ಆ್ಯಪ್ನಗರ

ಸಾಹಿತ್ಯಕ್ಕೆ ಕುವೆಂಪು ಕೊಡುಗೆ ಅಮೋಘ:ಡಿಸಿ

ಕುವೆಂಪು ಅವರು ರಚಿಸಿದ ಕಾವ್ಯ, ಕಥೆ, ಕಾದಂಬರಿಯಲ್ಲಿ ಬಳಸಿದ ಭಾಷೆಯು ಅತ್ಯಂತ ಹೃದ್ಯವಾಗಿದೆ. ಬರೆಹದಲ್ಲಿ ಭಾಷೆಯನ್ನು ದುಡಿಸಿಕೊಳ್ಳುವ ವಿಷಯದಲ್ಲಿ ಕುವೆಂಪು ಅವರಿಗೆ ಕುವೆಂಪು ಅವರೇ ಸಾಟಿ ಎಂದು ಜಿಲ್ಲಾಧಿಕಾರಿ ಡಾ. ಹೆಚ್‌.ಆರ್‌. ಮಹಾದೇವ ಅವರು ತಿಳಿಸಿದರು.

Vijaya Karnataka 30 Dec 2018, 5:00 am
ಬೀದರ್‌ :ಕುವೆಂಪು ಅವರು ರಚಿಸಿದ ಕಾವ್ಯ, ಕಥೆ, ಕಾದಂಬರಿಯಲ್ಲಿ ಬಳಸಿದ ಭಾಷೆಯು ಅತ್ಯಂತ ಹೃದ್ಯವಾಗಿದೆ. ಬರೆಹದಲ್ಲಿ ಭಾಷೆಯನ್ನು ದುಡಿಸಿಕೊಳ್ಳುವ ವಿಷಯದಲ್ಲಿ ಕುವೆಂಪು ಅವರಿಗೆ ಕುವೆಂಪು ಅವರೇ ಸಾಟಿ ಎಂದು ಜಿಲ್ಲಾಧಿಕಾರಿ ಡಾ. ಹೆಚ್‌.ಆರ್‌. ಮಹಾದೇವ ಅವರು ತಿಳಿಸಿದರು.
Vijaya Karnataka Web great contribution to literature is great dc
ಸಾಹಿತ್ಯಕ್ಕೆ ಕುವೆಂಪು ಕೊಡುಗೆ ಅಮೋಘ:ಡಿಸಿ


ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆಯ ನಿಮಿತ್ತ ನಡೆದ ವಿಶ್ವ ಮಾನವ ದಿನಾಚರಣೆಯ ವೇಳೆ ಕುವೆಂಪು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

''ನಾನು ಸುಮಾರು 25 ವರ್ಷಗಳ ಹಿಂದೆಯೇ ಕುವೆಂಪು ಅವರು ರಚಿಸಿದ ಶ್ರೀ ರಾಮಾಯಣ ದರ್ಶನಂ ಕೃತಿಯನ್ನು ಓದಿದ್ದೆ ''ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡ ಅವರು, ಶ್ರೀ ರಾಮಾಯಣ ದರ್ಶನಂ ಕೃತಿಯಲ್ಲಿ ರಾಮ, ಸೀತೆ ಮತ್ತು ರಾವಣ ಸೇರಿದಂತೆ ವಿವಿಧ ಪಾತ್ರಗಳನ್ನು ಚಿತ್ರಿಸಿದ ರೀತಿ ಅತ್ಯಂತ ಮನೋಜ್ಞವಾಗಿದೆ ಎಂದು ತಿಳಿಸಿದರು.

ಆಳವಾದ ಓದು ಹಾಗೂ ಪ್ರಖರ ವಿಚಾರಧಾರೆಯ ಬರೆಹದಿಂದಾಗಿ ಕುವೆಂಪು ಅವರು ದೊಡ್ಡ ಸ್ಥಾನದಲ್ಲಿ ನಿಲ್ಲುತ್ತಾರೆ. ನಮ್ಮ ನಾಡಿನಲ್ಲಿ ಇಂತಹ ಸಾಹಿತಿಯೊಬ್ಬರು ಇದ್ದರು ಎಂಬುದು ನಿಜಕ್ಕೂ ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿ ಎಂದರು.

ಸಮಾರಂಭದಲ್ಲಿ ವಾರ್ತಾ ಇಲಾಖೆಯ ಅಧಿಕಾರಿ ಗವಿಸಿದ್ದಪ್ಪ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ