ಆ್ಯಪ್ನಗರ

ಮನೆ ತ್ಯಾಜ್ಯ ಸಂಗ್ರಹಿಸಲು ಮುಂದಾದ ಮಂಠಾಳ ಗ್ರಾ.ಪಂ.

ಹಳ್ಳಿಗಳಲ್ಲೂ ಇನ್ನೂ ಮುಂದೆ ಮನೆಯಲ್ಲಿನ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವಂತಿಲ್ಲ. ಇದಕ್ಕೆ ಬ್ರೇಕ್‌ ಹಾಕಲು ಬಸವಕಲ್ಯಾಣ ತಾಲೂಕು ಪಂಚಾಯಿತಿ ಹೊಸ ಪ್ರಾಜೆಕ್ಟ್ ಜಾರಿಗೆ ತರಲು ಮುಂದಾಗಿದೆ.

Vijaya Karnataka 30 May 2019, 4:41 pm
ಗಣಪತಿ ಬಿ. ಹರಕೂಡೆ ಬಸವಕಲ್ಯಾಣ :ಹಳ್ಳಿಗಳಲ್ಲೂ ಇನ್ನೂ ಮುಂದೆ ಮನೆಯಲ್ಲಿನ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವಂತಿಲ್ಲ. ಇದಕ್ಕೆ ಬ್ರೇಕ್‌ ಹಾಕಲು ಬಸವಕಲ್ಯಾಣ ತಾಲೂಕು ಪಂಚಾಯಿತಿ ಹೊಸ ಪ್ರಾಜೆಕ್ಟ್ ಜಾರಿಗೆ ತರಲು ಮುಂದಾಗಿದೆ.
Vijaya Karnataka Web manthala gram panchayat to raise house waste
ಮನೆ ತ್ಯಾಜ್ಯ ಸಂಗ್ರಹಿಸಲು ಮುಂದಾದ ಮಂಠಾಳ ಗ್ರಾ.ಪಂ.


ಈ ಸಂಬಂಧ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಹಾಗೂ ಸ್ವಚ್ಛತೆ ಕುರಿತು ಗ್ರಾಮೀಣ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಇಲ್ಲಿನ ತಾಲೂಕು ಪಂಚಾಯಿತಿ ಪೈಲಟ್‌ ಪ್ರಾಜೆಕ್ಟ್ ಕೈಗೆತ್ತಿಕೊಂಡಿದೆ.

ಗ್ರಾಮೀಣ ಭಾಗದಲ್ಲಿರುವ ಮನೆಗಳಲ್ಲಿನ ಘನ, ದ್ರವ, ಹಸಿ ಹಾಗೂ ಒಣಗಿದ ತ್ಯಾಜ್ಯ ವಿಲೇವಾರಿಗೆ ಇಲ್ಲಿನ ತಾಲೂಕು ಪಂಚಾಯಿತಿ ಪ್ರಾಜೆಕ್ಟ್ ಅನ್ವಯ ತ್ಯಾಜ್ಯ ಸಾಗಾಣಿಕೆ ವಾಹನವನ್ನು ಆಯ್ದ ಗ್ರಾಮ ಪಂಚಾಯಿತಿಗಳಿಗೆ ಖರೀದಿಸಲು ಸೂಚಿಸಿದೆ.

ಮೊದಲ ಹಂತದಲ್ಲಿಯೇ ಮಂಠಾಳ ಗ್ರಾಮ ಪಂಚಾಯಿತಿ ತನ್ನ 14ನೇ ಹಣಕಾಸು ಯೋಜನೆಯಡಿ ವಾಹನ ಖರೀದಿಸಿದೆ. ಜೂನ್‌ ಮೊದಲನೇ ವಾರದಲ್ಲಿ ಈ ಪ್ರಾಜೆಕ್ಟ್ಗೆ ಅಧಿಕೃತವಾಗಿ ಚಾಲನೆ ನೀಡಲು ಅಧಿಕಾರಿಗಳು ಸಿದ್ಧತೆ ಕೈಗೊಂಡಿದ್ದಾರೆ. ತ್ಯಾಜ್ಯ ಸಾಗಾಣಿಕೆ ವಾಹನ ಖರೀದಿಸಿದ ತಾಲೂಕಿನ ಮೊದಲ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆ ಮಂಠಾಳ ಗ್ರಾಮದ್ದಾಗಿದೆ ಎಂದು ಬಸವಕಲ್ಯಾಣ ತಾಲೂಕು ಪಂಚಾಯತ್‌ ವ್ಯವಸ್ಥಾಪಕ ಜಯಪ್ರಕಾಶ್‌ ಚವಾಣ್‌ ತಿಳಿಸಿದ್ದಾರೆ.

ಪೈಲೆಟ್‌ ಪ್ರಾಜೆಕ್ಟ್ನಲ್ಲಿ ಮಂಠಾಳ, ಸಸ್ತಾಪುರ, ಚಂಡಕಾಪುರ, ಮುಡಬಿ ಮತ್ತು ಹಣಮಂತವಾಡಿ (ಆರ್‌) ಈ ಐದು ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಈ ಕುರಿತು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಶೀಘ್ರವೇ ಈ ಪ್ರಾಜೆಕ್ಟ್ಗೆ ಮಂಜೂರಾತಿ ಸಿಗಲಿದೆ. ಈ ಮಾರ್ಗದರ್ಶಿ ಯೋಜನೆ ಯಶಸ್ಸು ಸಾಧಿಸಿದರೆ ಮುಂದಿನ ದಿನಗಳಲ್ಲಿ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಈ ಯೋಜನೆ ಜಾರಿತೆ ತರುವುದಾಗಿ ತಾಪಂ ಇಒ ಪಿ.ಎಸ್‌. ಮಡೋಳಪ್ಪ ಹೇಳಿದ್ದಾರೆ.

ಜೂ. 5ರಂದು ವಿಶ್ವ ಪರಿಸರ ದಿನಾಚರಣೆ ಹಾಗೂ ಸ್ವಚ್ಛ ಭಾರತ್‌ ಮಿಷನ್‌ ನಿಮಿತ್ತ ಜೂ.1-31ರ ವರೆಗೆ 'ಸ್ವಚ್ಛಮೇವ ಜಯತೆ ಆಂದೋಲನ' ಕ್ಕೆ ತಾಲೂಕು ಮತ್ತು ಗ್ರಾಮ ಪಂಚಾಯತಿಗಳ ಹಂತದಲ್ಲಿ ಚಾಲನೆ ನೀಡಲಿದ್ದೇವೆ. ಇದರ ಒಂದು ಭಾಗವಾಗಿ ಈ ಪೈಲೆಟ್‌ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಾಪಂ ಇಒ ತಿಳಿಸಿದ್ದಾರೆ.

ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ, ಸ್ವಚ್ಛತೆ ಹಾಗೂ ಪ್ಲಾಸ್ಟಿಕ್‌ ನಿಷೇಧ ಕುರಿತು ಗ್ರಾಮೀಣ ಜನರಲ್ಲಿ ಅರಿವು ಮೂಡಿಸುವುದು ಈ ಪ್ರಾಜೆಕ್ಟ್ನ ಉದ್ದೇಶಗಳಲ್ಲಿ ಒಂದಾಗಿದೆ.

-ಪಿ.ಎಸ್‌. ಮಡೋಳಪ್ಪ, ತಾಪಂ ಇಒ, ಬಸವಕಲ್ಯಾಣ

ಪೈಲೆಟ್‌ ಪ್ರಾಜೆಕ್ಟ್ನಲ್ಲಿ ನಮ್ಮ ಗ್ರಾಮ ಪಂಚಾಯಿತಿ ಆಯ್ಕೆಯಾಗಿದ್ದು ಸಂತಸ ತಂದಿದೆ. ವಿಶ್ವ ಪರಿಸರ ದಿನದಂದು ಗ್ರಾಮದ ಪ್ರತಿ ವಾರ್ಡ್‌ಗೂ ಓರ್ವ ತ್ಯಾಜ್ಯ ಸಂಗ್ರಾಹಕರನ್ನು ನೇಮಿಸಿ ಮನೆ-ಮನೆಗಳಿಂದ ತ್ಯಾಜ್ಯವನ್ನು ಸಂಗ್ರಹಿಸಿ ಒಂದೆಡೆ ತಂದು ಸುರಿಯಲಾಗುವುದು.ನಂತರ ತ್ಯಾಜ್ಯ ಸಂಗ್ರಾಹಕ ವಾಹನ (ಕಚರಾ ಗಾಡಿ)ದ ಮೂಲಕ ಬೇರಡೆ ಸಾಗಿಸಲಾಗುವುದು.

-ಎ.ಕೆ. ಆನಂದ್‌, ಮಂಠಾಳ ಗ್ರಾಪಂ ಪಿಡಿಒ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ