ಆ್ಯಪ್ನಗರ

ಕಾರಖಾನೆ ಪುನಾರಂಭ ಐತಿಹಾಸಿಕ ಪ್ರಯತ್ನ : ಬಂಡೆಪ್ಪ

ಬೀದರ್‌ ಸಹಕಾರಿ ಸಕ್ಕರೆ ಕಾರ್ಖಾನೆ ಪುನಾರಂಭವಾಗಿದ್ದು ಸಹಕಾರ ಕ್ಷೇತ್ರದಲ್ಲಿಯೇ ಒಂದು ಐತಿಹಾಸಿಕ ಪ್ರಯತ್ನ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಷೆಂಪುರ ತಿಳಿಸಿದರು.

Vijaya Karnataka 16 Jan 2019, 9:59 pm
ಬೀದರ್‌ :ಬೀದರ್‌ ಸಹಕಾರಿ ಸಕ್ಕರೆ ಕಾರ್ಖಾನೆ ಪುನಾರಂಭವಾಗಿದ್ದು ಸಹಕಾರ ಕ್ಷೇತ್ರದಲ್ಲಿಯೇ ಒಂದು ಐತಿಹಾಸಿಕ ಪ್ರಯತ್ನ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಷೆಂಪುರ ತಿಳಿಸಿದರು.
Vijaya Karnataka Web historical attempt to restart the arsenal rocket
ಕಾರಖಾನೆ ಪುನಾರಂಭ ಐತಿಹಾಸಿಕ ಪ್ರಯತ್ನ : ಬಂಡೆಪ್ಪ


ಕಾರ್ಖಾನೆಗೆ ಮಂಗಳವಾರ ಭೇಟಿ ನೀಡಿ, ಕಾರ್ಖಾನೆ ಆಡಳಿತ ಮಂಡಳಿ ಸದಸ್ಯರು ಹಾಗೂ ಕಾರ್ಮಿಕರು ಮತ್ತು ರೈತರೊಂದಿಗೆ ಸಭೆ ನಡೆಸಿ ಮಾತನಾಡಿದರು. ಕಾರ್ಖಾನೆ ಯಶಸ್ವಿಗೆ ಸಹಕರಿಸಿದ ಕಾರ್ಮಿಕರು ಮತ್ತು ರೈತರಿಗೆ ಅಭಿನಂದನೆಗಳು ಎಂದರು. ಕಾರ್ಖಾನೆಯ ದುರಸ್ತಿಗಾಗಿ ಕೆಲವು ಎಂಜಿನಿಯರಗಳು ಕೋಟಿಗಟ್ಟಲೆ ಹಣ ಕೇಳಿದರು. ಆದರೆ, ಇಲ್ಲಿನ ಕಾರ್ಮಿಕರು ಅತಿ ಕಡಿಮೆ ಹಣದಲ್ಲಿ ಕಾರ್ಖಾನೆ ಮಶಿನ್‌ಗಳನ್ನು ದುರಸ್ತಿಗೊಳಿಸಿ ಪುನಾರಂಭ ಮಾಡಿದರು. ಹಾಗಾಗಿ ಈ ಕಾರ್ಖಾನೆ ಆರಂಭದ ಮೊದಲ ಕ್ರೆಡಿಟ್‌ ಕಾರ್ಮಿಕರಿಗೆ ಸಲ್ಲಸಬೇಕು. ಹೀಗಾಗಿ ಕಾರ್ಮಿಕರಿಗೆ ವೇತನ ನೀಡುವ ಕೆಲಸ ಮೊದಲಾಗಬೇಕು ಎಂದರು. ಮೊದಲು ಹಣ ಕೊಡಿ ಎಂದು ಕೇಳದೆ ಕಾರ್ಖಾನೆಗೆ ಕಬ್ಬು ಪೂರೈಸುತ್ತಿರುವ ಜಿಲ್ಲೆಯ ರೈತರಿಗೆ ಎರಡನೇ ಕ್ರೆಡಿಟ್‌ ಸಲ್ಲಬೇಕು. ಈ ವೇಳೆ ರಾಜ್ಯ ಸರ್ಕಾರ, ಜಿಲ್ಲೆಯ ಸಚಿವರು ಹಾಗೂ ಶಾಸಕರು ಮತ್ತು ವಿಧಾನ ಪರಿಷತ್‌ ಸದಸ್ಯರು ಮತ್ತು ಇನ್ನಿತರ ಜನಪ್ರತಿನಿಧಿಗಳ ಸಹಕಾರವನ್ನು ಮರೆಯುವಂತಿಲ್ಲ ಎಂದು ಸಚಿವರು ಹೇಳಿದರು.

ಸಮ್ಮಿಶ್ರ ಸರ್ಕಾರ ರಚನೆಯಾದ ಒಂದು ವಾರದಿಂದಲೇ ಬಿಎಸ್‌ಎಸ್‌ಕೆ ಆರಂಭಿಸಬೇಕು ಎಂದು ಮತ್ತೆ ಪಟ್ಟು ಹಿಡಿದೆವು. ಪ್ರತಿ ಅಧಿವೇಶನದಲ್ಲಿ ಈ ವಿಷಯ ಚರ್ಚೆ ಆಗುವಂತೆ ಮಾಡಿದ ಕಾರ್ಖಾನೆಯ ಪುನಾರಂಭ ಹೋರಾಟ ದೊಡ್ಡದು ಎಂದು ತಿಳಿಸಿದರು. ಕಾರ್ಖಾನೆಗೆ ಕಬ್ಬು ಪೂರೈಸುವ ರೈತರ ಪ್ರತಿ ಟನ್‌ ಕಬ್ಬಿಗೆ ಈಗ ಸದ್ಯ ಮುಂಗಡವಾಗಿ 1900 ರೂ. ಪಾವತಿಸಬೇಕು ಎಂದು ಸಚಿವರು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದರು.

ಯಾವುದೇ ಕಾರಣಕ್ಕೂ ರೈತರು ಆತಂಕ ಪಡಬೇಕಾದ ಸ್ಥಿತಿ ಇಲ್ಲ. ಇನ್ನು ಕೂಡ ಸಮಯವಿದೆ. ರಾಜ್ಯ ಸರ್ಕಾರ ಮತ್ತು ತಾವು ಹಾಗೂ ಉಳಿದೆಲ್ಲ ಸಚಿವರು ನಿಮ್ಮ ಜೊತೆ ಇರುತ್ತೇವೆ ಎಂದು ಸಚಿವರು ಜಿಲ್ಲೆಯ ರೈತರಿಗೆ ಭರವಸೆ ನೀಡಿದರು.

ಸಚಿವ ರಾಜಶೇಖರ್‌ ಪಾಟೀಲ್‌ ಮಾತನಾಡಿ, ಬೀದರ್‌ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನಾರಂಭಕೋಸ್ಕರ ರಾಜ್ಯ ಸರಕಾರ 20 ಕೋಟಿ ರೂ.ಗೆ ಮಂಜೂರಾತಿ ನೀಡಿದೆ. ಆದರೆ, ಸದ್ಯಕ್ಕೆ 1 ಕೋಟಿ ರೂ ಬಿಡುಗಡೆಯಾಗಿ ಕಾರ್ಖಾನೆ ಆರಂಭವಾಗಿದ್ದು, ಈ ಭಾಗದ ರೈತರಲ್ಲಿ ಸಂತಸವನ್ನುಂಟು ಮಾಡಿದೆ ಎಂದು ತಿಳಿಸಿದರು. ತಾವು ಸುಮಾರು 46,000 ಕೋಟಿ ರೂ. ನಷ್ಟು ರೈತರ ಸಾಲ ಮನ್ನಾ ಮಾಡಿದ್ದೀರಿ. ಇದು ನಿಜಕ್ಕೂ ಒಳ್ಳೆಯ ಕೆಲಸ. ಜತೆಗೆ ನಮ್ಮ ಭಾಗದಲ್ಲಿ ರೈತರಿಗೆ ಉಸಿರಾದ ಬೀದರ್‌ ಸಹಕಾರಿ ಸಕ್ಕರೆ ಕಾರ್ಖಾನೆ ಪುನಾರಂಭಕ್ಕೆ 20 ಕೋಟಿ ರೂ. ಮುಖ್ಯಮಂತ್ರಿಗಳು ಒಪ್ಪಿ ಮಂಜೂರಾತಿ ನೀಡಿದ್ದಾರೆ. ಸರಕಾರದಿಂದ ಇನ್ನು ಬರಬೇಕಾದ 19 ಕೋಟಿ ರೂ. ಹಣ ಸರಿಯಾಗಿ ಸದುಪಯೋಗವಾಗಬೇಕು. ಇಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು ರೈತರಿಗೆ ವೇತನವನ್ನು ಕಾಲಕಾಲಕ್ಕೆ ಸರಿಯಾಗಿ ಪಾವತಿಯಾಗುವಂತೆ ನೋಡಿಕೊಳ್ಳಬೇಕು. ಸದ್ಯಕ್ಕೆ ಇಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಹಣ ಕೊಡದೇ ಇದ್ದರೂ ಅವರು ಕೆಲಸ ಮಾಡುತ್ತಿದ್ದಾರೆ. ಇದು ನಮ್ಮ ಗಮನದಲ್ಲಿರಬೇಕು ಎಂದು ಅವರು ಕಾರ್ಖಾನೆಯ ಮುಖ್ಯಸ್ಥರಿಗೆ ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಚಂದ್ರಶೇಖರ ಪಾಟೀಲ ಮತ್ತು ಆಡಳಿತ ಮಂಡಳಿ ಸದಸ್ಯರು, ಕಾರ್ಮಿಕರು ಮತ್ತು ರೈತರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ