ಆ್ಯಪ್ನಗರ

ಮಹರ್ಷಿ ವಾಲ್ಮೀಕಿ ಮಹಾನ್‌ ತಪಸ್ವಿ

ಮಹರ್ಷಿ ವಾಲ್ಮೀಕಿ ಅವರು ಮಹಾನ್‌ ತಪಸ್ವಿಗಳು ಹಾಗೂ ಶ್ರೇಷ್ಠರು. ಅವರ ಸಾಧನೆ ಹಾಗೂ ತ್ಯಾಗದಿಂದಲೇ ನಮಗೆಲ್ಲಾಇತಿಹಾಸದ ಅರಿವಾಗಿದೆ ಎಂದು ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ ಹೇಳಿದರು.

Vijaya Karnataka 14 Oct 2019, 5:00 am
ಬೀದರ್‌:ಮಹರ್ಷಿ ವಾಲ್ಮೀಕಿ ಅವರು ಮಹಾನ್‌ ತಪಸ್ವಿಗಳು ಹಾಗೂ ಶ್ರೇಷ್ಠರು. ಅವರ ಸಾಧನೆ ಹಾಗೂ ತ್ಯಾಗದಿಂದಲೇ ನಮಗೆಲ್ಲಾಇತಿಹಾಸದ ಅರಿವಾಗಿದೆ ಎಂದು ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ ಹೇಳಿದರು.
Vijaya Karnataka Web maharishi valmiki is a great ascetic
ಮಹರ್ಷಿ ವಾಲ್ಮೀಕಿ ಮಹಾನ್‌ ತಪಸ್ವಿ


ನಗರದ ರಂಗಮಂದಿರದಲ್ಲಿಜಿಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿಭಾನುವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಾಲ್ಮೀಕಿಯವರ ಕಾಯಕ ವಿಶ್ವಕ್ಕೆ ಮಾದರಿಯಾಗಿದೆ. ಮನುಷ್ಯ ಉತ್ತಮ ನಾಗಕರಿಕನಾಗಲು ಮಹರ್ಷಿ ವಾಲ್ಮೀಕಿಯವರ ಜೀವನ ನಮಗೆ ಪ್ರೇರಣೆ ನೀಡುತ್ತದೆ. ಸಮಾಜದ ಜನರೆಲ್ಲರೂ ಮಹರ್ಷಿಗಳ ತತ್ವಾದರ್ಶಗಳನ್ನು ಪಾಲಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ರಹಿಂ ಖಾನ್‌ ಮಾತನಾಡಿ, ಮಹರ್ಷಿ ವಾಲ್ಮೀಕಿ ವಿಶ್ವಕ್ಕೆ ಪರಿಚಯವಿರುವ ಶ್ರೇಷ್ಠರು. ಸಮಾಜದ ಜನರು ಪ್ರಯೋಜನವಿಲ್ಲದ ಮನೋರಂಜನೆ ಕಾರ‍್ಯಕ್ರಮಗಳಿಗೆ ಹೋಗುವ ಬದಲು ಇಂತಹ ಕಾರ‍್ಯಕ್ರಮಗಳಿಗೆ ಬಂದು ಮಹಾತ್ಮರ ಕುರಿತು ಅರಿಯಬೇಕು ಎಂದು ಸಲಹೆ ನೀಡಿದರು.

ದೇವರು ಪ್ರತಿಯೊಂದು ಸ್ಥಳದಲ್ಲೂನೆಲೆಸಿದ್ದಾನೆ ಎನ್ನುವುದನ್ನು ಜನರು ಅರಿತರೆ, ಯಾವುದೇ ತಪ್ಪುಗಳು ಆಗುವುದಿಲ್ಲ. ಆದರೆ, ನಮ್ಮ ಜನ ದೇವರು ಮಠ, ಮಂದಿರ, ಮಸೀದಿಗಳಲ್ಲೇ ಇದ್ದಾನೆ ಎಂದು ಅಲ್ಲಿಗೆ ಹೋಗಿ ನಮಿಸುತ್ತಾರೆ. ಅಲ್ಲಿಂದ ಹೊರ ಬಂದ ಬಳಿಕ ದೇವರನ್ನು ಮರೆಯುತ್ತಾರೆ. ದೇವರು ಎಲ್ಲೆಡೆ ಇದ್ದಾನೆ ಎಂಬ ಭಯ, ಭಕ್ತಿಯಿಂದ ನಡೆದುಕೊಳ್ಳಬೇಕು ಎಂದು ತಿಳಿಸಿದರು.

ಜಿಪಂ ಉಪಾಧ್ಯಕ್ಷ ಲಕ್ಷತ್ರ್ಮಣರಾವ್‌ ಬುಳ್ಳಾ ಮಾತನಾಡಿ, ಮಹರ್ಷಿ ವಾಲ್ಮೀಕಿಯವರು ವಿಶ್ವಕ್ಕೆ ಗುರುವಾಗಿದ್ದಾರೆ. ಅವರು ರಾಮಾಯಣ ಮಹಾಕಾವ್ಯದ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ನುಡಿದರು.

ಜಿಲ್ಲಾಧಿಕಾರಿ ಡಾ. ಎಚ್‌.ಆರ್‌. ಮಹದೇವ್‌, ಸಮಾಜದ ಜಗನ್ನಾಥ ಜಮಾದಾರ್‌, ಸುನೀಲ್‌ ಭಾವಿಕಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ್‌ ಸಿಂಧೆ ಮತ್ತಿತರರು ಇದ್ದರು.

ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿಯಿಂದ ರಂಗ ಮಂದಿರದ ವರೆಗೆ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಮೆರವಣಿಗೆಗೆ ಮೆರಗು ತಂದವು. ಸಮಾಜದ ನೂರಾರು ಜನರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ