ಆ್ಯಪ್ನಗರ

ಕೆಂಪು ಬಸ್‌ ಮುಖ ನೋಡದ ಜಮಖಂಡಿ ಜನ

1 ರಿಂದ 5ನೇ ತರಗತಿಯವರೆಗೆ ಕನ್ನಡ ಮಾಧ್ಯಮ ಶಾಲೆಯಿದ್ದರೂ ಇಬ್ಬರೇ ಮಕ್ಕಳು, ಒಬ್ಬರೇ ಶಿಕ್ಷಕರಿದ್ದಾರೆ. 2 ಕಿಮೀ ದೂರದಿಂದ ನೀರು ತರುವ ಈ ಗ್ರಾಮಸ್ಥರಿಗೆ ಬಸ್ಸಿನ ಸೌಕರ‍್ಯ ಇಂದಿಗೂ ಇಲ್ಲ. ಭಾಲ್ಕಿ ತಾಲೂಕಿನ ಕುಗ್ರಾಮ ಜಮಖಂಡಿಯ ಕಥೆಯಿದು. ತಾಲೂಕು ಕೇಂದ್ರ ಭಾಲ್ಕಿ 40 ಕಿಮೀ ಅಂತರದಲ್ಲಿದ್ದರೆ, ಮಹಾರಾಷ್ಟ್ರದ ಗಡಿಯು ಕೇವಲ ಒಂದೇ ಕಿಮೀ ಅಂತರದಲ್ಲಿರುವುದರಿಂದ ಈ ಗ್ರಾಮದಲ್ಲಿ ಸಂಪೂರ್ಣ ಮರಾಠಿಯದ್ದೇ ಪ್ರಭಾವ. ವ್ಯವಹಾರವೆಲ್ಲವೂ ಮರಾಠಿಯಲ್ಲೇ ನಡೆಯುತ್ತದೆ.

Vijaya Karnataka 20 Jun 2019, 5:00 am
ಭೀಮರಾವ್‌ ಬುರಾನಪುರ ಬೀದರ್‌:1 ರಿಂದ 5ನೇ ತರಗತಿಯವರೆಗೆ ಕನ್ನಡ ಮಾಧ್ಯಮ ಶಾಲೆಯಿದ್ದರೂ ಇಬ್ಬರೇ ಮಕ್ಕಳು, ಒಬ್ಬರೇ ಶಿಕ್ಷಕರಿದ್ದಾರೆ. 2 ಕಿಮೀ ದೂರದಿಂದ ನೀರು ತರುವ ಈ ಗ್ರಾಮಸ್ಥರಿಗೆ ಬಸ್ಸಿನ ಸೌಕರ‍್ಯ ಇಂದಿಗೂ ಇಲ್ಲ. ಭಾಲ್ಕಿ ತಾಲೂಕಿನ ಕುಗ್ರಾಮ ಜಮಖಂಡಿಯ ಕಥೆಯಿದು. ತಾಲೂಕು ಕೇಂದ್ರ ಭಾಲ್ಕಿ 40 ಕಿಮೀ ಅಂತರದಲ್ಲಿದ್ದರೆ, ಮಹಾರಾಷ್ಟ್ರದ ಗಡಿಯು ಕೇವಲ ಒಂದೇ ಕಿಮೀ ಅಂತರದಲ್ಲಿರುವುದರಿಂದ ಈ ಗ್ರಾಮದಲ್ಲಿ ಸಂಪೂರ್ಣ ಮರಾಠಿಯದ್ದೇ ಪ್ರಭಾವ. ವ್ಯವಹಾರವೆಲ್ಲವೂ ಮರಾಠಿಯಲ್ಲೇ ನಡೆಯುತ್ತದೆ.
Vijaya Karnataka Web jamakhandi people not seeing the red bus
ಕೆಂಪು ಬಸ್‌ ಮುಖ ನೋಡದ ಜಮಖಂಡಿ ಜನ


ವಾಂಜರಿಖೇಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಜಮಖಂಡಿ ಗ್ರಾಮದಲ್ಲಿ 1500 ಮತದಾರರಿದ್ದಾರೆ. ಐದು ಜನ ಗ್ರಾಪಂ ಸದಸ್ಯರಿದ್ದಾರೆ. ಬಹುತೇಕ ಎಲ್ಲರೂ ಕೃಷಿಯನ್ನೇ ನೆಚ್ಚಿಕೊಂಡಿದ್ದಾರೆ. ಗ್ರಾಮದಲ್ಲಿನ ರಸ್ತೆಗಳು ಸರಿ ಇಲ್ಲ. ಗ್ರಾಮಕ್ಕೆ ಬಸ್ಸಿನ ಸೌಕರ‍್ಯವೂ ಇಲ್ಲವೇ ಇಲ್ಲ. ಖಾಸಗಿ ವಾಹನಗಳಲ್ಲೇ ಇಲ್ಲಿನ ಜನತೆ ಪ್ರಯಾಣಿಸುವುದು ಅನಿವಾರ‍್ಯವೇ ಆಗಿದೆ. ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ಮಹಿಳೆಯರು ದೂರದ 2 ಕಿಮೀ ಅಂತರದಿಂದ ನೀರನ್ನು ತಲೆಯ ಮೇಲೆ ಹೊತ್ತು ತರುತ್ತಾರೆ.

ಕನ್ನಡ ಮಾಧ್ಯಮದ ಶಾಲೆಯಿದೆ. 1 ರಿಂದ 5ನೇ ತರಗತಿಯವರೆಗೆ ಪ್ರಾಥಮಿಕ ಶಾಲೆಯಲ್ಲಿ ಇಬ್ಬರೇ ಮಕ್ಕಳು ಪ್ರವೇಶ ಪಡೆದಿದ್ದು, ಒಬ್ಬರೇ ಶಿಕ್ಷಕರಿದ್ದಾರೆ. ಶಿಕ್ಷಕರು ಶಾಲೆಗೆ ಸಕಾಲಕ್ಕೆ ಬರುವುದಿಲ್ಲ. ಮಕ್ಕಳಂತೂ ಶಾಲೆಯತ್ತ ಬರುವುದೇ ಇಲ್ಲ ಅಂತಾರೆ ಗ್ರಾಮದ ಕಿಶೋರ ತೋಟಿ. ಇರುವ ಅಂಗನವಾಡಿ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ಅದರ ಪಕ್ಕವೇ ಮಕ್ಕಳು ಆಟವಾಡುತ್ತಾರೆ.

ಚುನಾವಣೆಗಳು ಇದ್ದಾಗ ಮಾತ್ರ ಜನಪ್ರತಿನಿಧಿಗಳು ನಮ್ಮ ಗ್ರಾಮಕ್ಕೆ ಬರುತ್ತಾರೆ. ಅದಾದ ಬಳಿಕ ಇತ್ತ ಯಾರೂ ಬರುವುದಿಲ್ಲ. ಹೀಗಾಗಿ, ನಮ್ಮ ಗ್ರಾಮವನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು. ಕರ್ನಾಟಕದಲ್ಲಿ ಇರುವುದರಿಂದ ಯಾವುದೇ ಲಾಭವಿಲ್ಲ ಎನ್ನುತ್ತಾರೆ ಗ್ರಾಮದ ಬಾಲಾಜಿ ಜಾಧವ್‌. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಯಾವುದೇ ಅಧಿಕಾರಿಗಳು ಸ್ಪಂದಿಸುವುದಿಲ್ಲ. ನೀರಿನ ಸಮಸ್ಯೆ ಸಾಕಷ್ಟಿದ್ದರೂ ಬಗೆಹರಿಸುತ್ತಿಲ್ಲ. ನಾವು ಅನಾಥರಾದಂತಾಗಿದ್ದೇವೆ ಎಂದು ದೂರಿದರು.

ಗ್ರಾಮದ ಹೆಸರು: ಜಮಖಂಡಿ


ತಾಲೂಕು: ಭಾಲ್ಕಿ

ತಾಲೂಕು ಕೇಂದ್ರದಿಂದ ಇರುವ ಅಂತರ: 40 ಕಿಮೀ

ಸರ್ವಋುತು ರಸ್ತೆ: ಇಲ್ಲ

ಶಾಲೆ: ಪ್ರಾಥಮಿಕ ಶಾಲೆ ಇದೆ


ಕರ್ನಾಟಕದಲ್ಲಿ ಇರುವುದರಿಂದ ನಮಗೆ ಯಾವುದೇ ಲಾಭವಿಲ್ಲ. ನಮಗೆ ಮಹಾರಾಷ್ಟ್ರ ಹತ್ತಿರವಿರುವುದರಿಂದ ಅಲ್ಲಿಗೆ ನಮ್ಮನ್ನು ಸೇರಿಸಿದರೆ ಎಲ್ಲದ್ದಕ್ಕೂ ಅನುಕೂಲವಾಗುತ್ತದೆ. ಯಾವುದಾದರೂ ಸರಕಾರಿ ಕೆಲಸವಿದ್ದರೆ ತಾಲೂಕು ಕೇಂದ್ರಕ್ಕೆ 40 ಕಿಮೀ ದೂರ ಹೋಗಬೇಕಾಗುತ್ತದೆ. ಗ್ರಾಮದಿಂದ ಒಂದೇ ಕಿಮೀ ಅಂತರದಲ್ಲಿ ಮಹಾರಾಷ್ಟ್ರದ ಗಡಿಯಿದೆ. ಅಲ್ಲಿ ನಮಗೆ ಸಾಕಷ್ಟು ಅನುಕೂಲಗಳಿವೆ.

- ಅದೀಮ್‌ ತಾಂಬೂಲ್‌, ಜಮಖಂಡಿ ಗ್ರಾಮಸ್ಥ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ