್ನು ನೇಮಕ ಮಾಡದಿದ್ದರೆ ಶಾಲೆಗೆ ಬೀಗ ಹಾಕುವುದಾಗಿ ಗ್ರಾಮಸ್ಥರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಮಕ್ಕಳ ಹಿತದೃಷ್ಟಿ ಕಾಪಾಡುವ ನಿಟ್ಟಿನಲ್ಲಿ ಇಲಾಖೆ ಕ್ರಮ ಕೈಗೊಳ್ಳದೆ ಇದ್ದಲ್ಲಿ ಪರಿಣಾಮ ಎದುರಿಸಬೇಕಾಗುವುದು ಎಂದು ಗ್ರಾಮದ ದೇವಿದಾಸ ವಿಶ್ವನಾಥ, ಫತ್ರೂಸಾಬ್‌ ಮತ್ತು ಸಂಗಶೆಟ್ಟಿ ಎಚ್ಚರಿಸಿದ್ದಾರೆ.

ಗಣಿತ ವಿಷಯದ ಅತಿಥಿ ಶಿಕ್ಷ ಕರ ನೇಮಕ ಮಾಡಿಕೊಳ್ಳಲು ಇಲಾಖೆ ಅದೇಶಿಸಿದೆ.ಆದರೆ ಇದುವರೆಗೆ ಶಿಕ್ಷ ಕರು ಮುಂದೆ ಬರದೆ ಇರುವುದರಿಂದ ವಿದ್ಯಾರ್ಥಿಗಳ ಅಭ್ಯಾಸಕ್ಕೆ ತೊಂದರೆ ಆಗುತ್ತಿದೆ.
-ವಾಗಂಭರ್‌ ಮುಖ್ಯಗುರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ