ಆ್ಯಪ್ನಗರ

ಜ್ಞಾನ ವೃದ್ಧಿಗೆ ಪುಸ್ತಕ ಗೆಳೆತನ ಬೆಳೆಸಿ

ಪುಸ್ತಕದ ಜತೆಗೆ ಗೆಳೆತನ ಮಾಡಿಕೊಂಡಲ್ಲಿ ಆದರ್ಶ ಜೀವನ ನಡೆಸಬಹುದಲ್ಲದೆ ಜ್ಞಾನ ಹೆಚ್ಚಿಸಿಕೊಳ್ಳಬಹುದು ಎಂದು ನಿವತ್ತ ಪ್ರಾಚಾರ್ಯ ಪ್ರೊ.ಎಸ್.ಬಿ.ಬಿರಾದಾರ್ ಸಲಹೆ ನೀಡಿದರು.

ವಿಕ ಸುದ್ದಿಲೋಕ 11 Mar 2016, 4:58 pm
ಬೀದರ್ : ಪುಸ್ತಕದ ಜತೆಗೆ ಗೆಳೆತನ ಮಾಡಿಕೊಂಡಲ್ಲಿ ಆದರ್ಶ ಜೀವನ ನಡೆಸಬಹುದಲ್ಲದೆ ಜ್ಞಾನ ಹೆಚ್ಚಿಸಿಕೊಳ್ಳಬಹುದು ಎಂದು ನಿವತ್ತ ಪ್ರಾಚಾರ್ಯ ಪ್ರೊ.ಎಸ್.ಬಿ.ಬಿರಾದಾರ್ ಸಲಹೆ ನೀಡಿದರು.
Vijaya Karnataka Web jna vrddhige pustaka geetana beesi
ಜ್ಞಾನ ವೃದ್ಧಿಗೆ ಪುಸ್ತಕ ಗೆಳೆತನ ಬೆಳೆಸಿ


ನಗರದ ಕರ್ನಾಟಕ ಕಾಲೇಜಿನಲ್ಲಿ ಪುಸ್ತಕ ಪ್ರೇಮಿ ವಿದ್ಯಾರ್ಥಿ ಬಳಗ ಹಾಗೂ ಕರ್ನಾಟಕ ಕಾಲೇಜು ಸ್ನಾತಕೋತ್ತರ ಕನ್ನಡ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಪ್ರಾಯೋಜಿತ ಕನ್ನಡ ಪುಸ್ತಕ ಪ್ರಾಧಿಕಾರದಿಂದ ನನ್ನ ಮೆಚ್ಚಿನ ಪುಸ್ತಕ ವಿದ್ಯಾರ್ಥಿ ಅಭಿಪ್ರಾಯ ಮಂಡನೆ ಸ್ಪರ್ಧಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ ಜತೆಗೆ, ನೈತಿಕ ಮೌಲ್ಯಗಳು ಪುಸ್ತಕ ಓದುವುದರಿಂದ ದೊರೆಯುತ್ತವೆ. ಸನ್ಮಾರ್ಗದಲ್ಲಿ ಬದುಕಲು ಮಾರ್ಗದರ್ಶನ ಕಾಣಬಹುದು ಎಂದರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ವಿ.ಜೂಜಾ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಪುಸ್ತಕ ಓದುವುದು ಅನಿವಾರ್ಯವಾಗಿದೆ. ಮನುಷ್ಯನು ಪರಿಪೂರ್ಣ ಜ್ಞಾನಿಯಾಗಲು ಪುಸ್ತಕಗಳ ಅಧ್ಯಯನ ಮಾಡಬೇಕೆಂದರು.

ಕರ್ನಾಟಕ ಬಾಲವಿಕಾಸ ಅಕಾಡೆಮಿ ಸದಸ್ಯ ಶಿವಕುಮಾರ ಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಧನಾತ್ಮಕ ಚಿಂತನೆ ಹಾಗೂ ಪರಿಪೂರ್ಣ ಗುರಿ ಸಾಧನೆಗೆ ಪುಸ್ತಕಗಳು ಸ್ನೇಹಿತರಾಗಿ ಪಾತ್ರ ನಿರ್ವಹಿಸುತ್ತವೆ ಎಂದರು.

ಕನ್ನಡ ಸ್ನಾತಕೋತ್ತರ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಜಗನ್ನಾಥ ಹೆಬ್ಬಾಳೆ ಪ್ರಾಸ್ತಾವಿಕ ಮಾತನಾಡಿದರು.

ಆಂಗ್ಲ ವಿಭಾಗದ ಮುಖ್ಯಸ್ಥ ಪ್ರೊ.ಉಮಾಕಾಂತ ಪಾಟೀಲ್, ನನ್ನ ಮೆಚ್ಚಿನ ಪುಸ್ತಕ ವಿದ್ಯಾರ್ಥಿ ಅಭಿಪ್ರಾಯ ಮಂಡನೆ ಕುರಿತ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಾದ ಅಂಬಿಕಾ ಪ್ರಥಮ, ಆಶಾಕಿರಣ ದ್ವಿತೀಯ ಹಾಗೂ ಗಂಗಮ್ಮ ಅವರಿಗೆ ತತೀಯ ಬಹುಮಾನ ನೀಡಿ ಗೌರವಿಸಲಾಯಿತು.

ಪುಸ್ತಕ ಪ್ರೇಮಿ ವಿದ್ಯಾರ್ಥಿ ಬಳಗದ ಅಧ್ಯಕ್ಷ ರಾಜಕುಮಾರ ಬಸಯ್ಯ ಸ್ವಾಮಿ ಸ್ವಾಗತಿಸಿದರು. ಪ್ರಾಧ್ಯಾಪಕಿ ಸುರೇಖಾ ಬಿರಾದಾರ ನಿರೂಪಿಸಿದರು. ಮಹಾದೇವಿ ವಡಗಾವೆ ವಂದನೆ ಸಲ್ಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ