ಆ್ಯಪ್ನಗರ

ಗುಟ್ಕಾ ಜಗಿಯುತ್ತ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ನೋಟಿಸ್ ಕೊಟ್ಟ ಸಚಿವ ಪ್ರಭು ಚವ್ಹಾಣ್

ಇಂದು (ಬುಧವಾರ) ಜಿಲ್ಲೆಯ ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ಪಶು ಸಂಗೋವನಾ ಖಾತೆ ಸಚಿವ ಪ್ರಭು ಚೌವ್ಹಾಣ್ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆ ಪರಿಶೀಲಿಸಿದರು.

Vijaya Karnataka Web 25 Sep 2019, 2:16 pm
ಬೀದರ್: ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಪಶು ಸಂಗೋಪನಾ ಖಾತೆ ಸಚಿವ ಪ್ರಭು ಚವ್ಹಾಣ್, ಗುಟ್ಕಾ ಜಗಿಯುತ್ತಾ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ನೋಟಿಸ್ ನೀಡಲು ಸೂಚಿಸಿದ್ದಾರೆ.
Vijaya Karnataka Web 1


ಇಂದು (ಬುಧವಾರ) ಬೆಳಗ್ಗೆ ಸಚಿವ ಪ್ರಭು ಚೌವ್ಹಾಣ್ ಅವರು ಬಸವಕಲ್ಯಾಣದ ಸರಕಾರಿ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು. ಆಸ್ಪತ್ರೆಯ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ, ಮಾಹಿತಿ ಪಡೆದರು.

ಮದ್ಯ ಸೇವಿಸಿ, ಗುಟ್ಕಾ ತಿಂದು ಬಂದ ಸಿಬ್ಬಂದಿಗೆ ಗೇಟ್ ಪಾಸ್ ಕೊಟ್ಟ ಸಚಿವ ಪ್ರಭು ಚವ್ಹಾಣ್

ಈ ಸಂದರ್ಭದಲ್ಲಿ ಗುಟ್ಕಾ ಜಗಿಯುತ್ತಾ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಹಾಗೂ ಸಮಯಕ್ಕೆ ಸರಿಯಾಗಿ ಕಚೇರಿಗೆ ಹಾಜರಾಗದವರಿಗೆ ನೋಟಿಸ್ ಜಾರಿ ಮಾಡುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.


ಪ್ರತಿದಿನ ಪರಿಶೀಲಿಸಿ

ಔಷಧಿ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿದ ಸಚಿವರು, ಅವಧಿ ಮುಗಿದ ಔಷಧ ವಿತರಿಸದಂತೆ ನೋಡಿಕೊಳ್ಳಬೇಕು. ಪ್ರತಿದಿನ ಬೆಳಗ್ಗೆ ಔಷಧಿ ಪರಿಶೀಲಿಸುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಕರ್ತವ್ಯಕ್ಕೆ ಗೈರಾಗಿದ್ದ ಸಿಬ್ಬಂದಿ ಅಮಾನತು ಮಾಡಿದ ಸಚಿವ ಪ್ರಭು ಚವ್ಹಾಣ್

ಶುಚಿತ್ವಕ್ಕೆ ಆದ್ಯತೆ ಕೊಡಿ

ಆಸ್ಪತ್ರೆ ಆವರಣದ ವಿವಿಧೆಡೆ ಸುತ್ತಾಡಿದ ಸಚಿವರು, ಅಲ್ಲಲ್ಲಿ ಬಿದ್ದಿದ್ದ ಕಸ ನೋಡಿ ಅಸಮಾಧಾನ ವ್ಯಕ್ತಪಡಿಸಿದರು. ಸ್ವಚ್ಚತೆಗೆ ಆದ್ಯತೆ‌ ನೀಡಿವಂತೆ ಹೇಳಿ, ಆಸ್ಪತ್ರೆಯ ಆವರಣ ಶುಚಿಗೊಳಿಸಲು 10 ದಿನಗಳ ಗಡುವು ವಿಧಿಸಿದರು. ಗ್ರೂಪ್ ಡಿ ಸಿಬ್ಬಂದಿ ಕಡಿಮೆ ಇರುವುದರಿಂದ ತುಸು ತೊಂದರೆಯಾಗಿದೆ. ಕೂಡಲೇ ಆಸ್ಪತ್ರೆಯ ಸ್ವಚ್ಚತೆಗೆ ಗಮನ ಕೊಡುವುದಾಗಿ ವೈದ್ಯಾಧಿಕಾರಿಗಳು ತಿಳಿಸಿದರು.


ಬಡ ಜನರಿಗೆ ಉತ್ತಮ ಸೇವೆ

ಬಡಜನರಿಗೆ ಆರೋಗ್ಯ ಸೇವೆ ಸರಿಯಾಗಿ ಸಿಗಬೇಕು ಎಂಬುದು ನಮ್ಮ ಉದ್ದೇಶ. ಬಡ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಕೊಡಲು ಕಾಳಜಿ ವಹಿಸಬೇಕು. ಎಲ್ಲರೂ ಸರಿಯಾದ ವೇಳೆಗೆ ಕಚೇರಿಗೆ ಬರಬೇಕು ಎಂದು ಸಚಿವರು ಎಲ್ಲ ವೈದ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಆಗಾಗ ಭೇಟಿ ಕೊಡಿ

ಹೆರಿಗೆ ಕೋಣೆಗೆ ಭೇಟಿ ನೀಡಿದ ಸಚಿವರು, ಅಲ್ಲಿನ ವ್ಯವಸ್ಥೆ ಪರಿಶೀಲಿಸಿದರು. ಆಸ್ಪತ್ರೆಗೆ ಆಗಾಗ ಭೇಟಿ ನೀಡಿ ಇಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸುವಂತೆ ಸಚಿವರು ತಹಸೀಲ್ದಾರ ಅವರಿಗೆ ಸೂಚಿಸಿದರು.

ಬೇಡಿಕೆ ಪಟ್ಟಿ ಕೊಡಿ

ಅಧಿಕಾರಿ ಮತ್ತು ಸಿಬ್ಬಂದಿ ಕೊರತೆ ಸರಿಪಡಿಸುವುದು, ಕಂಪೌಂಡ್ ಸೇರಿದಂತೆ ಆಸ್ಪತ್ರೆ ಸುಧಾರಣೆಗೆ ಬೇಕಾದ ಬೇಡಿಕೆಗಳ ಪಟ್ಟಿ ಸಲ್ಲಿಸುವಂತೆ ಸಚಿವರು ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದೆ. ರಾಜೇಶ್ವರ ಸೇರಿದಂತೆ ಇನ್ನು ಕೆಲವು ಕಡೆಗಳಲ್ಲಿ ಆಂಬ್ಯುಲೆನ್ಸ್ ಬೇಕಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದರು. ತಾಲೂಕಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳವಾರು ಬೇಡಿಕೆ ಪಟ್ಟಿ ಸಲ್ಲಿಸುವಂತೆ ಸಚಿವರು ತಿಳಿಸಿದರು.

ಈ ವೇಳೆ ಮುಖ್ಯ ವೈದ್ಯಾಧಿಕಾರಿ ಡಾ.ಅಪರ್ಣಾ, ತಾಲೂಕು ವೈದ್ಯಾಧಿಕಾರಿ ಡಾ.ಶರಣಪ್ಪ ಮುಡಬಿ, ಡಾ.ನಾಗರಾಜ, ಡಾ.ಗಿರೀಶ ಹಾಗೂ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ