ಆ್ಯಪ್ನಗರ

ಮೈತ್ರಿಕೂಟಕ್ಕೆ ಬಹುಮತ ಬಂದರೆ ಖರ್ಗೆ ಪ್ರಧಾನಿ: ಶಾಸಕ ಬಿಆರ್‌ ಪಾಟೀಲ್‌ ಹೇಳಿಕೆ

Lok Sabha Elections 2024: ವಿರೋಧ ಪಕ್ಷಗಳ ಐಎನ್‌ಡಿಐಎ ಮೈತ್ರಿಕೂಟದ ಕಡೆಗೆ ದೇಶಾದ್ಯಂತ ಒಲವು ವ್ಯಕ್ತವಾಗುತ್ತಿದೆ. ಮೈತ್ರಿಕೂಟಕ್ಕೆ ಬಹುಮತ ದೊರಕಿದರೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಆಗುತ್ತಾರೆ ಎಂದು ಶಾಸಕ ಹಾಗೂ ಮುಖ್ಯಮಂತ್ರಿಗಳ ಸಲಹೆಗಾರ ಬಿಆರ್ ಪಾಟೀಲ್ ಅವರು ಹೇಳಿದ್ದಾರೆ.

Edited byಅಮಿತ್ ಎಂ.ಎಸ್ | Vijaya Karnataka 3 Apr 2024, 10:35 am

ಹೈಲೈಟ್ಸ್‌:

  • ಬೀದರ್ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಪರ ಪ್ರಚಾರ
  • ಐಎನ್‌ಡಿಐಎ ಮೈತ್ರಿಕೂಟಕ್ಕೆ ಬಹುಮತ ಬಂದರೆ ಖರ್ಗೆ ಪ್ರಧಾನಿಯಾಗುತ್ತಾರೆ
  • ಭಗವಂತ ಖೂಬಾ ಬರಿ ಮೋದಿ ಹೆಸರು ಹೇಳಿಕೊಂಡು ಗೆದ್ದಿದ್ದಾರೆ ಎಂದ ಖಂಡ್ರೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web br patil
ಆಳಂದ ಶಾಸಕ ಬಿಆರ್ ಪಾಟೀಲ್(ಸಂಗ್ರಹ ಚಿತ್ರ)
ಆಳಂದ: ಕಳೆದ 10 ವರ್ಷಗಳಿಂದಲೂ ಆಡಳಿತ ನಡೆಸಿದ ಬಿಜೆಪಿ ಎಲ್ಲ ಹಂತಗಳಲ್ಲಿಯೂ ವೈಫಲ್ಯವಾಗಿದ್ದು, ಬರೀ ವಿಪಕ್ಷಗಳ ಮೇಲೆ ಸೇಡಿನ ರಾಜಕಾರಣ ಮಾಡುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ದೇಶದೆಲ್ಲೆಡೆ ಐಎನ್‌ಡಿಐಎ ಮೈತ್ರಿಕೂಟದ ಕಡೆಗೆ ಒಲವು ಕಂಡುಬರುತ್ತಿದ್ದು ಬಹುಮತ ಬಂದರೆ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿಯಾಗುತ್ತಾರೆ ಎಂದು ಸಿಎಂ ಸಲಹೆಗಾರ, ಶಾಸಕ ಬಿ.ಆರ್‌. ಪಾಟೀಲ್‌ ಹೇಳಿದರು.
ಪಟ್ಟಣದ ಎ.ವಿ ಪಾಟೀಲ್‌ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಬೀದರ್‌ ಕಾಂಗ್ರೆಸ್‌ ಅಭ್ಯರ್ಥಿ ಸಾಗರ ಖಂಡ್ರೆ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ರಾಜ್ಯಕ್ಕೆ ನೀಡುವ ಅನುದಾನ ಮತ್ತು ತೆರಿಗೆ ಹಣ ನೀಡುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ದೂರಿದರು.
ನಾನು ರಾಷ್ಟ್ರ ರಾಜಕಾರಣದಲ್ಲಿ ಆಸಕ್ತ, ಹೈಕಮಾಂಡ್ ಟಿಕೆಟ್ ನೀಡಿದರೆ ಬೀದರ್ ನಿಂದ ಸ್ಪರ್ಧಿಸುವೆ: ಬಿ ಆರ್ ಪಾಟೀಲ್

ಬೀದರ ಕಾಂಗ್ರೆಸ್‌ ಅಭ್ಯರ್ಥಿ ಸಾಗರ ಖಂಡ್ರೆ ಮಾತನಾಡಿ, ಈ ಬಾರಿ ಕಾಂಗ್ರೆಸ್‌ ಪಕ್ಷದವರು ಯುವಕನಿಗೆ ಟಿಕೆಟ್‌ ನೀಡಿದ್ದು, ಎಲ್ಲೆಡೆ ಉತ್ತಮ ವಾತಾವರಣವಿದೆ ಎಂದರು.

ಈ ಬಾರಿ ರಾಜ್ಯದಲ್ಲಿ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿಯೂ ಕಾಂಗ್ರೆಸ್‌ ಪರ ಗಾಳಿ ಬೀಸುತ್ತಿದೆ , ಬೀದರ್‌ ಎಂಪಿ ಭಗವಂತ ಖೂಬಾ ಆಡಳಿತ ನೋಡಿದ್ದಾಗಿದೆ, ಇವರ ಅವಧಿಯಲ್ಲಿ ಯಾವ ಹೇಳಿಕೊಳ್ಳುವಂತಹ ಕಾರ್ಯಗಳು ಮಾಡಿಲ್ಲ. ಬರೀ ಮೋದಿ ಹೆಸರು ಹೇಳಿ ಆಯ್ಕೆಯಾಗಿದ್ದಾರೆ. ಜನರ ಸಮಸ್ಯೆಗಳಿಗೂ ಸ್ಪಂದನೆ ಮಾಡದ ಅವರನ್ನು ಸೋಲಿಸಿ , ಯುವ ನಾಯಕ ಸಾಗರ ಖಂಡ್ರೆ ಇವರನ್ನು ಗೆಲ್ಲಿಸಬೇಕು ಎಂದು ಅರಣ್ಯ ಮತ್ತು ಪರಿಸರ ಸಚಿವ ಹಾಗೂ ಅಭ್ಯರ್ಥಿ ಸಾಗರ್ ಖಂಡ್ರೆ ಅವರ ತಂದೆ ಈಶ್ವರ ಖಂಡ್ರೆ ಮನವಿ ಮಾಡಿದರು.

ಪೌರಾಡಳಿತ ಸಚಿವ ರಹಿಂ ಖಾನ್ ಮಾತನಾಡಿದರು. ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ, ಬೀದರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಸವರಾಜ ಜಾಬಶಟ್ಟಿ, ಕಲಬುರಗಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ, ಜಿಪಂ ಮಾಜಿ ಸದಸ್ಯ ಸಿದ್ದರಾಮ ಪ್ಯಾಟಿ ಮಾತನಾಡಿದರು.
ಚುನಾವಣೆ ಹೊಸ್ತಿಲಲ್ಲಿ ಆಪರೇಷನ್‌ ಕಮಲ? ಕಾಂಗ್ರೆಸ್‌ ಶಾಸಕ ಬಿ ಆರ್‌ ಪಾಟೀಲ್‌ಗೆ ಬಿಜೆಪಿಯಿಂದ ಗಾಳ!

ಪ್ರಮುಖರಾದ ರಾಜಶೇಖರ ಪಾಟೀಲ್‌, ಗುರುಶರಣ ಪಾಟೀಲ್‌, ಆರ್‌.ಕೆ.ಪಾಟೀಲ್‌, ಸೋಮಶೇಖರ ಗೋನಾಯಕ, ಶರಣು ಸಲಗರ, ದಯಾನಂದ ಶೇರಿಕಾರ, ಮಲ್ಲಿನಾಥ ಪಾಟೀಲ್‌, ಆನಂದ ದೇಶಮುಖ, ಶರಣಗೌಡ ಪಾಟೀಲ್‌, ಅಶೋಕ ಸಾವಳೇಶ್ವರ, ದತ್ತರಾಜ ಗುತ್ತೇದಾರ, ಸಿದ್ರಾಮಪ್ಪ ಪಾಟೀಲ್‌, ಶಿವಪುತ್ರಪ್ಪ ಪಾಟೀಲ್‌, ಬಸವರಾಜ ಪವಾಡಶಟ್ಟಿ, ಬಾಬು ಹೊನ್ನಾನಾಯಕ, ಸೈಯದ ಮಜರಹುಸೇನ, ಬಾಬುರಾವ ಅರೂಣೋದಯ, ಸಂಜಯ ನಾಯಕ, ಗುರುಲಿಂಗಜಂಗಮ ಪಾಟೀಲ್‌, ದಿಲೀಪ್‌ ಕ್ಷೀರಸಾಗರ, ಕನ್ನಿರಾಮ ರಾಠೋಡ, ನಾಗೇಂದ್ರ ಥಂಬೆ, ಲಿಂಗರಾಜ ಪಾಟೀಲ್‌ , ಈರಣ್ಣಾ ಝಳಕಿ ಇದ್ದರು.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ