ಆ್ಯಪ್ನಗರ

ಬಿಜೆಪಿ ಸರಕಾರದಲ್ಲಿ ಎಲ್ಲದಕ್ಕೂ ರೇಟ್‌ ಫಿಕ್ಸ್‌: ಮಲ್ಲಿಕಾರ್ಜುನ ಖರ್ಗೆ

​​ಮಂತ್ರಿ, ಸಿಎಂ ಮಾಡಲು ನೂರಾರು ಕೋಟಿ ರೂ ನೀಡಬೇಕಾಗುತ್ತದೆ ಎಂದು ಅವರದೇ ಪಕ್ಷದ ಶಾಸಕರು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಮಠ ಮಾನ್ಯಗಳಿಗೂ ಅನುದಾನ ನೀಡಲು ಶೇ.30 ಗುತ್ತಿಗೆದಾರರ ಕೆಲಸಕ್ಕೆ ಶೇ.40 ಕಮಿಷನ್‌ ಪಡೆಯುತ್ತಿರುವ ಬಗ್ಗೆ ಆರೋಪ ಕೇಳಿ ಬರುತ್ತಿವೆ.

Vijaya Karnataka Web 8 May 2022, 10:41 pm
ಭಾಲ್ಕಿ /ಕಮಲನಗರ (ಬೀದರ್‌): ರಾಜ್ಯ ಮತ್ತು ದೇಶದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸಮಾಜದಲ್ಲಿ ಒಡಕು ಮೂಡಿಸುವ ಪ್ರಯತ್ನ ನಡೆಯುತ್ತಿದೆ.ಇನ್ನಾದರೂ ಜನತೆ ಎಚ್ಚೆತ್ತುಕೊಳ್ಳದಿದ್ದರೇ ಮುಂದೆ ದೇಶಕ್ಕೆ ಉಳಿಗಾಲವಿಲ್ಲ ಎಂದು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
Vijaya Karnataka Web ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ


ಭಾಲ್ಕಿ ಪಟ್ಟಣದ ಹುಮನಾಬಾದ್‌ ರಸ್ತೆಯ ಪ್ರಯಾಗ್‌ ಫಂಕ್ಷನ್‌ ಹಾಲ್‌ನಲ್ಲಿ ತಾಲೂಕು ಕಾಂಗ್ರೆಸ್‌ ಪಕ್ಷದ ವತಿಯಿಂದ ಭಾನುವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರಕಾರದಲ್ಲಿ ಎಲ್ಲದಕ್ಕೂ ರೇಟ್‌ ಫಿಕ್ಸ್‌ ಮಾಡಲಾಗಿದೆ ಎಂದರು.

ಜನ ಈಗಲೂ ಎಚ್ಚೆತ್ತುಕೊಳ್ಳದಿದ್ದರೇ ದೇಶಕ್ಕೆ ಉಳಿಗಾಲವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಮಂತ್ರಿ, ಸಿಎಂ ಮಾಡಲು ನೂರಾರು ಕೋಟಿ ರೂ ನೀಡಬೇಕಾಗುತ್ತದೆ ಎಂದು ಅವರದೇ ಪಕ್ಷದ ಶಾಸಕರು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಮಠ ಮಾನ್ಯಗಳಿಗೂ ಅನುದಾನ ನೀಡಲು ಶೇ.30 ರಷ್ಟು ಮತ್ತು ಗುತ್ತಿಗೆದಾರರ ಕೆಲಸಕ್ಕೆ ಶೇ.40 ರಷ್ಟು ಕಮಿಷನ್‌ ಪಡೆಯುತ್ತಿರುವ ಬಗ್ಗೆ ಬಲವಾಗಿ ಆರೋಪ ಕೇಳಿ ಬರುತ್ತಿವೆ. ಹೀಗಾದರೇ ರಾಜ್ಯದ ಪರಿಸ್ಥಿತಿಗೆ ಹೇಗೆ ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.


ಧರ್ಮದ ಹೆಸರಿನಲ್ಲಿ ರಾಜಕೀಯ ಸಲ್ಲದು

ಕಮಲನಗರ: ಧರ್ಮದ ಹೆಸರಿನಲ್ಲಿ ರಾಜಕೀಯ ಸರಿಯಲ್ಲ. ಬುದ್ದ, ಬಸವ ಮತ್ತು ಅಂಬೇಡ್ಕರ್‌ ಅವರ ನಾಡಿನಲ್ಲಿಸರ್ವ ಧರ್ಮಗಳ ಸಮಾನತೆ, ಸಾಮಾಜಿಕ ಬದ್ದತೆ ಮತ್ತು ಪ್ರೀತಿ ವಿಶ್ವಾಸದಿಂದ ಬದುಕು ಕಾಣುತ್ತಿದ್ದಾರೆ. ಅಂತಹ ವ್ಯಕ್ತಿಗಳು ಸಮಾಜಕ್ಕೆ ಕಂಟಕರಾಗುತ್ತಾರೆ.ಸಮಾಜದಲ್ಲಿವಿಷ ಬೀಜ ಬಿತ್ತುವ ಯಾವುದೇ ಪಕ್ಷವನ್ನು ಬೆಂಬಲಿಸಬೇಡಿ ಎಂದು ರಾಜ್ಯ ಸಭೆ ಪ್ರತಿಪಕ್ಷದ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ತಾಲೂಕಿನ ಬಳತ (ಬ) ಗ್ರಾಮದಲ್ಲಿ ಭಾನುವಾರ ಡಾ.ಬಿ.ಆರ್‌.ಅಂಬೇಡ್ಕರ್‌ ಯುವಕ ಸಂಘ ಮತ್ತು ಭಾರತೀಯ ಬೌದ್ದ ಮಹಾಸಭೆ ವತಿಯಿಂದ ಗೌತಮ ಬುದ್ದ ಮೂರ್ತಿ ಪ್ರತಿಷ್ಠಾಪನೆ ಮತ್ತು ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಅವರು, ಸಮಾನ ಮನಸ್ಕ ಮತ್ತು ಸರ್ವ ಧರ್ಮಗಳನ್ನು ಸಮಾನತೆಯಿಂದ ಕಾಣುವ ಪಕ್ಷಗಳಿಗೆ ಬೆಂಬಲಿಸುವ ಮೂಲಕ ಭವ್ಯ ಸಂಸ್ಕೃತಿ ಉಳಿಸಬೇಕಿದೆ ಎಂದರು.

ಭಾಲ್ಕಿ: ಕಾಂಗ್ರೆಸ್‌ ಮುಕ್ತಗೊಳಿಸಲು 'ಭಗವಂತ' ಸಂಕಲ್ಪ

ಮುಂಬರುವ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಕ್ಷೇತ್ರದ 41 ಸ್ಥಾನಗಳ ಪೈಕಿ ಕನಿಷ್ಠ 35 ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ.ರಾಜ್ಯದಲ್ಲಿ ವಿವಿಧ ಇಲಾಖೆ ಸೇರಿ ಕೇಂದ್ರದ ರೈಲ್ವೆ, ಕಾರ್ಮಿಕ ಇಲಾಖೆ ಸಚಿವರಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೂ ರೈಲ್ವೆ ಯೋಜನೆ, 371 (ಜೆ) ತಿದ್ದುಪಡಿ ಸೇರಿ ಮಹತ್ವದ ಯೋಜನೆ ಕೊಟ್ಟಿದ್ದಾರೆ ಅಂಥವರು, ನಮ್ಮ ತಾಲೂಕಿನಲ್ಲಿ ಜನ್ಮತಾಳಿ ಕಲಬುರಗಿ ಸೇರಿ ದೇಶಕ್ಕೆ ಹೆಮ್ಮೆ ಪಡಯುವ ನಾಯಕರಾಗಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ